ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರೈನ್‌ಬೋ ಕಾಲೇಜಿನಲ್ಲಿ ಉಚಿತ ಶಿಕ್ಷಣ ವಸತಿ: ಕೆ.ಎಸ್‌.ಚಾಂದ್‌ಬಾಷಾ

Free education and accommodation at Rainbow College for students who score highest in SSLC: K.S. Ch

ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರೈನ್‌ಬೋ ಕಾಲೇಜಿನಲ್ಲಿ ಉಚಿತ ಶಿಕ್ಷಣ ವಸತಿ: ಕೆ.ಎಸ್‌.ಚಾಂದ್‌ಬಾಷಾ 

ಕಂಪ್ಲಿ11 ಸ್ಥಳೀಯ ಸಣಾಪುರ ರಸ್ತೆಯಲ್ಲಿರುವ ಕೆಸಿಬಿ ಎಜ್ಯುಕೇಷನಲ್ ಟ್ರಸ್ಟ್‌,ರೈನ್‌ಬೋ ಸಮೂಹ ವಿದ್ಯಾಸಂಸ್ಥೆಯ ರೈನ್‌ಬೋ ಪಿಯು ಕಾಲೇಜಿನಲ್ಲಿ 2025-26ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ತಾಲೂಕಿಗೆ ಅತೀ ಹೆಚ್ಚು ಅಂಕ ಪಡೆದ ಬಳ್ಳಾರಿ ಜಿಲ್ಲೆಯ 20 ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಹಾಗೂ ವಸತಿ ಕಲ್ಪಿಸಲಾಗುವುದು ಎಂದು ಕೆಸಿಬಿ ಎಜ್ಯುಕೇಷನಲ್ ಟ್ರಸ್ಟ್ನ ಅಧ್ಯಕ್ಷ ಕೆ.ಎಸ್‌.ಶಾರುಖ್ ಮತ್ತು ಕಾರ್ಯದರ್ಶಿ ಕೆ.ಎಸ್‌.ಚಾಂದ್‌ಬಾಷಾ ಹೇಳಿದರು. ಅವರು ಶುಕ್ರವಾರ ಪಟ್ಟಣದ ಸಣಾಪುರ ರಸ್ತೆಯಲ್ಲಿರುವ ಕೆಸಿಬಿ ಎಜ್ಯಕೇಷನಲ್ ಟ್ರಸ್ಟ್ನ ರೈನ್‌ಬೋ ಕಾಲೇಜಿನಲ್ಲಿ ಏರಿ​‍್ಡಸಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ಬಳ್ಳಾರಿ ಜಿಲ್ಲೆಯ 5 ತಾಲ್ಲೂಕುಗಳಾದ ಕಂಪ್ಲಿ, ಕುರುಗೋಡು, ಸಿರಗುಪ್ಪ, ಬಳ್ಳಾರಿ ಮತ್ತು ಸಂಡೂರು ತಾಲ್ಲೂಕಗಳಲ್ಲಿ ಹತ್ತನೇ ತರಗತಿಯ ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ ವಿದ್ಯಾಭ್ಯಾಸ ಮಾಡಿ ಆಯಾ ತಾಲ್ಲೂಕಿನಲ್ಲಿಯೇ ಅತೀ ಹೆಚ್ಚು ಅಂಕಗಳನ್ನು ಪಡೆದ ಪ್ರತಿ ತಾಲ್ಲೂಕಿನ 4 ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ನಮ್ಮ ಸಂಸ್ಥೆಯ ರೈನ್‌ಬೋ ಪಿಯು ಕಾಲೇಜಿನಲ್ಲಿ ಉಚಿತ ಶಿಕ್ಷಣ ವಸತಿ, ಯಾವುದೇ ಶುಲ್ಕವಿಲ್ಲದೆ ಶಿಕ್ಷಣ ನೀಡಲಾಗುವುದು ನೀಟ್, ಕೆಸೆಟ್ ಮತ್ತು ಜೆಇಇ ತರಬೇತಿಯನ್ನು ಅತ್ಯಂತ ಅನುಭವವುಳ್ಳ,ನುರಿತ ಉಪನ್ಯಾಸಕರಿಂದ ನೀಡಲಾಗುವುದು. ಒಬ್ಬ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಅಂದಾಜು 1.40,000 ರೂಗಳ ಉಚಿತ ಶಿಕ್ಷಣ ಮತ್ತು ವಸತಿ ಒದಗಿಸಲಾಗುವುದೆಂದು ತಿಳಿಸಿದರು. ನಮ್ಮ ರೈನ್‌ಬೋ ಸಮೂಹ ಶಿಕ್ಷಣ ಸಂಸ್ಥೆಗೆ ಪ್ರಸಕ್ತ ಸಾಲಿನಲ್ಲಿ ಐಸಿಎಸ್‌ಇ ಪಠ್ಯಕ್ರಮದಲ್ಲಿ ಬೋಧನೆಗೆ ಪರವಾನಿಗೆ ದೊರೆತಿದ್ದು, ಪ್ರಸಕ್ತ ಸಾಲಿನಲ್ಲಿ ಐಸಿಎಸ್‌ಇ ಪಠ್ಯಕ್ರಮಕ್ಕೆ ದಾಖಲಾತಿ ಆರಂಭವಾಗಿದ್ದು, ತಾಲ್ಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪಾಲಕ ಮತ್ತು ಫೋಷಕರು ಇದರ ಸದುಪಯೋಗವನ್ನು ಪಡೆದುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವಲ್ಲಿ ಪಾಲಕರು ಮುಂದಾಗಬೇಕೆಂದು ಮನವಿ ಮಾಡಿದರು. ಹೆಚ್ಚಿನ ವಿವರಿಗಳಿಗೆ ಮೊಬೈಲ್ ಸಂಖ್ಯೆಃ- 9880 90477, 99805 72088, 99009 88020, 81230 09051, 94942 27727ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.  ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಕೆ.ಎಸ್‌.ಮೈಬೂಬ್, ಪ್ರಾಚಾರ್ಯ ಶ್ರೀನಿವಾಸ್, ಶಂಷೇರ್ ಮತ್ತು ಮೇಘನಾ ಇದ್ದರು.