ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿದ್ಯಾರ್ಥಿಗಳಿಗಾಗಿ ಲಿಂಗ ತಾರತಮ್ಯ ಮತ್ತು ಎನ.ಎಸ್‌.ಎಸ್‌. ತಿಳುವಳಿಕೆ ಕಾರ್ಯಕ್ರಮ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿದ್ಯಾರ್ಥಿಗಳಿಗಾಗಿ ಲಿಂಗ ತಾರತಮ್ಯ ಮತ್ತು ಎನ.ಎಸ್‌.ಎಸ್‌. ತಿಳುವಳಿಕೆ ಕಾರ್ಯಕ್ರಮ Gender Discrimination and NSS Awareness Program for Akkamahadevi Women's University Students

ತಾಳಿಕೋಟಿ 29:  ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ,ಉನ್ನತ ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಕರ್ನಾಟಕ ಸರ್ಕಾರ, ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ. ಎನ್‌.ಎಸ್‌.ಎಸ್‌.ಕೋಶ.ಪಿಜಿ.’ಬಿ’ಯುಜಿ’ಎ’ಮತ್ತು ’ಬಿ’ಘಟಕಗಳು ಹಾಗೂ ಎಸ್‌.ಎಸ್‌.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಎಚ್‌.ಎಸ್‌.ಪಾಟೀಲ ಮಹಿಳಾ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, ತಾಳಿಕೋಟಿ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಲಿಂಗ ತಾರತಮ್ಯ ಮತ್ತು ಎನ.ಎಸ್‌.ಎಸ್‌. ತಿಳುವಳಿಕೆ ಕಾರ್ಯಕ್ರಮ ಬುಧವಾರ  ಸಂಗಮೇಶ್ವರ ಸಬಾಭವನದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಶಿಕ್ಷಕಿ ಶೃತಿ ಪತ್ತಾರ ಮತ್ತು ಮಹಾವಿದ್ಯಾಲಯದ ಪ್ರಾರ್ಥನೆ ಗೀತೆ ಹಾಡಿದರು.

ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಡಾ:ಕಲಾವತಿ. ಕಾಂಬಳೆ.ಎನ್‌.ಎಸ್‌.ಎಸ್‌.ಕಾರ್ಯಕ್ರಮ ಅಧಿಕಾರಿಗಳು. ಕ.ರಾ.ಅ.ಮ.ವಿ.ವಿಜಯಪುರ. ಉದ್ಘಾಟನೆಯನ್ನು ವೇದಿಕೆಯಲ್ಲಿರುವ ಗಣ್ಯರು ಸಸಿಗೆ ನೀರು ಹಾಕುವುದರ ಮೂಲಕ ಉದ್ಗಾಟಿಸಿದರು. ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಉಪನ್ಯಾಸಕ.ಪಿ.ಎಂ.ಚಲವಾದಿ ಉಪನ್ಯಾಸಕರು.ಕನ್ನಡ ವಿಭಾಗ ವೇದಿಕೆಯ ಗಣ್ಯರನ್ನು ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮ ವೇದಿಕೆಯಲ್ಲಿ ಡಾ:ಅಬಿದಾ ಬೇಗಂ ನಿರ್ದೇಶಕರು , ದೈಹಿಕ ಶಿಕ್ಷಣ ಮತ್ತು ರಾಜ್ಯ ಸಂಯೋಜಕರು ಜಿ.ವಿ.ಎಸ್‌.ಪಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ,ಟಿ ದಾಸರಹಳ್ಳಿ, ಬೆಂಗಳೂರು. ಸಿಸ್ಟರ್‌.ದೋರಥಿ ಪರ್ನಾಂಡಿಸ್‌.

ಕಾರ್ಯಕ್ರಮದ ಅಧಿಕಾರಿಗಳು, ಸಮಾಜ ಕಾರ್ಯ ಸೇವಾ ಸದನ ಸಮಾಜ ಕಲ್ಯಾಣ ಕೇಂದ್ರ ಮುದ್ದೇಬಿಹಾಳ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಎಸ್‌.ಎಸ್‌.ವಿದ್ಯಾಸಂಸ್ಥೆಯ ಯುವ ಕಣ್ಮನಿ ಸಚಿನ.ಎಚ್‌.ಪಾಟೀಲರು ವಹಿಸಿದ್ದರು. ಪ್ರಾಚಾರ್ಯರಾದ ಡಾ:ಎಚ್‌.ಬಿ.ನಡುವಿನಕೇರಿ. ಡಾ:ಅಮರನಾಥ. ಪ್ರಜಾಪತಿ. ಡಾ:ಭಾಗ್ಯಶ್ರೀ ದೊಡಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಡಾ:ಭಾಗ್ಯಶ್ರೀ ದೊಡಮನಿ ನಿರೂಪಿಸಿದರು. ಡಾ:ಅಮರನಾಥ . ಪ್ರಜಾಪತಿ ವಂದಿಸಿದರು.ಕಾರ್ಯಾಗಾರದಲ್ಲಿ ಮಹಿಳಾ ಕಾಲೇಜಿನ ಉಪನ್ಯಾಸಕರುಗಳಾದ ಸುರೇಶ. ಪಾಟೀಲ.ಆರ್‌.ಆರ್‌.ಬಡಗಣ.   ಗಾಯತ್ರಿ. ಪತ್ತಾರ. ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.