ವಾಹನ ಚಲಾಯಿಸುವಾಗ ರಸ್ತೆಯ ನಿಯಮಗಳನ್ನು ಪಾಲಿಸಿ- ಮಹಮ್ಮದ್ ಫಸುದ್ದೀನ್
Follow the rules of the road while driving - Mohammed Fasuddin
ತಾಳಿಕೋಟೆ 19: ಪಟ್ಟಣದ ಶ್ರೀಘನಮಠೇಶ್ವರ ಶಿಕ್ಷಣಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಮುದ್ದೇಬಿಹಾಳ ಹಾಗೂ ಎಲ್ಲ ಸರಕಾರಿ ಇಲಾಖೆಗಳ ಸಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಂತ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ -2026, ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಒಂದು ರಸ್ತೆ ಸುರಕ್ಷತೆ ಜಾಗೃತಿಯನ್ನು ಕುರಿತು ಮಾತನಾಡಿದ ಮುದ್ದೇಬಿಹಾಳ ತಾಲೂಕು ಪೊಲೀಸ್ ಠಾಣೆಯ ಸಿಪಿಐ ಮಹಮ್ಮದ್ ಫಸುದ್ದೀನ್ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ ಅಪರಾಧ ತಡೆಯ ಕ್ರಮಗಳ ಬಗ್ಗೆ ಹಾಗೂ ಮಾದಕ ವಸ್ತುಗಳಿಂದ ವ್ಯಸನಿಗಳಾಗದೇ ಇರುವಂತೆ ಅನೇಕ ವಿಚಾರಧಾರೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು .
ದುಶ್ಚಟಗಳಿಗೆ ದಾಸರಾಗದೆ ದೂರವಿರಬೇಕು ಮತ್ತು ಬೈಕ್ ಓಡಿಸುವಾಗ ಕಾರು ಚಲಾಯಿಸುವಾಗ ರಸ್ತೆಯ ನಿಯಮಗಳನ್ನು ಪಾಲಿಸಿ ನಮ್ಮ ಜೀವನಕ್ಕೂ ಮತ್ತು ನಮ್ಮ ಅವಲಂಬಿತರಿಗೂ ಯಾವುದೇ ರೀತಿಯ ಸಂಕಷ್ಟಕ್ಕೆ ಈಡು ಮಾಡದೆ ಸರಿಯಾದ ರಸ್ತೆ ನಿಯಮಗಳನ್ನು ಪಾಲಿಸಿ ರಸ್ತೆಯಲ್ಲಿ ಸಂಚರಿಸಬೇಕು ಎಂದು ಹೇಳಿದರು ಈ ಸಮಯದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕಶಿವಾನಂದ ಸುಣಧೋಳಿ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಟಿ.ವ್ಹಿಶೆಟ್ಟಿ, ಜಿ.ಎನ್.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆ ಕಲ್ಮೇಶಸರ್ ನಡೆಸಿಕೊಟ್ಟರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 