ಹೆಸರು ಬದಲಿಸಿ ಮತ್ತೊಮ್ಮೆ ಗಾಂಧಿ ಹತ್ಯೆ- ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆರೋಪ

ಹೆಸರು ಬದಲಿಸಿ ಮತ್ತೊಮ್ಮೆ ಗಾಂಧಿ ಹತ್ಯೆ- ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆರೋಪ Gandhi was assassinated again by changing his name - District In-charge Minister Shivraj Thangadi a

            ಕೊಪ್ಪಳ 11: ದೇಶದ ದುಡಿಯುವ ವರ್ಗಕ್ಕೆ ಉದ್ಯೋಗವನ್ನು ಕಲ್ಪಿಸಿದ್ದ ಯುಪಿಎ ಸರ್ಕಾರದ ಮಹತ್ವಕಾಂಕ್ಷೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಗೆ ಮೋದಿ ನೇತೃತ್ವದ ಎನ್ ಡಿಎ  ಸರ್ಕಾರ ಹೆಸರು ಬದಲಾವಣೆ ಮತ್ತು ಕಾಯ್ದೆ ತಿದ್ದುಪಡಿ ಮೂಲಕ ಮೊತ್ತೊಮ್ಮೆ ಮಹಾತ್ಮ ಗಾಂಧೀಜಿ ಅವರನ್ನು ಕೊಲೆಗೈದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೆಸರಿನ ಬದಲಾವಣೆಯಲ್ಲಿ ಆರ್ ಎಸ್ ಎಸ್ ನ ಸಿದ್ದಾಂತವು ಅಡಗಿದೆ, ದೇಶದ ದುಡಿಯುವ ವರ್ಗಕ್ಕೆ ಇದರಿಂದ  ಅನ್ಯಾಯವಾಗಿದ್ದು,  ನರೇಗಾ ದಿಂದ ಬಡವರನ್ನು ವಂಚಿತರನ್ನಾಗಿ ಮಾಡುತ್ತಿದೆ,

            ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯನ್ನು ವಿಕಸಿತ ಭಾರತ ಜೀ ರಾಮ್ ಜೀ ಎಂದು ಬದಲಾವಣೆ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ, ಇಡೀ ದೇಶದ್ಯಾಂತ ಬೃಹತ್ ಚಳುವಳಿಯನ್ನು ನಡೆಸಲಾಗುವುದು ಎಂದರು. ಯುಪಿಎ ಸರ್ಕಾರ ಹಲವು ಜನಪ್ರಿಯ ಯೋಜನೆ ಹಾಗೂ ಕಾಯ್ದೆಗಳನ್ನು ಜಾರಿಗೆ ತಂದಿತ್ತು, ಅದರಿಂದ ದೇಶದ ಜನರಿಗೆ ಹಕ್ಕು ನೀಡಿತ್ತು, ಬಿಜೆಪಿ ಸರ್ಕಾರ ಈವರೆಗೂ ಒಂದು ಹೊಸ ಯೋಜನೆಗಳನ್ನು ಜಾರಿಗೆ ತಮದಿಲ್ಲ, ಆದರೆ ಈ ಹಿಂದಿನ ಯುಪಿಎ ಸರ್ಕಾರದ ಕಾರ್ಯಕ್ರಮಗಳ ಹೆಸರನ್ನು ಬದಲವಣೆ ಮಾಡುತ್ತಿದೆ ಹಾಗೂ ಜನಪರ ಯೋಜನೆಗಳನ್ನು ಕಡಿತಗೊಳಿಸುವ ಮೂಲಕ ದೇಶದ ಬಡವರ ಕಲ್ಯಾಣ ಕೈಬಿಟ್ಟಿದೆ ಇದೊಂದು ಬಂಡವಾಳ ಶಾಹಿ, ಕಾರ್ಫೂರೇಟ್ ರ ಪರ ಸರ್ಕಾರವಾಗಿದೆ ಎಂದು ದೂರಿದರು. ಮಹಾತ್ಮಾ ಗಾಂಧಿ ಅವರ ಹೆಸರಿನ ಯೋಜನೆಯನ್ನು ತೆಗೆದು-ಬದಲಾವಣೆ ಮಾಡುವ  ಮೂಲಕ ಬಿಜೆಪಿಯು ಗಾಂಧೀಜಿಯವರನ್ನು ಅವರನ್ನು ಎರಡನೇ ಬಾರಿ ಹತ್ಯೆ ಮಾಡುವ ಕೆಲಸ ಮಾಡಿದೆ.  

              ನರೇಗಾದಿಂದ ಬಡವರು ಬದುಕು ಕಟ್ಟಿಕೊಂಡಿದ್ದಾರೆ,  ಹೆಸರು ಮತ್ತು ಕಾಯ್ದೆ ಬದಲಾವಣೆ ಮಾಡಿರುವ ಮೋದಿ ಸರ್ಕಾರ ದುಡಿಯುವ ವರ್ಗಕ್ಕೆ ಮಾಡುತ್ತಿರುವ ದ್ರೋಹ ಆಗಿದೆ. ಬರಗಾಲ ಸಮಯದಲ್ಲಿ ಕರ್ನಾಟಕದ ಜನರಿಗೆ ಒಳ್ಳೆಯ ಯೋಜನೆ ಇದಾಗಿತ್ತು, ಇವಾಗ ಅವರ ಬದುಕಿಗೆ ಬೆಂಕಿ ಇಡುವ ಕೆಲಸ ಮಾಡಿದೆ ಎಂದು ಅಪಾದಿಸಿದರು. ಕೇಂದ್ರದ ಜನವಿರೋಧಿ ಆಡಳಿತದ ವಿರುದ್ಧ ಜನ ಎಚ್ಚತ್ತುಕೊಳ್ಳಬೇಕು,ಇಲ್ಲದಿದ್ದರೆ ನಿರಂತರ ಅನ್ಯಾಯಕ್ಕೆ ಒಲಗಾಗಬೇಕಾಗುತ್ತದೆ, ಬಿಜೆಪಿ ಮತ್ತು ಆರ್ ಎಸ್ ಎಸ್ ನ ಧೋರಣಗಳನ್ನು ತಡೆಗಟ್ಟಲು ಜನ ಜಾಗೃತಿ ಮಾಡುತ್ತೇವೆ, ಬಿಜೆಪಿಯವರದ್ದು ಬರೀ ಸುಳ್ಳು ಹೇಳುವುದು ಸುಳ್ಳಿನ ಮೂಲಕ ಜನರನ್ನು ಮೋಸಗೊಳಿಸುವುದಾಗಿದೆ,

              ಉದ್ಯೋಗದ ಹಕ್ಕು ಕಸಿದುಕೊಳ್ಳುವ ಕೇಂದ್ರದ ವಿರುದ್ಧ ಇಡೀ ದೇಶದ್ಯಾಂತ ಆಂದೋಲ ನಡೆಸಲಿದೆ ಎಂದು ಹೇಳಿದರುಬಿಜೆಪಿ ಮತ್ತು ಆರ್ ಎಸ್ ಎಸ್ ಅವರಿಗೆ ಮಹಾತ್ಮ ಗಾಂಧಿ ಅವರನ್ನು ಎಂದು ಒಪ್ಪಿಕೊಂಡಿಲ್ಲ, ಸದಾ ಅವರನ್ನು ವಿರೋಧಿಸುವ ಇವರು ದೇಶದ ಜನರಿಗೆ ಉದ್ಯೋಗದ ಭರವಸೆ ನೀಡುವ ಕಾಯ್ದೆಯನ್ನು ಬದಲಾವಣೆ ಮಾಡುವ ಮೂಲಕ ಗಾಂಧೀಜಿ ಅವರನ್ನು ಹೆಸರನ್ನು ತೆಗೆದು  ವಿಕಸಿತ ಭಾರತ ಜೀ ರಾಮ್ ಜೀ ಎಂದು ಮಾಡಿದ್ದಾರೆ, ಇದರ ವಿರುದ್ಧ ನಮ್ಮ ಹೋರಾಟ ಪ್ರಬಲವಾದ ಪ್ರತಿಭಟನೆ ಹಂತ ಹಂತವಾಗಿ ಮುಂದುವರರೆಸುತ್ತೇವೆ, ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುತ್ತವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ರಾಜ್ಯ ಮಹಿಳಾ ಮುಖಂಡರಾದ ಶೈಲಜಾ ಹಿರೇಮಠ, ಕಿಶೋರಿ ಬೂದನೂರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ಸೇರಿದಂತೆ ಇತರರು ಇದ್ದರು.