ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ Free notebook distribution to government school children

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ 

ಕಂಪ್ಲಿ 30: ಪ್ರತಿಯೊಬ್ಬರೂ ಆಡಂಭರದ ಜನ್ಮದಿನಾಚರಣೆ ಆಚರಿಸಿಕೊಂಡು ಹಣವನ್ನು ವ್ಯರ್ಥ ಮಾಡುವುದಕ್ಕಿಂತ ಸಮಾಜಮುಖಿಯಾಗಿ ಜನ್ಮ ದಿನವನ್ನು ಆಚರಿಸಿಕೊಂಡು ಅರ್ಥಪೂರ್ಣ ಜೀವನ ನಡೆಸಬೇಕೆಂದು ಕರವೇ (ನಾರಾಯಣಗೌಡ ಬಣ) ಕಂಪ್ಲಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು. ಅವರು ಬುಧವಾರ ಕರವೇ ಬಳ್ಳಾರಿ ಜಿಲ್ಲಾಧ್ಯಕ್ಷ ಅಂಗಡಿ ಶಂಕ್ರ​‍್ಪನವರ ಜನ್ಮ ದಿನಚಾರಣೆ ಅಂಗವಾಗಿ ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಭುಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿ, ಜನ್ಮ ದಿನಚಾರಣೆಯನ್ನು ದೊಡ್ಡ ದೊಡ್ಡ ಕೇಕ್‌ಗಳನ್ನು ಕತ್ತರಿಸಿ, ಅದನ್ನು ಎಲ್ಲೆಂದರಲ್ಲಿ ಹಚ್ಚಿಕೊಂಡು,ಪಟಾಕಿ ಸಿಡಿಸಿ ಪರಿಸರ ಹಾಳುಮಾಡುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುವ ಬದಲಿಗೆ ಅದೇ ಹಣವನ್ನು ಸಮಾಜಿಕ ಕೆಲಸಕಾರ್ಯಗಳಿಗೆ ವಿನಿಯೋಗಿಸಿದರೆ ಅದಕ್ಕೊಂದು ಅರ್ಥವಿರುತ್ತದೆ. ಈ ಹಿನ್ನೆಲೆಯಲ್ಲಿ ನಾವುಗಳು ನಮ್ಮ ಸಂಘಟನೆಯ ನಾಯಕರುಗಳ ಜನ್ಮ ದಿನಚಾರಣೆಗಳನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಪುಸ್ತಕ, ಬ್ಯಾಗ್, ಲೇಖನಿ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹಾಲು,ಹಣ್ಣು, ಬ್ರೆಡ್‌ಗಳನ್ನು ವಿತರಿಸುವ ಮೂಲಕ ಹಾಗೂ ಸಸಿಗಳನ್ನು ನೆಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತೇವೆ ಎಂದರು. ಸಂಘಟನೆ ಮುಖಂಡ ಹೊನ್ನಳ್ಳಿ ಗಂಗಾಧರ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ, ಮೈದಾನಗಳಲ್ಲಿ ಯಾರದೇ ಆಗಲಿ ಜನ್ಮ ದಿನಚಾರಣೆಗಳನ್ನು ಆಚರಿಸಿಕೊಳ್ಳುವಂತಿಲ್ಲ.ಈ ಹಿನ್ನೆಲೆಯಲ್ಲಿ ನಮ್ಮ ಸಂಘಟನೆಯವರು ವಿದ್ಯಾರ್ಥಿಗಳಿಗೆ ಉಪಯುಕ್ತವಾಗು ಸಾಮಾಗ್ರಿಗಳನ್ನು ಹಾಗೂ ಸಿಹಿಯನ್ನು ವಿತರಿಸುವ ಮೂಲಕ ಆಚರಣೆ ಮಾಡುತ್ತಿದ್ದೇವೆಂದರು. ಈ ಕಾರ್ಯಕ್ರಮದಲ್ಲಿ ಕರವೇ ಸಂಘಟನೆಯ ಪದಾಧಿಕಾರಿಗಳಾದ ಎಂ.ಎಸ್‌.ಮುನ್ನ, ಮೇದಾರ್ ಶ್ರೀನಿವಾಸ್, ಎಚ್‌.ಪಿ.ಗಣೇಶ್, ಎಂ.ರಂಜಿತ್, ವೀರೇಶ್ ಯಾದವ್, ತಿಪ್ಪೇಸ್ವಾಮಿ, ನಾಗರಾಜ, ಪ್ರಕಾಶ್ ಖಂಡೇಲ್‌ವಾಲ್, ಶಾಲೆಯ ಮುಖ್ಯುಗುರು ಹನುಮಂತಪ್ಪ, ಸಹ ಶಿಕ್ಷಕರಾದ ವೀರಕುಮಾರ್, ಅತಿಥಿ ಶಿಕ್ಷಕಿ ಸಿ.ಪಾರ್ವತಿ ಸೇರಿದಂತೆ ಇತರರು ಇದ್ದರು.