4.89 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಿಟ್ನಾಳ ಅಡಿಗಲ್ಲು

4.89 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಿಟ್ನಾಳ ಅಡಿಗಲ್ಲು Foundation stone laid for various development works at a cost of Rs. 4.89 crores in Hitnala

ಕೊಪ್ಪಳ   12: ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು 4.89 ಕೋಟಿ ವೆಚ್ಚದಲ್ಲಿ ನೀರಲಗಿ, ಮತ್ತೂರು, ಹನಕುಂಟಿ, ತಿಗರಿ, ಬೆಟಗೇರಿ, ಮೋರನಾಳ, ಭೈರಾಪುರ, ಬೋಚನಹಳ್ಳಿ,ನಿಲೋಗಿಪುರ ಹಾಗೂ ಹಲವಾಗಲಿ ಗ್ರಾಮಗಳಲ್ಲಿ ವಿವಿಧಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದರು. ನಂತರ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ನಮ್ಮಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನಮ್ಮಕ್ಷೇತ್ರದ ನೀರಾವರಿ ಯೋಜನೆಗಳಿಗೆ 1000 ಕೋಟಿಅನುಧಾನತರುವ ಕೆಲಸ ನಾವು ಮಾಡಿದ್ದೇವೆಕ್ಷೇತ್ರವನ್ನು ಸಂಪೂರ್ಣ ನೀರಾವರಿ ಪ್ರದೇಶ ಮಾಡುತ್ತೇವೆ ಎಂದರು. 

ಬಹದ್ದೂರ್ ಬಂಡಿ ನವಲ್‌ಕಲ್‌ಏತ ನೀರಾವರಿಯೋಜನೆಗೆ 275 ಕೋಟಿಅನುಧಾನ ಮಂಜೂರು ಮಾಡಿಸಿದ್ದೇವೆ ಇದರಿಂದ ಸುಮಾರು 14000 ಎಕರೆ ನೀರಾವರಿ ಪ್ರದೇಶ. ಟ್ರಯಲ್‌ರನ್‌ಕೂಡ ಮಾಡಿದ್ದು ಕಾಲುವೆ ಕಾಮಗಾರಿ ಪ್ರಾರಂಭ ಆಗಿದೆ.2. ಅಳವಂಡಿ -ಬೆಟಗೇರಿಏತ ನೀರಾವರಿಯೋಜನೆ ಗೆ 211 ಕೋಟಿಅನುಧಾನ ಮಂಜೂರು ಮಾಡಿಸಿದ್ದೇವೆ, ಸಂಪೂರ್ಣಕಾಮಗಾರಿ ಮುಗಿದಿದ್ದುಒಂದು ತಿಂಗಳಿನಲ್ಲಿ ಈ ನೀರಾವರಿಯೋಜನೆಯನ್ನು ಲೋಕಾರೆ​‍್ಣ ಮಾಡಿರೈತರಿಗೆಅರೆ​‍್ಣ ಮಾಡುತ್ತೇವೆ.3.ಸಿಂಗಟಾಲೂರು ಏತ ನೀರಾವರಿಯೋಜನೆಗೆ ಸುಮಾರು 500 ಕೋಟಿ ಹಣವನ್ನು ಮಂಜೂರು ಮಾಡಿಸಿದ್ದು,ಟೆಂಡರ್‌ಕರೆಯಲಾಗಿದೆ ಮಧ್ಯಪ್ರದೇಶದ ಮಾಡೆಲ್ ನಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ ಟೆಂಡರ್ ಪ್ರಕ್ರಿಯೆ ಮುಗಿದ ನಂತರಕಾಮಗಾರಿ ಪ್ರಾರಂಭ ಮಾಡುತ್ತೇವೆ. 

  ಹಿಂದೆಕೂಡಟೆಂಡರ್‌ಕರೆಯಲಾಗಿತ್ತುಆದರೆಟೆಂಡರ್ ನಲ್ಲಿಯಾರೂಕೂಡ ಭಾಗವಹಿಸಿದೆ ಇರುವುದರಿಂದ ಮತ್ತೆಟೆಂಡರ್‌ಕರೆಯಲಾಗಿದೆ ಎಂದರು.ಅಳವಂಡಿ ಭಾಗದದಲ್ಲಿ ಹದಗೆಟ್ಟಿರುವಎಲ್ಲಾ ರಸ್ತೆಗಳಿಗೆ ಹಾಗೂ ಬ್ರಿಡ್ಜ್‌ ಗಳ ಅಭಿವೃದ್ಧಿಗೆಕೂಡಅನುಧಾನಕೊಡುವ ಕೆಲಸ ಮಾಡಿಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತೇವೆ.ಫೋಟೋಕ್ಯಾಪ್ಶನ್‌: ಕೊಪ್ಪಳ ತಾಲೂಕಿನ ಬೆಟಗೇರಿಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಮಾತನಾಡಿದರು.ಈ ಸಂಧರ್ಭದಲ್ಲಿ ಗವಿಸಿದ್ದಪ್ಪ ಕರಡಿ,ಗೂಳಪ್ಪ ಹಲಿಗೇರಿ, ಪ್ರಸನ್ನಗಡಾದ್, ಭರಮಪ್ಪ ಹಟ್ಟಿ, ತೋಟಪ್ಪಕಾಮನೂರು, ಭೀಮಣ್ಣ ಬೋಚನಹಳ್ಳಿ, ಭರಮಪ್ಪಕಂಬ್ಳಿ,ಭೀಮನಗೌಡ್ರು ದಳಪತಿ, ಶಿವಣ್ಣ ಮೋರನಾಳ, ತೋಟಪ್ಪ ಸಿಂಟ್ರ, ಶಿವಕುಮಾರ್ ಶೆಟ್ಟರ್, ಧರ್ಮಣ್ಣಕಂಪಸಾಗರ, ಹನಮೇಶ ಹೊಸಳ್ಳಿ, ಪಂಪಣ್ಣ ಪೂಜಾರ್, ಮುದಿಯಪ್ಪಅವೊಜಿ, ಪರಶುರಾಮ್ ಮೆಕ್ಕಿ, ನಿಂಗಪ್ಪ ಮೇಟಿ, ಮಹೆಬೂಬ್‌ಅರಗಂಜಿ, ಜಿಲ್ಲಾಕೆಡಿಪಿ ಸದಸ್ಯರವಿ ಕುರುಗೋಡು, ಕನಕರಾಜ ಹನಕುಂಟಿ, ಈರ​‍್ಪಕಂಪಸಾಗರ, ಪರಶುರಾಮ್ ಕೆರೆಹಳ್ಳಿ, ಗವಿಸಿದ್ದನಗೌಡ ಮುದ್ದಾಬಳ್ಳಿ, ಪ್ರಭುಕಲಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.