ಕುಡಚಿ ಪಟ್ಟಣದಲ್ಲಿ ಉಚಿತ ಆರೋಗ್ಯ ಶಿಬಿರ: 160 ಮಂದಿಗೆ ವಿವಿಧ ಆರೋಗ್ಯ ತಪಾಸಣೆ

ಕುಡಚಿ ಪಟ್ಟಣದಲ್ಲಿ ಉಚಿತ ಆರೋಗ್ಯ ಶಿಬಿರ: 160 ಮಂದಿಗೆ ವಿವಿಧ ಆರೋಗ್ಯ ತಪಾಸಣೆ  Free health camp in Kudachi town: Various health check-ups for 160 people

ಲೋಕದರ್ಶನ ವರದಿ 

ಕಾಗವಾಡ ಸೆ. 5: ಸಮೀಪದ ಕುಡಚಿ ಪಟ್ಟಣದಲ್ಲಿ ಶುಕ್ರವಾರ (ಸೆ. 4) ಮಹಾರಾಷ್ಟ್ರದ ಮಿರಜ್ ಪಟ್ಟಣದ ಸ್ಪಂದನ ಹೃದಯಾಲಯ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉಗಾರ ಸಕ್ಕರೆ ಕಾರ್ಖಾನೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.  ಶಿಬಿರವನ್ನು ಉಗಾರ ಪಟ್ಟಣದ ವೈದ್ಯರಾದ ಡಾ. ಸಾಗರ ಮಾಳಿ ಹಾಗೂ ಡಾ. ಸುರೇಶ ಕುಂದರಗಿ ಉದ್ಘಾಟಿಸಿದರು. ಶಿಬಿರದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು.  

ಇಸಿಜಿ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಅಸ್ಥಿ ಸಂಬಂಧಿತ ಕಾಯಿಲೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಒಟ್ಟು 160 ಮಂದಿಗೆ ತಪಾಸಣೆ ನಡೆಸಲಾಯಿತು.  ಈ ಸಂದರ್ಭದಲ್ಲಿ ಸ್ಪಂದನ ಹೃದಯಾಲಯದ ನಿರ್ದೇಶಕ ಡಾ. ರಿಯಾಜ್ ಮುಜಾವರ್ ಮಾತನಾಡಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಕರ್ನಾಟಕ ಸರ್ಕಾರದ ಆರೋಗ್ಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.  ಶಿಬಿರದಲ್ಲಿ ಸ್ಪಂದನ ಆಸ್ಪತ್ರೆಯ ವೈದ್ಯರು ಹಾಗೂ ಪಟ್ಟಣದ ನಿವಾಸಿಗಳು ಉಪಸ್ಥಿತರಿದ್ದರು.