ಗಾಂಧಿ ಬಳಗದಿಂದ ಜಾತ್ರೆಯಲ್ಲಿ ಮೂರು ದಿನ ಸ್ವಚ್ಛತಾ ಕಾರ್ಯ
Gandhi Balanga conducts three-day cleanliness drive at the fair
ಕೊಪ್ಪಳ 08: ನಗರದ ಶ್ರೀ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗಾಂಧಿ ಬಳಗ ಕೊಪ್ಪಳ ಅವರು ಜನೆವರಿ 6,7,8-2025 ರಂದು ಮೂರು ದಿನಗಳ ಕಾಲ ಗವಿಸಿದ್ಧೇಶ್ವರ ಮಠದ ಬಲಭಾಗದ ಬೆಟ್ಟ ಹಾಗೂ ಪ್ರಸಾದಕ್ಕೆ ಹೋಗುವ ಮಾರ್ಗವನ್ನು ಸ್ವಚ್ಛ ಗೊಳಿಸುವ ಕಾರ್ಯವನ್ನು ಮೂರು ದಿನಗಳಿಂದ, ಕಳೆದ ಮೂರು ವರ್ಷಗಳಂತೆ ಈ ವರ್ಷವೂ ಮಾಡಿದ್ದಾರೆ.
ಪ್ರತಿ ನಿತ್ಯ ಶಿಸ್ತಿನಿಂದ ಐದು ಗಂಟೆಗೆ ಬಂದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ಸ್ವಚ್ಛತಾ ಕಾರ್ಯ ಮುಗಿದ ಮೇಲೆ ಧ್ಯಾನ, ಭಜನ್ ಹಾಗೂ ಗಾಂಧಿ ಚಿಂತನ ಮಾಡಿ ಗಾಂಧಿ ಬಳಗ ಕೊಪ್ಪಳ ಸದಸ್ಯರು ನಿರ್ಗಮಿಸುತ್ತಿದ್ದರು.
ಮೂರು ದಿನಗಳ ಗಾಂಧಿ ಚಿಂತನವನ್ನು ಕ್ರಮವಾಗಿ ನಾಗರಾಜನಾಯಕ ಡಿ.ಡೊಳ್ಳಿನ, ವಿರೇಶ ಮೇಟಿ, ಡಾ.ಪ್ರಭುರಾಜನಾಯಕ ಮಾಡಿದರೆ ನಿರೂಪಣೆಯನ್ನು ಪ್ರಕಾಶಗೌಡ, ಪ್ರಾಣೇಶ ಪೂಜಾರ, ಶಿವಪ್ಪ ಜೋಗಿ ಮಾಡಿದರು.
ಮೂರು ದಿನಗಳ ಸ್ವಚ್ಛತಾ ಕಾರ್ಯದಲ್ಲಿ ಶರಣಪ್ಪ ಬಾಚಲಾಪುರ, ಆನಂದತೀರ್ಥ ಪ್ಯಾಟಿ, ಬಸವರಾಜ ಸವಡಿ, ಮಲ್ಲಪ್ಪ ಹವಳೆ, ಗುರುಸ್ವಾಮಿ, ಹೊಳಿಬಸಯ್ಯ, ವಿರೇಶ ಕೌಂಟಿ, ಅಂದಪ್ಪ ಬೋಳರೆಡ್ಡಿ, ಸತೀಶ ದನಗಳದೊಡ್ಡಿ, ಮಂಜುನಾಥ ಕುದುರಿ,ಗುರುರಾಜ, ಶರೀಫ್, ಶ್ರೀಪತಿ ವೀರಭದ್ರ್ಪ, ಮತ್ತಿತ್ತರರು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 