4 ಅಡಿ ಉದ್ದದ ಮೊಸಳೆ ಹಿಡಿದು ನದಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ

    4 ಅಡಿ ಉದ್ದದ ಮೊಸಳೆ ಹಿಡಿದು ನದಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ  Forest Department personnel captured a 4-foot-long crocodile and released it into the river

ಲೋಕದರ್ಶನ ವರದಿ 

ದಾಂಡೇಲಿ  24:  ದಾಂಡೇಲಿಯಲ್ಲಿ ಸುರಿದ ಮಳೆಯ ರಭಸಕ್ಕೆ ಕಾಳಿನದಿಯಲ್ಲಿದ್ದ ಮೊಸಳೆಯೊಂದು ಪಟೇಲ ನಗರದ  ಗಲ್ಲಿ ಗಲ್ಲಿಯ ರಸ್ತೆಗಳಲ್ಲಿ ತಿರುಗಾಡತೊಡಗಿತು. ರಾತ್ರಿಯ ವೇಳೆ ಕಾಣಿಸಿಕೊಂಡ ಈ ಮೊಸಳೆಯಿಂದಾಗಿ  ಸ್ಥಳೀಯರು ಆತಂಕಗೊಂಡು ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದರು. 4 ಅಡಿ ಉದ್ದದ  ಮೊಸಳೆ ಮರಿಯನ್ನು ಉರಗತಜ್ಞ ರಜಾಕ್ ಶಾ ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಆಗಮಿಸಿ ಸುರಕ್ಷಿತವಾಗಿ ಹಿಡಿದು ನದಿಗೆ ಬಿಟ್ಟರು. ಸ್ಥಳೀಯ ಜನರು ನಿಟ್ಟುಸಿರು ಬಿಡುವಂತಾಯಿತು. ಮೇಲಿಂದ ಮೇಲೆ ಈ ಭಾಗದಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು,  ಜನರ ಸುರಕ್ಷತೆಗಾಗಿ  ನದಿಯ ದಡದಲ್ಲಿ ರಕ್ಷಣಾ ಬೇಲಿಯನ್ನು ಇಲಾಖೆಯಿಂದ ನಿರ್ಮಿಸಿಕೊಡಬೇಕೆಂದು  ಸ್ಥಳೀಯರು ಆಗ್ರಹಿಸಿದರು.