ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ಶಿಬಿರ

ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ಶಿಬಿರ  Free medical camp for specially-abled children at primary school

                        ಬ್ಯಾಡಗಿ  29: ವಿಶೇಷ ಚೇತನರ ಬಗ್ಗೆ ಪ್ರಸ್ತುತ ದಿನಗಳಲ್ಲಿ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿದ್ದು ಅವುಗಳನ್ನು ಬಳಕೆ ಮಾಡಿಕೊಳ್ಳುವಂತೆ ರಾಜ್ಯ ಗ್ಯಾರಂಟಿ ಉಪಾಧ್ಯಕ್ಷ ಎಸ್ ಆರ್ ಪಾಟೀಲ್ ಹೇಳಿದರು. ಪಟ್ಟಣದ ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಪಂಚಾಯತ್ ಹಾವೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷಾತ್ ಇಲಾಖೆ ಹಾವೇರಿ ತಾಲೂಕು ಪಂಚಾಯತ್ ಬ್ಯಾಡಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ 2025 26ನೇ ಸಾಲಿನ ಪಿಎಂ ಶ್ರೀ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ವಿಶೇಷ ಚೇತನರಿಗೆ ಅನುಕಂಪ ತೋರಿಸುವುದರ ಬದಲು ಬದುಕಿಗೆ ಬೇಕಾದ ಅವಕಾಶಗಳನ್ನು ಒದಗಿಸುಕೊಡಿ ಇದರಿಂದ ಅವರು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ್ ಕೆ ಎಂ ಮಾತನಾಡಿ ವಿಶೇಷ ಚೇತನರಿಗೆ ಆತ್ಮಸ್ಥೆರ್ಯ ತುಂಬುವುದು ಪ್ರಮುಖ ಚಿಕಿತ್ಸೆಯಾಗಿರುತ್ತದೆ. ಇಂಥ ಮಕ್ಕಳನ್ನು ಸಮಾಜ ಮುಖಿಯಾಗಿ ಮಾಡುವುದರಲ್ಲಿ ಸಂತೃಪ್ತಿ ಇರುತ್ತದೆ. ಸರಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಪೊ?ಷಕರು ಮಕ್ಕಳ ಚೇತನ್ಯಕ್ಕೆ ಪೂರಕವಾಗಬೇಕೆಂದು ಕೋರಿದರು.  

                          ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ ಮಾತನಾಡಿ ಈ ದಿನದ ವೈದ್ಯಕೀಯ ಮೌಲ್ಯಂಕನ ಶಿಬಿರ ವಿಶೇಷ ಚೇತನ ಮಕ್ಕಳಿಗೆ ತಪಾಸಣೆ ನಡೆಸಿ ಸಾಧನ ಸಲಕರಣೆ ನೀಡುತ್ತಿರುವುದು, ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಸಮಾಜದಲ್ಲಿ ಮುಖ್ಯವಾಹಿನಿಗೆ ತರುವುದಾಗಿದೆ ಎಂದ ಅವರು ಪೋಷಕರು ವಿಶೇಷ ಚೇತನ ಮಕ್ಕಳನ್ನು ಸಮಾಜಕ್ಕೆ ಭಾರ ಎಂಬುದನ್ನು ಮರೆತು ಅವರ ಪೋಷಣೆ ಮಾಡಿ ಎಂದು ಸಲಹೆ ನೀಡಿದರು. ಶಿಬಿರದಲ್ಲಿ ಒಟ್ಟು 240 ವೀಷೆಶ ಚೇತನಾ ಮಕ್ಕಳ ಮೌಲ್ಯಾಂಕನ ಮಾಡಲಾಯಿತು.ನಿರೂಪಣೆ ಈಶ್ವರ್ ತಿಮ್ಮನಗೌಡ್ರು ಬಿ ಆರ್ ಪಿ ಹಾಗೂ ಸ್ವಾಗತ ಎಮ್ ಎಸ್ ಹುಲ್ಯಾಳ ಸ್ವಾಗತಿಸಿದರು.

                          ಕಾರ್ಯಕ್ರಮದಲ್ಲಿ ಸುಭಾಸ ಬಿ ಬಿ ಐ ಈ ಆರ್ ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಎಮ್ ಎಸ್ ಹುಲ್ಯಾಳ. ಆರೋಗ್ಯ ಅಧಿಕಾರಿ ಕಾಂತೇಶ್ ಭಜಂತ್ರಿ ಕಾಂತೇಶ್ ಭಜಂತ್ರಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೋಳೆಯಪ್ಪ ಗೋಳ.  ನಿರಂಜನ ಮೂರ್ತಿ, ಚೇತನ್ ಪ್ರಶಾಂತ್ ವೈದ್ಯಾಧಿಕಾರಿಗಳು ಹಾವೇರಿ ಡಿಡಿ ಅರ್ಸಿ ಸಿಬ್ಬಂದಿ. ಅಕ್ಷರದಾಸೋಹ ಅಧಿಕಾರಿ ವಸಂತ್ ಬೀರಣ್ಣನವರ್, ರಾಜಶ್ರೀ ಸಜ್ಜೇಶ್ವರ್ ಸಹಾಯಕ ನಿರ್ದೇಶಕರು. ತಾಲೂಕು ವಿಕಲಚೇತನರ, ಅಧ್ಯಕ್ಷರು ಪಾಂಡುರಂಗ ಸುತಾರ್, ಬ್ಯಾಡಗಿ ಎಂ ಆರ್ ಡಬ್ಲ್ಯೂ , ವಿ ಆರ್ ಡಬ್ಲ್ಯೂ,ಬಿ ಆರ್ ಪಿ, ಸಿ ಆರ್ ಟಿ, ಹಾಗೂ ಸಂಪನ್ಮೂಲ ಕೇಂದ್ರದ ಎಲ್ಲಾ ಸಿಬ್ಬಂದಿ ಶಾಲೆ ಜಿಲ್ಲಾ ಸಿಬ್ಬಂದಿಗಳು ಪಾಲಕರು ಪೋಷಕರು ಮಕ್ಕಳು ಉಪಸ್ಥಿತರಿದ್ದರು.