ನಿಟಪಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
Free health check-up camp in Nitapalli village
ರಾಣೆಬೆನ್ನೂರು 24: ಪ್ರತಿಯೊಬ್ಬರು ತಮ್ಮ ನಿತ್ಯ ಜೀವನ ಬದುಕಿನಲ್ಲಿ ಅತ್ಯಂತ ಸರಳ ಜೀವನ ಸಾಗಿಸಬೇಕಾದರೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯವಿರಲಿ ನಿರ್ಲಕ್ಷತನ ತೋರದೆ ಮೇಲಿಂದ ಮೇಲೆ ತಪಾಸಣೆಗೊಳಪಡಬೇಕಾದ ಇಂದಿನ ಅಗತ್ಯವಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಗೌಡ ಹೇಳಿದರು. ಅವರು ತಾಲೂಕಿನ ನಿಟಪಳ್ಳಿ ಗ್ರಾಮದ ಕಾರ್ಯಕ್ಷೇತ್ರದಲ್ಲಿ ಎಸ್. ಕೆ.ಡಿ.ಆರ್. ಡಿ. ಪಿ. ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಯೋಮಿತಿಗನುಗುಣವಾಗಿ, ಇಂದು ಒಂದಿಲ್ಲ ಒಂದು ರೀತಿಯಲ್ಲಿ ಕಾಯಿಲೆಗಳು ಬರುವುದು ಸಹಜ.
ಅದಕ್ಕಾಗಿ ವಯೋವೃದ್ಧರು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ತಪಾಸಣೆ ಮಾಡಿಕೊಂಡು, ವೈದ್ಯರ ಸಲಹೆಯಂತೆ ನಿಯಮಿತ ಆಹಾರ, ಉಪಹಾರ, ಓಷಧಿ ಮತ್ತು ನಿದ್ರೆ ಸರಿಯಾದ ರೀತಿಯಲ್ಲಿ ಅನುಸರಿಸಿದರೆ ಕಾಯಿಲೆಗಳಿಗೆ ಕಡಿವಾಣ ಹಾಕಿ, ಸರಳ ಜೀವನ ಸಾಗಿಸಬಹುದಾಗಿದೆ ಎಂದು ಕರೆ ನೀಡಿದರು. ಶಿಬಿರದಲ್ಲಿ ಸಾರತ್ತ್ಯ ವಹಿಸಿದ್ದ ಶಿವಂ ಆಸ್ಪತ್ರೆಯ ಡಾ. ಶಿವಕುಮಾರ, ವಿಮಾ ಸಮನ್ವಯಾಧಿಕಾರಿ, ಕೃಷ್ಣಮೂರ್ತಿ, ಆಸ್ಪತ್ರೆ ವ್ಯವಸ್ಥಾಪಕ ಚರಣಕುಮಾರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶೋಭಾ ಸೇವಾ ಪ್ರತಿನಿಧಿ ಶ್ರೀಮತಿ ಬಸಮ್ಮ ಸೇರಿದಂತೆ ಯೋಜನೆಯ, ಸದಸ್ಯರು ಮಹಿಳೆಯರು ವೈದ್ಯರು ಪಾಲ್ಗೊಂಡಿದ್ದರು. ಮಧ್ಯಾಹ್ನದವರೆಗೆ ನಡೆದ ಶಿಬಿರದಲ್ಲಿ 200 ನೂರಕ್ಕೂ ಹೆಚ್ಚು ಶಿಭಿರಾರ್ಥಿಗಳು ಪಾಲ್ಗೊಂಡು ತಪಾಸಣೆಗೆ ಒಳಪಟ್ಟರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 