ಜೀವಸಂಕುಲ ಉಳಿವಿಗೆ ಅರಣ್ಯ ಪ್ರಮುಖ ಪಾತ್ರ: ಪ್ರವೀಣ ಆದಗೊಂಡ

ಜೀವಸಂಕುಲ ಉಳಿವಿಗೆ ಅರಣ್ಯ ಪ್ರಮುಖ ಪಾತ್ರ: ಪ್ರವೀಣ ಆದಗೊಂಡ Forests play a vital role in the survival of biodiversity: Praveen Adagonda

ರಬಕವಿ-ಬನಹಟ್ಟಿ 01: ಮನುಕುಲ ಸೇರಿದಂತೆ ಸಕಲ ಜೀವರಾಶಿಗಳ ಅಳಿವು-ಉಳಿವು ಅರಣ್ಯ ಮತ್ತು ವನ್ಯಜೀವಿಗಳ ಸಮತೋಲನದ ಮೇಲೆ ನಿರ್ಭರವಾಗಿದೆ. ಮನುಷ್ಯನದುರಾಸೆ ಮತ್ತುದಮನಿಕೆಯ ಕ್ರಮಗಳಿಂದ ಅರಣ್ಯ ಮತ್ತು ವನ್ಯಜೀವಿಗಳಿಗೆ ಕುತ್ತುಎದುರಾಗಿದ್ದು, ಅವುಗಳ ಸಂರಕ್ಷಣೆಆಗದಿದ್ದರೆಇಡೀ ವಿಶ್ವವೇ ಅಸ್ತಿತ್ವ ಕಳೆದುಕೊಳ್ಳುತ್ತದೆಂದು ಜಮಖಂಡಿ ವಲಯಅರಣ್ಯಾಧಿಕಾರಿ ಪ್ರವೀಣಆದಗೊಂಡ ಕಳವಳ ವ್ಯಕ್ತಪಡಿಸಿದರು. 

ರಬಕವಿ-ಬನಹಟ್ಟಿ, ತೇರದಾಳ ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ ರಾಜ್ಯಚಿತ್ರಕಲಾ ಪರಿಷತ್ತು, ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದಚಿತ್ರಕಲಾ ಸ್ಪರ್ಧೆಯ ಪಾರಿತೋಷಕ ವಿತರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಜಗತ್ತಿನೆಲ್ಲೆಡೆಅರಣ್ಯ ಸಂಪತ್ತಿನಅಸಹಜ ಹಂಚಿಕೆಯಿದೆ. ಉಳಿಕೆಯ ಪ್ರಮಾಣವೂಗಣನೀಯವಾಗಿ ಕುಸಿಯುತ್ತಿದ್ದು, ಸಕಲ ಜೀವರಾಶಿಯ ಭದ್ರತೆ, ಅಸ್ತಿತ್ವಕ್ಕೆ ಅಪಾಯ ಬಂದಿದೆ. ಭೂಸವಕಳಿ ತಡೆ, ಪ್ರವಾಹದ ವೇಗಕ್ಕೆ ಮಿತಿ ಹಾಗೂ ಪ್ರಾಕೃತಿಕ ಮತ್ತುಜೈವಿಕಅಸಮತೋಲನ ತೊಡೆದು ಹಾಕುವಲ್ಲಿಅರಣ್ಯ ಮತ್ತುವನ್ಯಜೀವಿ ಸಂಪತ್ತುಅತ್ಯಗತ್ಯವಾಗಿದ್ದು, ಮಾನವತನ್ನದುರಾಸೆಯ ಫಲದಿಂದ ಫಲದಿಂದಇಡೀಜೀವಸಂಕುಲನಕ್ಕೆ ಕಂಟಕಪ್ರಾಯನಾಗಿದ್ದು, ಅರಣ್ಯ ಸಂರಕ್ಷಣೆಯತ್ತಚಿತ್ತಹರಿಸದಿದ್ದರೆತನ್ನ ವಿನಾಶ ತಾನೇ ಮಾಡಿಕೊಂಡಂತಾಗುತ್ತದೆ. ಸ್ವಸ್ಥಜೀವನಕ್ಕಾಗಿ ಶುದ್ಧ ಗಾಳಿ, ನೀರು ಮತ್ತು ಫಲವತ್ತಾದ ಭೂಮಿಗಾಗಿ ಸಸಿಗಳನ್ನು ನೆಟ್ಟು, ಸಂರಕ್ಷಿಸಿ ಅರಣ್ಯ ಪ್ರದೇಶ ವೃದ್ಧಿ ಮಾಡಬೇಕಿದೆಎಂದು ಹೇಳಿದರು. 

ಬನಹಟ್ಟಿಅರಣ್ಯ ನೀರೀಕ್ಷಕ ಮಹಾವೀರಆಲಗೂರ ಮಾತನಾಡಿ, ಇಂದಿನ ಮಕ್ಕಳು ಮುಂದಿನ ಭವಿಷ್ಯದ ಭದ್ರ, ಶುದ್ಧ ವಾತಾವರಣಕ್ಕಾಗಿಈಗಿನಿಂದಲೇ ಸಸಿ ನೆಟ್ಟು ಹೆಮ್ಮರವಾಗಿಸಲು ಮುಂದಾಗಬೇಕು. ಪ್ರತಿ ಮಗು ತನ್ನತಾಯಿಯ ಹೆಸರಲ್ಲಿ ಸಸಿ ನೆಟ್ಟು ಸಂರಕ್ಷಿಸಲು ಮುಂದಾದರೆ ಮುಂದಿನ ದಿನಗಳು ನಮಗೆ ಬದುಕಲು ಸೂಕ್ತವಾಗುತ್ತವೆ.  

ಪತ್ರಕರ್ತಶಿವಾನಂದ ಮಹಾಬಲಶೆಟ್ಟಿ ಪ್ರಾಸ್ತಾವಿಕ ಮಾತುಗಳಾಡಿದರು. ಪ್ರಾಚಾರ್ಯಎ.ಕೆ.ಕಾಡದೇವರ, ದೈಹಿಕ ಶಿಕ್ಷಣ ಸಂಯೋಜಕ ಶಿವಾನಂದ ಬಸಗೊಂಡನವರ, ಎಂ.ಆರ್‌. ಮುಲ್ಲಾ, ಎಸ್‌.ಕೆ. ಮುನ್ನೊಳ್ಳಿ, ಸರ್ಕಾರಿ ನೌಕರರ ಸಹಕಾರಿ ಸಂಘದಅಧ್ಯಕ್ಷ ಬಿ.ಡಿ.ನೇಮೇಗೌಡ ಸೇರಿದಂತೆತಾಲೂಕಿನಎಲ್ಲ ಮಕ್ಕಳು, ಶಿಕ್ಷಕರು ಇದ್ದರು.