ಕ್ಷಮೆ ಹಾಗೂ ಅಹಿಂಸೆಯೇ ಜೈನ ಧರ್ಮದ ಮೂಲ ಆಶಯ: ಅಭಿನವ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ
Forgiveness and non-violence are the core tenets of Jainism: Abhinava Channamallikarjuna Mahaswamij
ಲೋಕದರ್ಶನ ವರದಿ
ಹಾವೇರಿ, ಸೆ.16: ಧರ್ಮದ ಆಚರಣೆ ಉಳಿದಿರುವುದು ಜೈನ ಧರ್ಮದಲ್ಲಿ ಮಾತ್ರವಲ್ಲ, ಜೈನ ಧರ್ಮದಲ್ಲಿ ಕಠಿಣ ಧರ್ಮಾಚರಣೆಗಳಿಗೆ ಮಹತ್ವ ನೀಡಲಾಗಿದೆ. ಸಲ್ಲೇಖನ ವ್ರತ ನಿಯಮದಡಿ ಒಂದೊಂದೇ ಆಹಾರ ಪದಾರ್ಥವನ್ನು ತ್ಯಜಿಸಿ, ಪ್ರಾಣತ್ಯಾಗ ಮಾಡುವ ಪದ್ಧತಿಯೂ ಜೈನ ಧರ್ಮದಲ್ಲಿದೆ ಎಂದು ಹರಸೂರು ಬಣ್ಣದ ಮಠದ ಅಭಿನವ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.
ಹಾವೇರಿ ನಗರದ ಬಸತಿ ಓಣಿಯಲ್ಲಿರುವ ಶ್ರೀ ನೇಮಿನಾಥ ಭವನದಲ್ಲಿ ಬುಧವಾರ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರ ಕಮಿಟಿ, ಪ.ಪೂ. ಮುನಿಶ್ರೀ 108 ಸಂಭವನಂದಿ ಮಹಾರಾಜ್ ಟ್ರಸ್ಟ್, ರತ್ನತ್ರಯ ಮಹಿಳಾ ಸಮಾಜ, ಭಾರತೀಯ ಜೈನ ಮಿಲನ್ ಹಾಗೂ ಸಮ್ಯಕ್ ಜ್ಞಾನಜಿನ ಧರ್ಮ ಪ್ರಭಾವನಾ ಯುವಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ದಶಲಕ್ಷಣ ಮಹಾಪರ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಮೊದಲನೆಯದು ಸಾಮಾನ್ಯ ಮನುಷ್ಯ ವರ್ಗ. ಇವರು ಕಾಲಹರಣ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಎರಡನೆಯವರು ರಾಕ್ಷಸಮಾನವರು; ತಾವು ಅನುಭವಿಸಿದ ಕೆಟ್ಟದ್ದನ್ನು ಬೇರೆಯವರೂ ಅನುಭವಿಸುವಂತೆ ಮಾಡುತ್ತಾರೆ. ಮೂರನೆಯವರು ಮಹಾಮಾನವರು; ದಾನ-ಧರ್ಮಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಾಲ್ಕನೆಯವರು ದೇವಮಾನವರು; ಜಗವೆಲ್ಲ ನಗಲಿ, ಜಗದ ನೋವು ನಮಗಿರಲಿ ಎಂಬ ಮನೋಭಾವ ಹೊಂದಿರುತ್ತಾರೆ ಎಂದು ಸ್ವಾಮೀಜಿ ವಿವರಿಸಿದರು.
ಇಂದಿನ ಸಮಾಜದಲ್ಲಿ ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿದ್ದು, ಜನರಲ್ಲಿ ಸ್ವಾರ್ಥದ ಗುಣ ಹೆಚ್ಚಾಗಿದೆ. ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥ ಸೇವಾ ಗುಣ ಬೆಳೆಸಿಕೊಂಡಾಗ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ. ಸಮಾಜದ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು, ದಶಧರ್ಮಗಳ ಸೂತ್ರವನ್ನು ಪಾಲಿಸುವ ಮೂಲಕ ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 