ವಿದ್ಯುತ್ ಮಾಪಕವನ್ನು 5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳಲು ಜೆಸ್ಕಾಂನಿಂದ ಸೂಚನೆ

ವಿದ್ಯುತ್ ಮಾಪಕವನ್ನು 5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳಲು ಜೆಸ್ಕಾಂನಿಂದ ಸೂಚನೆ Gescom instructs to install electricity meters at a height of 5 feet

ವಿದ್ಯುತ್ ಮಾಪಕವನ್ನು 5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳಲು ಜೆಸ್ಕಾಂನಿಂದ ಸೂಚನೆ 

ಬಳ್ಳಾರಿ 16: ಬಳ್ಳಾರಿ ನಗರ ಉಪವಿಭಾಗ-1 ಜೆಸ್ಕಾಂ ವ್ಯಾಪ್ತಿಯಲ್ಲಿ ಕಂಪನಿಯ ನಿಯಮಾನುಸಾರ ಎಲ್ಲಾ ಸ್ಥಾವರದಲ್ಲಿರುವ ಮೀಟರ್‌ಗಳನ್ನು ಆಪ್ಟಿಕಲ್ ಪ್ರೋಬ್ ಡಿವೈಸ್ ಮೂಲಕವೇ ರೀಡಿಂಗ್ ಮಾಡಬೇಕಾಗಿದ್ದು, ವಿದ್ಯುತ್ ಗ್ರಾಹಕರು ತಮ್ಮ ಸ್ಥಾವರದ ವಿದ್ಯುತ್ ಮಾಪಕವನ್ನು ಕಡ್ಡಾಯವಾಗಿ ನೆಲದಿಂದ 5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯುತ್ ಮಾಪಕಗಳು ಗೋಚರಿಸುವ ಹಾಗೂ ಓದಲು ಅನುಕೂಲವಾಗುವ ಸ್ಥಳದಲ್ಲಿ ಇರಬೇಕು. ಮೀಟರ್ ಓದುವವರಿಗೆ ಸ್ಥಳವಿಲ್ಲದಿದ್ದಲ್ಲಿ ಸ್ಥಳ ಒದಗಿಸುವ ಹಾಗೆ ಅ.25 ರೊಳಗಾಗಿ ಅಳವಡಿಸಿಕೊಳ್ಳಬೇಕು.ಈ ನಿಯಮ ಪಾಲನೆ ಮಾಡದಿದ್ದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.