ಬಾರಿ ಮಳೆಯಿತಿಂದ ಮನೆ ಕುಸಿದು ನಾಲ್ವರಿಗೆ ಗಂಭಿರ ಗಾಯ

ಬಾರಿ ಮಳೆಯಿತಿಂದ ಮನೆ ಕುಸಿದು ನಾಲ್ವರಿಗೆ ಗಂಭಿರ ಗಾಯ Four seriously injured as house collapses due to heavy rain

ಬಾರಿ ಮಳೆಯಿತಿಂದ ಮನೆ ಕುಸಿದು ನಾಲ್ವರಿಗೆ ಗಂಭಿರ ಗಾಯ 

ಮುದ್ದೇಬಿಹಾಳ, 29 ; ತಾಲೂಕಿನಲ್ಲಿ ಸತತ ಭಾರಿ ಮಳೆ ಸುರಿದ ಪರಿಣಾಮ ತಾಲೂಕಿನ ಅರೇಮುರಾಳ ಗ್ರಾಮದಲ್ಲಿ ಮನೋಯೊಂದರಲ್ಲಿ ರಾತ್ರಿ ಮಲಗಿರುವಾಗ ಮನೆ ಕುಸಿದು ನಾಲ್ವರಿಗೆ ಗಾಯಗೊಂಡು ಸಧ್ಯ ವಿಜಪುರ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಅರೇ ಮುರಾಳ ಗ್ರಾಮದಲ್ಲಿ ನಡೆದಿದೆ. 

ಈ ವೇಳೆ ವಿಷಯ ತಿಳಿಯುತ್ತಿದ್ದಂತೆ ತಹಶಿಲ್ದಾರ ಕೀರ್ತಿ ಚಾಲಕ ಹಾಗೂ ತಾಲೂಕು ಪಂಚಾಯತ್ ಪ್ರಭಾರಿ  ಕಾರ್ಯನಿರ್ವಾಹಕ ಅಧಿಕಾರಿ  ವೆಂಕಟೇಶ ವಂದಾಲ ಗ್ರಾಮ ಪಂಚಾಯಿತಿ ಪಿಡಿಓ ಕಲ್ಮೇಶ ಕುಂಬಾರ, ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶಿಲನೆ ನಡೆಸಿ ಗಂಬೀರ ಗಾಯಗೊಂಡ ರುದ್ರ​‍್ಪ ಬಂಡಿವಡ್ಡರ, ಮಲ್ಲಮ್ಮ ಬಂಡಿವಡ್ಡರ, ಶಾರದಾ ಬಂಡಿವಡ್ಡರ, ರುಶಾಂತ ಬಂಡಿವಡ್ಡರ ಅವರನ್ನು ತಾಲೂಕಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಗಂಭಿರ ಗಾಯಗೊಂಡಿರುವುದು ಕಂಡಬುಂದ ಬಳಿಕ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆಂದು ವಿಜಯಪುರ ಜಿಲ್ಲಾ ಸರಕಾರ ಆಸ್ಪತ್ರೆಗೆ ದಾಖಲಿಸಿದ್ದಾರೆ. 

  ಈ ವೇಳೆ ಮನೆ ಬಿದ್ದ ಪರಿಣಾಮ ಮನೆಯಲ್ಲಿದ್ದ ಬಹುತೇಕ ಎಲ್ಲ ಸಾಮಗ್ರಿಗಳು, ದಿನಬಳಕೆ ವಸ್ತುಗಳು ನಾಶವಾಗಿದ್ದು. ಮಧ್ಯರಾತ್ರಿಯೇ ಘಟನೆ ನಡೆದಿದ್ದರೂ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆಯ ಯಾರೊಬ್ಬರೂ ಘಟನಾ ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶ ಹೋರಹಾಕಿದರು. 

  ಈ ವೇಳೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು  ಅರೇಮೂರಾಳ ಗ್ರಾಮದಲ್ಲಿ ಮನೆ ಬಿದ್ದು ಹಾನಿಗೊಳಗಾದ ಸ್ಥಳಕ್ಕೆ ಬೇಟಿ ನೀಡಿ ನೊಂದ ಕುಟುಂಭಕ್ಕೆ ಸಾಂತ್ವಾನ ಹೇಳಿದರಲ್ಲದೇ. ಸುದ್ದಿಗಾರರೊಂದಿಗೆ ಮಾತನಾಡಿ, ಬಂಡಿವಡ್ಡರ ಕುಟುಂಭವೂ ಮೊದಲೇ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ ಈಗಾಗಲೇ ಮನೆ ಬಿದ್ದ ಪರಿಣಾಮ ಗಾಯಗೊಂಡ ಕುಟುಂಭದವರಿಗೆ ಗುಣಮಟ್ಟ ಆರೋಗ್ಯ ಸೇವೆ ದೊರಕಿಸುವ ಮೂಲಕ ಹಾನಿಗೊಂಡಿರುವ ದಿನಬಳಕೆ ವಸ್ತುಗಳು, ದಿನಸಿ ಕಿಟ್ಟ್‌ ಗಳನ್ನು, ಹಾಸಿಗೆ ಹೊದಿಕೆಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ತುರ್ತಾಗಿ ಒದಗಿಸಲು ಮನೆ ತಮ್ಮ ವಸತಿ ಯೋಜನೆಯಡಿಯಲ್ಲಿ ಮನೆ ಹಾಕಿ ಸೂರು ಒದಗಿಸಬೇಕು ಎಂದು ತಾಲೂಕಾ ಪಂಚಾಯಿತಿ ತಾಲೂಕಾ ಕಾರ್ಯಕನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಅವರಿಗೆ ಮತ್ತು ಪ್ರಕೃತಿ ವಿಕೋಪದಡಿಯಲ್ಲಿ ಸರಕಾರದಿಂದ ನಿಗದಿ ಪಡಿಸಿದ ಪರಿಹಾರ ಪರಿಹಾರ ನೀಡಬೇಕು ತಹಶಿಲ್ದಾರ ಅವರಿಗೆ ಸೂಚಿಸಲಾಗಿದೆ. 

ಇಂತಹ ಘಟನೆಗಳ ನಡೆಯದಂತೆ ಮುಂಜಾಗೃತ ಕ್ರಮವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಆಯಾ ಗ್ರಾಮಗಳಲ್ಲಿ ಹೆಚ್ಚಿನ ನಿಗಾವಹಿಸಿ ಡಂಗೂರ ಸಾರಿ ಪ್ರಕೃತಿ ವಿಕೋಪದಿಂದಾಗುವ ಅನಾಹುತಗಳನ್ನು ಜನಜಾಗೃತಿ ಮೂಡಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಲಹೇ ನೀಡಲಾಗಿದೆ ಎಂದರು. 

-ನಡಹಳ್ಳಿ ಭೇಟಿ- 

 ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್‌.ಪಾಟೀಲ (ನಡಹಳ್ಳಿ) ಅವರು ತಾಲೂಕಿನ ಅರೇಮುರಾಳ ಗ್ರಾಮದಲ್ಲಿ ಮನೆಯೊಂದರಲ್ಲಿ ರಾತ್ರಿ ಮಲಗಿರುವಾಗ ಮನೆ ಕುಸಿದು ನಾಲ್ವರಿಗೆ ಗಾಯಗೊಂಡು ಸಧ್ಯ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಅರೇ ಮುರಾಳ ಗ್ರಾಮದಲ್ಲಿ ನಡೆದ ಘಟನಾ ಸ್ಥಳಕ್ಕೆ ಬೇಟಿ ನೀಡಿ ಸಮಯಕ್ಕೆ ಸರಿಯಾಗಿ ಬರದ ಸರಕಾರಿ ಅಧಿಕಾರಿಗಳ ಮೇಲೆ ಗರಂ ಆದರು. ಸರಕಾರದಿಂದ ಸೂಕ್ತ ಪರಿಹಾರ ಒಡಿಸುವಂತೆ ಉತ್ತಾಯಿಸಿದರು. ಬಳಿಕ ಘಟನೆಯಿಂದ ನೊಂದ ಕುಟುಂಭಗಳಿಗೆ ಸಾಂತ್ವಾನ ಹೇಳಿ ಪಡಿತರ ಕಿಟ್ಟ್‌ ವಿತರಿಸಿದರು.