ಪೋಕ್ಸೋ , ಸೈಬರ್ ಅಪರಾಧ, ಗ್ರಾಹಕರ ಸಂರಕ್ಷಣೆ, ಪ್ರಥಮ ಮಾಹಿತಿ ವರದಿ ಹಾಗೂ ಕಾರ್ಮಿಕ ಸಂಹಿತೆಗಳ ಕುರಿತು ಉಚಿತಕಾನೂನು ನೆರವು ಕಾರ್ಯಕ್ರಮ

ಪೋಕ್ಸೋ , ಸೈಬರ್ ಅಪರಾಧ, ಗ್ರಾಹಕರ ಸಂರಕ್ಷಣೆ, ಪ್ರಥಮ ಮಾಹಿತಿ ವರದಿ  ಹಾಗೂ  ಕಾರ್ಮಿಕ ಸಂಹಿತೆಗಳ ಕುರಿತು ಉಚಿತಕಾನೂನು ನೆರವು ಕಾರ್ಯಕ್ರಮ    Free legal aid program on POCSO, cybercrime, consumer protection, first information report and labo

ಲೋಕದರ್ಶನ ವರದಿ 

ಕೊಪ್ಪಳ 13:  ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ಹಾಗೂ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಕೊಪ್ಪಳ( ಜಿಟಿಟಿಸಿ) ಕೊಪ್ಪಳ ಇವರಗಳ ಸಂಯುಕ್ತ ಆಶ್ರಯದಲ್ಲಿ ಪೋಕ್ಸೋ , ಸೈಬರ್ ಅಪರಾಧ, ಪ್ರಥಮ ಮಾಹಿತಿ ವರದಿ  ಹಾಗೂ  ಕಾರ್ಮಿಕ ಸಂಹಿತೆಗಳ ಕುರಿತು ಉಚಿತ ಕಾನೂನು ನೆರವು ಕಾರ್ಯಕ್ರಮವನ್ನು ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿತ್ತು . ಕಾರ್ಯಕ್ರಮದಲ್ಲಿ ಕಾನೂನು ವಿದ್ಯಾರ್ಥಿಗಳಾದ ಕುಮಾರ್  ಸಂಕಲ್ಪ. ಎಂ ಮಾತನಾಡಿ ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಅವಶ್ಯಕತೆ ತುಂಬಾ ಅಗತ್ಯವಾಗಿರುತ್ತದೆ. 

ಅದರಲ್ಲಿ ಪ್ರಮುಖವಾಗಿ ಪೋಕ್ಸೋ ಅಪರಾಧ ಯಥೇಚ್ಛವಾಗಿ ನಡೆಯಲ್ಪಡುತ್ತದೆ ಇಂತಹ ಪ್ರಕರಣಗಳಲ್ಲಿ ನಿಮ್ಮಂತ ಯುವ ಪೀಳಿಗೆಗಳು ತೊಡಗುವುದು ಅಧಿಕವಾಗಿರುತ್ತದೆ ಇಂತಹ ಪ್ರಕರಣದಲ್ಲಿ ತೊಡಗಿದರೆ ಗಂಭೀರವಾದ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಗ್ರಾಹಕರು ಇಂದಿನ ದಿನಮಾನಗಳಲ್ಲಿ ಸಾಕಷ್ಟು ಮೋಸವಾಗುವುದರಿಂದ ಸಂರಕ್ಷಿಸುವುದಕ್ಕಾಗಿ 2019ರಲ್ಲಿ ಅದಿನಿಯಮವನ್ನು ಹೊಸ ಆಯಾಮಗಳೊಂದಿಗೆ ಜಾರಿಗೆ ತರಲಾಯಿತು ವಿದ್ಯಾವಂತರಾದ ನೀವು ಈ ಅಧಿನಿಯಮದ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಿದ್ದು ಅಲ್ಲಿ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ನೀಡುವದು ಮತ್ತು ಅವರಿಗೆ ಇನ್ನಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಹಾಯ ಸಹಕಾರ ಸಿಗುತ್ತವೆ.

ಪ್ರಸ್ತುತ ಜನಮಾನಗಳಲ್ಲಿ ಜಗತ್ತಿನಾದ್ಯಂತ ಸೈಬರ್ ಅಪರಾಧಗಳು ಜಾಸ್ತಿಯಾಗಿದ್ದು ಇದರಲ್ಲಿ ಅಕ್ಷರ ವ್ಯಕ್ತಿಗಳು ಹೆಚ್ಚು ಬಲಿಯಾಗುತ್ತಿದ್ದಾರೆ ಯಾವುದೇ ಹಣಕಾಸಿನ ಆಮಿಷಕ್ಕೆ ಒಳಗಾಗದೆ ನೀವು ಹಾಗೂ ನಿಮ್ಮ ಸುತ್ತಮುತ್ತಲಿನ ಜನರಿಗೆ ಸೈಬರ್ ಅಪರಾಧಗಳನ್ನು ಕುರಿತು ಮಾಹಿತಿ ನೀಡಬೇಕು    ಎಂದರು. ನಂತರ  ಕುಮಾರ್ ಶ್ರೀನಿವಾಸ್ ಮಾದಗುಂಡಿ  ಮಾತನಾಡಿ ದೇಶದಲ್ಲಿ ಹೊಸದಾಗಿ ಇತ್ತೀಚೆಗೆ ನಾಲ್ಕು ಪ್ರಮುಖ ಕಾರ್ಮಿಕರ ಸಂಹಿತೆಗಳು ಜಾರಿಗೆ ಬಂದಿದ್ದು ಇದು ಸಾಕಷ್ಟು ರೀತಿಯಲ್ಲಿ ಕಾರ್ಮಿಕರ ಹಕ್ಕು, ಸಂರಕ್ಷಣೆ, ವೇತನ  ಮುಂತಾದವುಗಳ ಕುರಿತು ಅನುಕೂಲಗಳನ್ನು ಒದಗಿಸಲ್ಪಟ್ಟಿವೆ.

ಯಾವುದೇ ಪ್ರದೇಶದಲ್ಲಿ ಅಥವಾ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಟೆ ತಕರಾರು ಗಲಾಟೆಗಳು ಪ್ರಕರಣಗಳು ನಡೆದಾಗ ಅದರ ಕುರಿತು ಯಾವುದೇ ಭಯವಿಲ್ಲದೆ ಪೊಲೀಸ್ ಠಾಣಾಧಿಕಾರಿಗೆ ಪ್ರಥಮ ಮಾಹಿತಿಯನ್ನು ನೀಡುವದು ಪ್ರಮುಖವಾಗಿರುತ್ತದೆ ಬಹಳಷ್ಟು ವಿದ್ಯಾರ್ಥಿಗಳು ಮತ್ತು  ಜನರು ಘಟನೆ ಕುರಿತು ಮಾಹಿತಿಯನ್ನು ನೀಡಲು ಇಂದಿಗೂ ಸಹ ಹಿಂದೇಟು ಹಾಕುತ್ತಿರುವುದು ವಿಷಾದನೀಯ ಸಂಗತಿ  ಎಂದರು. ಅಧ್ಯಕ್ಷತೆಯನ್ನು ವಹಿಸಿದ ಡಿಟಿಟಿಸಿ ಪ್ರಾಚಾರ್ಯರದ ಮೌನೇಶ್ ರವರು ತಮ್ಮ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಸಂಯೋಜಕರಾದ ಶ್ರೀ ಶಶಿಧರ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮವನ್ನು ಉಪನ್ಯಾಸಕರದ  ಪ್ರಭುರವರು ನಿರೂಪಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಡಿಟಿಟಿಸಿ ಪ್ರಾಚಾರ್ಯರದ ಮೌನೇಶ್ ರವರು ತಮ್ಮ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಸಂಯೋಜಕರಾದ ಶ್ರೀ ಶಶಿಧರ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮವನ್ನು ಉಪನ್ಯಾಸಕರದ  ಪ್ರಭುರವರು ನಿರೂಪಿಸಿದರು