ಜಾನಪದ ಕಲಾವಿದ ಗುರುನಾಥಗೆ ಕುರುಬರ ಸಂಘದಿಂದ ಸನ್ಮಾನ

ಜಾನಪದ ಕಲಾವಿದ ಗುರುನಾಥಗೆ ಕುರುಬರ ಸಂಘದಿಂದ ಸನ್ಮಾನ   Folk artist Gurunath honored by Shepherds' Association

ಜಾನಪದ ಕಲಾವಿದ ಗುರುನಾಥಗೆ ಕುರುಬರ ಸಂಘದಿಂದ ಸನ್ಮಾನ   

ದೇವರಹಿಪ್ಪರಗಿ 13: ತಾಲೂಕು ಕುರಬರ ಸಂಘದ ಪರವಾಗಿ ಇತ್ತೀಚಿಗೆ ಬಸವಚೇತನ ಪ್ರಶಸ್ತಿ ವಿಜೇತ ಜಾನಪದ ಕಲಾವಿದ ಗುರುನಾಥ ಮುರಡಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರದಂದು ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಹಲವಾರು ಮುಖಂಡರು ಮಾತನಾಡಿ, ಜಾನಪದ(ಹಾಡಕಿ) ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಕಾಲ ಕೌಶಲ್ಯ ಹಾಗೂ ತಮ್ಮ ಸಮರ್ಥ್ಯದ ಮೂಲಕ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾಗಿದ್ದಾರೆ. ಹಲವಾರು ರಾಜ್ಯ,ಜಿಲ್ಲಾ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದು ಸದಾ ಕ್ರಿಯಾಶೀಲ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದು ನಮ್ಮ ಸಮಾಜದ ಹೆಮ್ಮೆ ಇಂತಹ ಸಾಧಕರನ್ನು ಸನ್ಮಾನಿಸುವ ಮೂಲಕ ಅವರು ತಮ್ಮ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.    ಮುಖಂಡರುಗಳಾದ ಸಿದ್ದು ಬುಳ್ಳಾ, ಪರಮಾನಂದ ಪೂಜಾರಿ, ಶರಣು ಪೂಜಾರಿ, ಸುನಿಲ ಮಾಗಿ, ಪ್ರಕಾಶ ದೊಡಮನಿ, ಆನಂದ ವಗ್ಗರ, ಭೀರು ದೇವೂರ, ಶಿವಾನಂದ ಕೆರುಟಗಿ, ರಾವುತ ಕರೆಕ್ಕಿ, ಸಿದ್ದು ಬೊಮ್ಮನಳ್ಳಿ, ಸಿದ್ದು ದೊಡ್ಡಿಣಿ, ಶರಣು ಮನಗೂಳಿ, ಜಕ್ಕು ದೊಡ್ಡಿಣಿ, ಭೀಮು ಬುಳ್ಳಾ, ಯಮನು ದೇವಣಗಾಂವ, ಯಲ್ಲು, ಮಾಳು ಹೊನ್ನಮಿಸಿ, ಚಂದು ಪೂಜಾರಿ, ಅಮ್ಮೋಗಿ ಕಗ್ಗೋಡ, ಕರೆಪ್ಪ ಕಾಮನಕೇರಿ, ರಾಮು ವಗ್ಗರ, ವಿಠ್ಠಲ ಮಣ್ಣೂರ, ಹಣಮಂತ ಇಬ್ರಾಹಿಮಪುರ ಸೇರಿದಂತೆ ಹಲವಾರು ಜನ ಸದಸ್ಯರು ಉಪಸ್ಥಿತರಿದ್ದರು.