ಸಮುದ್ರ ಮಂಥನ ವಿಷ್ಣು ಅವತಾರದಲ್ಲಿ ಮೇದಾರ ಓಣಿಯ ಗಣೇಶ
Ganesha of Medara Oni in the avatar of Vishnu, the churning of the ocean
ಸಮುದ್ರ ಮಂಥನ ವಿಷ್ಣು ಅವತಾರದಲ್ಲಿ ಮೇದಾರ ಓಣಿಯ ಗಣೇಶ
ರಾಣೇಬೆನ್ನೂರು 28 : ಇಲ್ಲಿನ ಶಿವಶರಣ ಮೇದಾರ ಕೇತೇಶ್ವರ ಯುವಕ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಅತ್ಯಂತ ಸ್ಪರ್ಧಾತ್ಮಕ ಮತ್ತು ಸರಳವಾಗಿ ತಮ್ಮ ವೃತ್ತಿ ಕೌಶಲ್ಯತೆಗೆ ಬಳಸುವ ಪರಿಪೂರ್ಣ ಬಿದಿರಿನಲ್ಲಿ ತಮ್ಮ ಕೌಶಲ್ಯತೆ ಮೆರೆದು ಮಹಾಮಂಟಪವನ್ನು ನಿರ್ಮಿಸಿ ಮತ್ತಷ್ಟು ಸಾಧನೆಯಲ್ಲಿ ತೊಡಗಿ ಜನಾಕರ್ಷಣೆಗೆ ಮುಂದಾಗಿದ್ದಾರೆ.
ಈ ಸಾರಿ ಸಮುದ್ರ ಮಂಥನ ರೂಪಕದಲ್ಲಿ ಆಮೆಯ ಮೇಲೆ ವಿಷ್ಣು ಅವತಾರದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ವಾಣಿಜ್ಯ ನಗರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ, ಮೇದಾರ ಓಣಿಯ ಈ ಮಂಥನ ಗಣೇಶನನ್ನು ನೋಡಲು, ನಾಡಿನ ಜನತೆ ಹರಿದು ಬರುವುದು ಸಾಮಾನ್ಯ ಸಂಗತಿಯಾಗಲಿದೆ ಮತ್ತಷ್ಟು ವಿಶೇಷ ಸಾಧನೆಗೆ ಮುಂದಾಗಿದ್ದು, ಪ್ರಸಂಸನೀಯ.
ಈ ಸಂದರ್ಭದಲ್ಲಿ ಸಮಾಜದ ಉಪಾಧ್ಯಕ್ಷ ಮಂಜುನಾಥ ಕೆ.ಗುಡದಳ್ಳಿ, ಗಜಾನನ ಸಮಿತಿ ಅಧ್ಯಕ್ಷ ರವಿ ಬಿ ಮೇದಾರ, ಸಮಾಜದ ಅಧ್ಯಕ್ಷ ಲಕ್ಷ್ಮಣ್ ಅಮರೇಶಪ್ಪ ಗುಡದಳ್ಳಿ, ಮಾಜಿ ಅಧ್ಯಕ್ಷ ಕೃಷ್ಣಪ್ಪ ಗುಡದಳ್ಳಿ,ಕಾರ್ಯದರ್ಶಿ ರಾಘವೇಂದ್ರ ಕೆ. ಅಬ್ಬಿಗೇರಿ, ಕೋಶಾಧ್ಯಕ್ಷ ರಾಘವೇಂದ್ರ ಎಸ್ ಅಬ್ಬಿಗೇರಿ, ಪದಾಧಿಕಾರಿಗಳಾದ ಕೃಷ್ಣಪ್ಪ ಗುಡದಳ್ಳಿ, ಶ್ರೀಕಾಂತ ಗುಡಿಗೇರಿ, ಟಿ. ಈಶ್ವರ್, ಕರಬಸಪ್ಪ ಚಳಗೇರಿ, ಮಂಜುನಾಥ ನಾಣಿಕೇರಿ, ಹನುಮಂತಪ್ಪ ಗುಡಿಗೇರಿ, ದುರಗಪ್ಪ ಬಜ್ಜಿ, ಅಲಂಕಾರ ಕೌಶಲ್ಯದ ಗಂಗಾಧರ ಗುಡಗೇರಿ, ಹರೀಶ್ ಬಾದರದಂಡಿ ಸೇರಿದಂತೆ, ಸಮಾಜದ ಮುಖಂಡರು ಯುವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 