ಪೂಜ್ಯ ದಲೈ ಲಾಮಾ ಅವರ ದರ್ಶನ ಪಡೆದ ಫ್ರೆಂಡ್ಶಿಪ್ ಸೊಸೈಟಿ ಪದಾಧಿಕಾರಿಗಳು
Friendship Society office bearers receive darshan of His Holiness the Dalai Lama
ಮುಂಡಗೋಡ 01: ಇಲ್ಲಿಯ ಟಿಬೇಟಿಯನ್ ಕಾಲೋನಿ (ಕ್ಯಾಂಪ್) ನಂ. 2ರ ಬೌದ್ಧ ಮಂದಿರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು ಹಾಗೂ ಟಿಬೆಟಿಯನ್ ಬೌದ್ಧ ಧರ್ಮದ ಪರಮೋಚ್ಚ ಗುರುಗಳಾದ ಪೂಜ್ಯ ದಲೈ ಲಾಮಾ ಅವರನ್ನು ಫ್ರೆಂಡ್ಶಿಪ್ ಸೊಸೈಟಿಯ ಪದಾಧಿಕಾರಿಗಳು ಭೇಟಿಯಾಗಿ ದರ್ಶನ ಹಾಗೂ ಆಶೀರ್ವಾದ ಪಡೆದರು.ಪೂಜ್ಯ ದಲೈ ಲಾಮಾ ಅವರು ಶಾಂತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಎಲ್ಲರಿಗೂ ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಫ್ರೆಂಡ್ಶಿಪ್ ಸೊಸೈಟಿಯ ಉಪಾಧ್ಯಕ್ಷರಾದ ವಾಸು ದಾವಣಗೆರೆ, ಫ್ರೆಂಡ್ಶಿಪ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಲಾಲ, ಗೌರವಾಧ್ಯಕ್ಷರಾದ ಅಶೋಕ ಗಾಣಿಗೇರ, ಗಣೇಶ ಶಾನಭಾಗ ಹಾಗೂ ಶ್ರೀ ನೂರು ಬೇಗ ಉಪಸ್ಥಿತರಿದ್ದರು.ಸಂಘದ ಸದಸ್ಯರಾದ ಬಸವರಾಜ ಓಶಿಮಠ, ಅರುಣಕುಮಾರ ಗೊಂದಳೆ, ರಜೀ ಪಿಲಿಪೋಸ್ ಸೇರಿದಂತೆ ಇತರರು ಈ ಸಂದರ್ಭಕ್ಕೆ ಸಾಕ್ಷಿಯಾದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 