ನೂರಾರು ಸದ್ಭಕ್ತರಿಗೆ ಪಾಂಡುರಂಗ ಭಕ್ತನಿಂದ ಉಚಿತ ಯಾತ್ರೆ
Free pilgrimage for hundreds of devotees from Panduranga devotee
ಮಹಾಲಿಂಗಪುರ 13: ಜನವರಿ 15ರಂದು ಪಂಢರಪುರ ಶ್ರೀಕ್ಷೇತ್ರದ ದರ್ಶನ ಮಾಡಿಸಲು ಸುಮಾರು 750 ಜನರನ್ನು ತಮ್ಮದೇ ಖರ್ಚಿನಲ್ಲಿ ಕರೆದೊಯ್ಯಲು ಸ್ಥಳೀಯ ಪಾಂಡುರಂಗನ ಭಕ್ತರಾದ ರಾಂಭವ ಟೆಕ್ಷಟಾಯಿಲ್ಸ್ ಮಾಲೀಕ ಬಾಲಕೃಷ್ಣ ಮಾಳವದೆ ಹೋದ ವರ್ಷದಂತೆ ಈ ವರ್ಷವೂ ಸಂಕಲ್ಪ ಮಾಡಿದ್ದಾರೆ.
ದೈವ ಭಕ್ತರಾದ ಇವರು ಕಳೆದ ವರ್ಷವೂ ಕೂಡ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿಯೇ ಸುಮಾರು 300 ಜನರಿಗೆ ಊಟೋಪಚಾರ ಸಹಿತ ಉಚಿತವಾಗಿ ಪಂಡರಪುರ ದರ್ಶನ ಮಾಡಿಸಿದ್ದರು. ಏನೆ ಇರಲಿ ಮುಂದಿನ ವರ್ಷವೂ ಕೂಡ ನಾವು ಹೆಚ್ಚಿನ ಸಂಖ್ಯೆಯಲ್ಲಿ ಸಾವಿರ ಜನರಿಗೆ ಯಾತ್ರೆ ಮಾಡಿಸಬೇಕೆಂಬ ಚಿಂತನೆಯಲ್ಲಿದ್ದೇವೆ ಎನ್ನುತ್ತಾರೆ ಮಾಳವದೆಯವರು.
ಜನವರಿ 15ರಂದು ಬೆಳಿಗ್ಗೆ ಸರಿಯಾಗಿ 5 ಗಂಟೆ ಸುಮಾರಿಗೆ ಬಸ್ಸು ಮತ್ತು ಇನ್ನಿತರ ವಾಹನಗಳ ಮೂಲಕ ಪ್ರಯಾಣ ಆರಂಭವಾಗಿ, ಶ್ರೀಕ್ಷೇತ್ರ ಢಪಳಾಪುರದ ಶ್ರೀಗುರು ಗುರುಲಿಂಗೇಶ್ವರ ದರ್ಶನ ತರುವಾಯ ಸದ್ಭಕ್ತರೆಲ್ಲ ಮುಂಜಾನೆಯ ಉಪಹಾರ ಪೂರೈಸಿಕ್ಕೊಳ್ಳುವರು.
ನಂತರ ಮಧ್ಯಾಹ್ನ ಗುಡ್ಡಾಪುರ ದಾನಮ್ಮದೇವಿ ದರ್ಶನಕ್ಕೆ ತೆರಳಿ ಮತ್ತೆ ಪರತ ಪಂಡರಪುರಕ್ಕೆ ಆಗಮಿಸಿ ಮಧ್ಯಾಹ್ನ ಮತ್ತು ಸಂಜೆ ದೇವರ ದರ್ಶನ ಮಾಡಿಕ್ಕೊಂಡು ರಾತ್ರಿ ಹೊತ್ತಿನ ಪ್ರಸಾದ ಸ್ವೀಕರಿಸಿ ಮರಳಿ ಮಹಾಲಿಂಗಪುರಕ್ಕೆ ಪ್ರಯಾಣ ಬೆಳೆಸಲಾಗುವುದು. ಇದನ್ನೆಲ್ಲ ನೋಡಿದರೆ ಸಾಮಾಜೀಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ರಾಂಭವ ಗಾಮೆಂರ್ಟ್ ಕೊಡುಗೆ ಅನನ್ಯ.ಹೆಚ್ಚಿನ ಮಾಹಿತಿಗಾಗಿ ಮೋ.ಸಂಖ್ಯೆ- 9972144777 ಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 