ಲೋಕದರ್ಶನವರದಿ
ಹಾವೇರಿ27: ಮಾನವ ಜೀವನಕ್ಕೆ ಅವಶ್ಯವಾಗಿ ಬೇಕಾಗಿರುವ ಜೀವನಾಂಶಗಳ ನಿರ್ವಹಣೆ ಮತ್ತು ಕೌಶಲ್ಯಗಳು ನಿತ್ಯದಲ್ಲಿ ಮಹತ್ವ ಪಡೆದುಕೊಳ್ಳುತ್ತವೆ. ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೂ ಅಚ್ಚುಕಟ್ಟಿನ ವ್ಯವಸ್ಥಾಪನೆಯ ಹಂತಗಳು ಸರಣಿಯಾಗಿ ಬಂದುಹೋಗುತ್ತವೆ ಎಂದು ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಆಯೋಜಿಸಿದ್ದ ವ್ಯವಸ್ಥಾಪನಾ ಕೌಶಲ್ಯಗಳು ವಿಷಯದ ಕಾಯರ್ಾಗಾರದಲ್ಲಿ ಕೆ.ಎಲ್.ಇ. ಸಂಸ್ಥೆಯ ಉಪಾಧ್ಯಕ್ಷ ಎಮ್. ಸಿ. ಕೊಳ್ಳಿ ಅಭಿಪ್ರಾಯಪಟ್ಟರು.
ಕಲಿಕೆಯ ಹಂತದಿಂದಲೇ ವಿದ್ಯಾಥರ್ಿಗಳು ವ್ಯವಸ್ಥಾಪನೆಯ ಮೂಲ ಉದ್ಧೇಶ ಮತ್ತು ಅದರ ತಾತ್ವಿಕ ನಿಲುವಳಿಗಳನ್ನು ಅಥರ್ೈಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ವ್ಯವಸ್ಥಾಪನೆ ಕೇವಲ ವ್ಯವಹಾರಕ್ಕೆ ಸೀಮಿತವಾದುದಲ್ಲ. ಜೀವನದ ಅವಿಭಾಜ್ಯ ಅಂಗವಾಗಿ ಎಲ್ಲರಿಗೂ ಎಲ್ಲಾ ಕಾಲದಲ್ಲೂ ಅನ್ವಯವಾಗುತ್ತದೆ. ಇದರ ಕೌಶಲ್ಯದ ಅಳವಡಿಕೆ ಮತ್ತು ನಿಯಮಿತ ಪಾಲನೆಯಿದ್ದಾಗ ಪರಿವರ್ತನೆ ಸಾಧ್ಯ. ವರ್ತಮಾನದಲ್ಲಿ ವ್ಯವಸ್ಥಾಪನಾ ಕೌಶಲ್ಯಗಳು ಬಹುದೊಡ್ಡ ಪಾತ್ರ ನಿರ್ವಹಿಸುತ್ತಿದ್ದು, ಉತ್ತಮ ರೀತಿಯಲ್ಲಿ ವಿದ್ಯಾಥರ್ಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಭವಿಷ್ಯತ್ತಿನಲ್ಲಿ ಇಲ್ಲಿಯ ವಿಚಾರಗಳನ್ನು ಬೆಳೆಸಿಕೊಂಡಾಗ ಸಾಧನೆ ಮಾಡಲು ಸರಳ ದಾರಿ ದೊರಕುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೆಂಗಳೂರು ಕನರ್ಾಟಕ ರಾಜ್ಯ ಸ್ವಕುಳಸಾಳಿ ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿ-ನಿವೃತ್ತ ಪ್ರಾಚಾರ್ಯ ಡಾ|| ಧೀರೇಂದ್ರ ಏಕಬೋಟೆ ಮಾತನಾಡಿ ವ್ಯಕ್ತಿಯ ವಿಕಾಸಕ್ಕೆ ಯೋಜನೆ, ಸಂಘಟನೆ, ಸಂವಹನ, ಸಂಪರ್ಕ, ವೇಳೆಯ ನಿಯಮಿತ ಪರಿಜ್ಞಾನ ಇರಬೇಕಾಗುತ್ತದೆ. ಸಾಧಕನಾದವನು ಕಟ್ಟುನಿಟ್ಟಿನ ವ್ಯವಸ್ಥಾಪನಾ ಕೌಶಲಗಳನ್ನು ಮೈಗೂಡಿಸಿಕೊಂಡು ಉತ್ತಮ ರೀತಿಯಲ್ಲಿ ನಡೆಯುವ ಅವಶ್ಯಕತೆ ಇದೆ. ಶೃದ್ಧೆ ಮತ್ತು ಪ್ರಾಮಾಣಿಕತೆ ವಿದ್ಯಾಥರ್ಿಗಳಿಗೆ ನಿತ್ಯದ ಪಾಠವಾಗಬೇಕು. ಉತ್ತಮ ಕಾರ್ಯಶೀಲತೆ, ಕ್ರಿಯಾಶೀಲತೆ ಅಳವಡಿಸಿಕೊಂಡಾಗ ಸಾಧನೆ ಸಾಧ್ಯವೆಂದರು.
ಪದವಿ ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಹುಬ್ಬಳ್ಳಿ ಎನ್.ಎಸ್. ಇನ್ಫೋಟೆಕ್ನ ಮುಖ್ಯಸ್ಥ ಗಿರೀಶ ಅಂಗಡಿ, ವ್ಯವಸ್ಥಾಪಕ ಡೇವೀಡ್ ಎಡ್ವಡರ್್ ಜಾಜರ್್ ಹಾಗೂ ಪುಣೆಯ ಫ್ಯುಲ್ ಎನ್.ಜಿ.ಒ ವ್ಯವಸ್ಥಾಪಕರಾದ ರಾಜ್ ಲಗಳಿ, ಡೀನಜ್ ಎ. ಜೆ. ಉಪನ್ಯಾಸ ನೀಡಿದರು.
ಪ್ರೊ. ದೀಪಾ ಸಂಗಮ ಪ್ರಾಥರ್ಿಸಿದರು. ವಿಭಾಗದ ಮುಖ್ಯಸ್ಥ ಡಾ|| ಎಮ್. ಜಿ. ಯರನಾಳ ಸ್ವಾಗತಿಸಿದರು. ಪ್ರೊ. ರಮೇಶ ಬಿ. ಅಜರೆಡ್ಡಿ, ಪ್ರೊ. ಎಸ್. ಎಸ್. ಬನ್ನಿಹಟ್ಟಿ ಪರಿಚಯಿಸಿದರು. ಕೃಪಾ ಷಾ ನಿರ್ವಹಿಸಿದರು. ಪ್ರೊ. ಜಿ. ಎಸ್. ಬಾಕರ್ಿ ವಂದಿಸಿದರು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಅಧ್ಯಾಪಕರು ಮತ್ತು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.