ನರೇಗಾ ಕೂಲಿಕಾರರಿಗೆ ಅರೋಗ್ಯ ಉಚಿತ ತಪಾಸಣೆ ಶಿಬಿರ
Free health check-up camp for NREGA workers
ನರೇಗಾ ಕೂಲಿಕಾರರಿಗೆ ಅರೋಗ್ಯ ಉಚಿತ ತಪಾಸಣೆ ಶಿಬಿರ
ಮುದ್ದೇಬಿಹಾಳ, 05 : ತಾಲ್ಲೂಕಿನ ಮುದ್ನಾಳ ಗ್ರಾಮದ ಕೆರೆ ಹೂಳೆತ್ತುವುದು ಕಾಮಗಾರಿ ಸ್ಥಳದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನರೇಗಾ ಕೂಲಿಕಾರರಿಗೆ ಅರೋಗ್ಯ ಉಚಿತ ತಪಾಸಣೆ ಶಿಬಿರ ಗುರುವಾರ ನಡೆಯಿತು.ಹಡಲಗೇರಿ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಮಾಹಿತಿ, ಶಿಕ್ಷಣ ಹಾಗೂ ಸಂಹವನ ಕಾರ್ಯಕ್ರಮ ಹಾಗೂ ಅರೋಗ್ಯ ಇಲಾಖೆ ಸಹಯೋಗದಲ್ಲಿ ಅರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.ಅರೋಗ್ಯ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಗಣಚಾರಿ, ಹಡಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದ್ನಾಳ ಗ್ರಾಮದ ನರೇಗಾ ಕೂಲಿಕಾರರಿಗೆ ಕಳೆದ ಒಂದು ತಿಂಗಳಿಂದ ಕೂಲಿ ಕೆಲಸ ಒದಗಿಸಲಾಗಿದೆ. ಖಾತ್ರಿ ಯೋಜನೆಯಡಿ ನಿರಂತರ ಕೆಲಸ ನೀಡಲಾಗಿದ್ದು, ವಲಸೆ ಪ್ರವೃತ್ತಿ ಕಡಿಮೆಯಾಗಿದೆ ಎಂದು ಹೇಳಿದರು.ನರೇಗಾ ಯೋಜನೆಯಡಿ ದುಡಿದ ಕೂಲಿಕಾರರಿಗೆ ಅರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಬಿಸಿಲಿನಲ್ಲಿ ಸತತ ಕೆಲಸ ಮಾಡುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ. ಕೂಲಿಕಾರರ ಸದೃಢ ಆರೋಗ್ಯಕ್ಕೆ ಶಿಬಿರ ಏರಿ್ಡಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಅರೋಗ್ಯ ಇಲಾಖೆಯ ಅಧಿಕಾರಿಗಳು ಕೂಲಿಕಾರರ ಅರೋಗ್ಯ ತಪಾಸಣೆ ಮಾಡಿ ಮಧುಮೇಹ, ರಕ್ತದೊತ್ತಡ, ಮಲೇರಿಯಾ ಹಾಗೂ ಕಫ ಪರೀಕ್ಷೆ ಮಾಡಿ ಸಮಾಲೋಚನೆ ಮಾಡಿದರು.ಈ ಸಂದರ್ಭದಲ್ಲಿ ನರೇಗಾ ಯೋಜನೆ ತಾಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ, ಆರೋಗ್ಯ ನೀರೀಕ್ಷಾಧಿಕಾರಿ ಸಿ.ಜಿ.ಬಿದರಕುಂದಿ, ಸಿಎಚ್ ಇ ಮಂಜುನಾಥ, ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮೀಬಾಯಿ ಮ.ಪರ್ಪಗೋಳ, ಡಿಇಒ ಮಲ್ಲಿಕಾರ್ಜುನ ಬಿದರಕುಂದಿ, ಗ್ರಾ.ಪಂ.ಸಿಬ್ಬಂದಿ ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 