ವಾಸವಿ ವಿದ್ಯಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜಿ.ರಾಜಾರಾವ್ ಆಯ್ಕೆ
G. Rajarao elected as new president of Vasavi Vidya Sanstha
ಲೋಕದರ್ಶನ ವರದಿ
ಕಂಪ್ಲಿ 07: ಸ್ಥಳೀಯ ವಾಸವಿ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಾಸವಿ ವಿದ್ಯಾ ಸಂಸ್ಥೆಯ ನೂತನ ಕಾರ್ಯಕಾರಿ ಮಂಡಳಿ ರಚಿಸಲಾಯಿತು. ಅಧ್ಯಕ್ಷರಾಗಿ ಜಿ.ರಾಜಾರಾವ್, ಉಪಾಧ್ಯಕ್ಷರಾಗಿ ವಿ.ರಾಮಲಿಂಗಯ್ಯ, ಕಾರ್ಯದರ್ಶಿಗಳಾಗಿ ಜಿ.ಬಿ.ಕೊಟೇಶ್ವರ, ಸಹ ಕಾರ್ಯದರ್ಶಿಗಳಾಗಿ ಕೆ.ಸುರೇಂದರ್, ಖಜಾಂಚಿಯಾಗಿ ಡಿ.ವಿ.ಸತ್ಯನಾರಾಯಣ ಹಾಗೂ ನಿರ್ದೇಶಕರಾಗಿ ಜೆ.ತಿಪ್ಪಯ್ಯಶೆಟ್ಟಿ, ಡಿ.ಗುರುಕೃಷ್ಣ, ಟಿ.ಬಾಲಯ್ಯ, ಕೆ.ವಿ.ಸಂದೀಪ್, ಜೆ.ಶೇಖರ್ಪ, ಜೆ.ವೆಂಕಟೇಶ್, ಅನಿಲ್‌ಕುಮಾರ್, ಸಿ.ನಾಗೇಶ್ವರರಾವ್, ಸಿ.ಸುನಿಲ್, ಜಿ.ಪವನ್ ಕುಮಾರ್ ಇವರು ಸರ್ವಾನುಮತದಿಂದ ಆಯ್ಕೆಗೊಂಡು ನಂತರ ಅಧಿಕಾರ ಪದಗ್ರಹಣ ಮಾಡಿದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಡಿ.ಶ್ರೀಧರ್ ಶೆಟ್ಟಿ, ಕಾರ್ಯದರ್ಶಿ ಹೆಚ್.ಎನ್.ನಟರಾಜ್, ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಡಿ.ವಿ.ಸುಬ್ಬರಾವ್, ಧರ್ಮ ಕರ್ತರಾದ ವೈ.ಚಂದ್ರಮೋಹನ್ ಶೆಟ್ಟಿ, ಆರ್ಯ ವೈಶ್ಯ ಸಮಾಜದ ಕಾರ್ಯದರ್ಶಿ ಟಿ.ನರಸಿಂಹರಾವ್, ವಾಸವಿ ಯುವಜನ ಸಂಘದ ಡಿ.ಮಂಜೇಶ್ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಆರ್ಯವೈಶ್ಯದ ಮುಖಂಡರು, ನಿಕಟ ಪೂರ್ವ ನಿರ್ದೇಶಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 