ಗೃಹ ಕಚೇರಿ ಮುಂದೆ ಬೃಹತ್ ತಮಟೆ ಚಳುವಳಿ ಮಾಡಿ ಶಾಸಕರ ಮಾಜಿ ಶಾಸಕ ಕೆ. ಬಸವರಾಜ್ ಹಿಟ್ನಾಳ್ ರ ವರಿಗೆ ಮನವಿ

Former MLA of MLA K. Appeal to Basavaraj Hitnal

ಗೃಹ ಕಚೇರಿ ಮುಂದೆ ಬೃಹತ್ ತಮಟೆ ಚಳುವಳಿ ಮಾಡಿ ಶಾಸಕರ  ಮಾಜಿ ಶಾಸಕ  ಕೆ. ಬಸವರಾಜ್ ಹಿಟ್ನಾಳ್ ರ ವರಿಗೆ ಮನವಿ  

 ಕೊಪ್ಪಳ 14  : ಒಳಮೀಸಲಾತಿ   ಭಿಕ್ಷೆ ಅಲ್ಲ ಅದು ನಮ್ಮ ಸಂವಿಧಾನ ಬದ್ಧ ಹಕ್ಕು  ಕೂಡಲೇ ಜಾರಿ ಮಾಡಬೇಕು ಎಂದು ರಾಜ್ಯ ಸಂಘಟನಾ ಸಂಚಾಲಕ  ಗಣೇಶ್ ಹೊರತಟ್ನಾಳ ಹೇಳಿದರು. ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟ ವತಿಯಿಂದ ಬೃಹತ್ ತಮಟೆ ಚಳುವಳಿಯು ನಗರದ ಬಸವೇಶ್ವರ ವೃತ್ತದಿಂದ ಪಾದಯಾತ್ರೆಯ ಮೂಲಕ  ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ರವರ ಗೃಹ ಕಚೇರಿ ಮುಂದೆ ಬೃಹತ್ ತಮಟೆ ಚಳುವಳಿ ಮಾಡಿ ಶಾಸಕರ ತಂದೆ ಮಾಜಿ ಶಾಸಕ  ಕೆ. ಬಸವರಾಜ್ ಹಿಟ್ನಾಳ್ ರ ವರಿಗೆ ಮನವಿ ಸಲ್ಲಿಸಲಾಯಿತು.  ರಾಜ್ಯ ಸಂಘಟನಾ ಸಂಚಾಲಕ ಗಣೇಶ್ ಹೊರತಟ್ನಾಳ ಮಾತನಾಡಿ ಸುಪ್ರೀಂಕೋರ್ಟಿನ ತೀಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೆ ಕಾಲಾಹರಣದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿಸೆಂಬರ್ 16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನೆಡಸಲಾಗುವುದು,ಆಗಸ್ಟ್‌ 1 ರಂದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀಪು ಪ್ರಕಟಿಸಿತು . ತೀಪು ಬಂದು ನಾಲ್ಕು ತಿಂಗಳಾದರೂ ರಾಜ್ಯ  ಸರ್ಕಾರ ಅಮೆಗತಿಯಲ್ಲಿ ಸಾಗಿದೆ . ಕಾಟಾಚಾರಕ್ಕೆ ನ್ಯಾ ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ , 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು . ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ , ಆಯೋಗಕ್ಕೆ ಬೇಕಾದ ಕಛೇರಿ , ಸಿಬ್ಬಂದಿ , ಹಣಕಾಸಿನ ನೆರವುಕೊಡದೆ ಕಾಲಾಹರಣ ನೆಡೆಸಲಾಗುತ್ತಿದೆ . ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ , ಸರಕಾರದ ಮುಂದೆ ನ್ಯಾ ಸದಾಶಿವ ಆಯೋಗ , ಮಾಧುಸ್ವಾಮಿ ಸಮಿತಿ ವರದಿ ಇದೆ . ಮಾಧುಸ್ವಾಮಿ ಯವರ ಸಮಿತಿ ಏಕೆ, ಸರ್ಕಾರದ ಈ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ಇದೇ ಡಿ 16 ರಂದು ಸೋಮವಾರ ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಕರೆಕೊಡಲಾಗಿದೆ . ಬೆಳಗಾವಿ ಸಮಾವೇಶದ ಮೊದಲು ರಾಜ್ಯದ ಎಲ್ಲ ಶಾಸಕರ ಮನೆಯಮುಂದೆ ಡಿಸೆಂಬರ್ 14 ರಂದು ಶನಿವಾರ ತಮಟೆ ಚಳವಳಿ ನೆಡಸಿ ವಿಧಾನಸೌಧದಲ್ಲಿ ಒಳಮೀಸಲಾತಿಯ  ಪರವಾಗಿ ಧ್ವನಿ ಎತ್ತಲು ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ನಾಗಲಿಂಗ ಮಳೆ ಕೊಪ್ಪ, ಮಂಜುನಾಥ್ ಮುಸಲಾಪುರ್, ರಮೇಶ್ ಬೇಳೂರು, ಪರಶುರಾಮ್ ಕೆಡದಾಳ, ಮಾರುತಿ ಬಿಕ್ಕನಹಳ್ಳಿ, ಮೈಲಾರ​‍್ಪ ಮೈನಹಳ್ಳಿ, ಅಣ್ಣಪ್ಪ ಪುರದ, ಕೃಷ್ಣ ಮುದ್ದಾಬಳ್ಳಿ, ವೀರೇಶ್ ಓಜನಹಳ್ಳಿ, ಮಹೇಶ್ ಕರ್ಕಿಹಳ್ಳಿ, ದೇವರಾಜ್ ಕಾತರಕಿ, ವಿನಾಯಕ ಕಿಡದಾಳ, ಮಹೇಶ್ ಕಂದಾರಿ, ಪಕೀರ​‍್ಪ ಬುದಗುಂಪಾ, ಮುದುಕಪ್ಪ ಚಿಲವಾಡಗಿ, ದುರಗೇಶ್ ಚಿಲವಾಡಗಿ ಸಮುದಾಯದ ಮುಖಂಡರು ಪಾಲ್ಗೊಂಡು ಯಶಸ್ವಿಗೊಳಿಸಿದರು.