ಹಾವೇರಿ 31:
ಜಾಗತಿಕ ಮಟ್ಟದಲ್ಲಿ ಕನರ್ಾಟಕ ಜಾನಪದ ವಿಶ್ವವಿದ್ಯಾಲಯ ಬೆಳೆಯಲು ಕನರ್ಾಟಕ ಸಕರ್ಾರ ಎಲ್ಲ ನೆರವು ಒದಗಿಸಬೇಕು
ಎಂದು ಖ್ಯಾತ ಚಿಂತಕ, ಸಾಹಿತಿ, ನಾಡೋಜ ಪ್ರೊ.ಬರಗೂರ ರಾಮಚಂದ್ರಪ್ಪ
ಹೇಳಿದರು.
ಗೊಟಗೋಡಿಯ ಹಿರೇತಿಟ್ಟು ರಂಗ ಬಯಲು ಮಂದಿರದಲ್ಲಿ
ಬುಧವಾರ ಜರುಗಿದ ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವ ಭಾಷಣಮಾಡದ ಅವರು, ಜಾನಪದ ವಿಶ್ವವಿದ್ಯಾಲಯದ ಬದುಕು, ಬೆಳವಣಿಗೆ ಹಾಗೂ ಈ ವಿಶ್ವವಿದ್ಯಾಲಯದಲ್ಲಿ
ಕಲಿತ ವಿದ್ಯಾಥರ್ಿಗಳ ಭವಿಷ್ಯ ಏನು ಎಂಬ ಅನುಮಾನ
ಪ್ರಸ್ತುತ ನನ್ನನ್ನು ಸೇರಿದಂತೆ ಹಲವರನ್ನು ಕಾಡುತ್ತಿದೆ ಎಂದರು.
ಜಾನಪದ ವಿಶ್ವವಿದ್ಯಾಲಯ ಆರಂಭಗೊಳ್ಳುವ
ಸಂದರ್ಭದಲ್ಲಿದ್ದ ಸಂಭ್ರಮ, ಸಂತೋಷ ಈಗ ಇಲ್ಲದಾಗಿದೆ. ಸ್ಥಳೀಯವಾಗಿ
ಜನರಿಂದ ಮಾನ್ಯತೆ ದೊರೆತರೂ ಸಕರ್ಾರದಿಂದ ಸೌಲತ್ತುಗಳು, ಸೌಲಭ್ಯಗಳು, ಹಣಕಾಸಿನ ಸೌಕರ್ಯ ದೊರಕುತ್ತಿಲ್ಲ ಎಂಬುದು ವಿಷಾಧಕರ ಸಂಗತಿಯಾಗಿದೆ ಎಂದು ಹೇಳಿದರು.
ಈ ವಿವಿಗೆ ಬಿಡುಗಡೆಯಾದ
ಅನುದಾನ ಸಂಬಳ ನಿರ್ವಹಣೆಗೆ ಸಾಕಾಗುತ್ತಿಲ್ಲ.
ಇನ್ನೂ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆ ವಿಸ್ತರಣೆ ಹೇಗೆ? ವಿವಿಗೆ ಬೇಕಾದ ಹಣಕಾಸಿನ ನೆರವನ್ನೂ ಸಕರ್ಾರ ನೀಡುತ್ತಿಲ್ಲ. ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ.
ಹೀಗಾದರೆ ಸಂಶೋಧನಾ ಚಟುವಟಿಕೆ, ಶೈಕ್ಷಣಿಕ ಚಟುವಟಿಕೆ, ವಿಸ್ತರಣಾ ಚಟುವಟಿಕೆ ನಡೆಸುವುದು ಹೇಗೆ? ವಿಶ್ವವಿದ್ಯಾಲಯಕ್ಕೆ ಘನತೆ ತರುವುದು ಹೇಗೆ
ಎಂದು ಪ್ರಶ್ನಿಸಿದರು.
ಜಾನಪದ ವಿಶ್ವವಿದ್ಯಾಲಯ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದ ವಿಶ್ವವಿದ್ಯಾಲಯ.
ನಮ್ಮ ವಿಶ್ವವಿದ್ಯಾಲಯಗಳು ಪ್ರಸ್ತುತ ದಿನಮಾನಗಳಲ್ಲಿ 'ವಿತ್ತ' ವಿಶ್ವವಿದ್ಯಾಲಯಗಳಾಗಿವೆ. ವಾಣಿಜ್ಯ ನೆಲೆಯಲ್ಲಿ ನಮ್ಮ ವಿಶ್ವವಿದ್ಯಾಲಯಗಳು ವ್ಯವಹರಿಸುತ್ತಿವೆ.
ಬೇಡಿಕೆ ಇರುವ, ಹಣ ತಂದುಕೊಡುವ
ಶೈಕ್ಷಣಿಕ ವಿಷಯಗಳಿಗೆ ಆದ್ಯತೆ ನೀಡುತ್ತಿವೆ. ಹೋಟೆಲ್ ಮ್ಯಾನೇಜ್ಮೆಂಟ್, ಆಕರ್ಿಟಚ್ಚರ್, ಫ್ಯಾಶೆನ್ ಡಿಸೈನಿಂಗ್ ಕೋಸರ್್ಗಳನ್ನು ಆರಂಭಿಸಲು
ಆಸಕ್ತಿ ತೋರುತ್ತಿವೆ. ಮೂಲವಿಜ್ಞಾನ, ಸಾಮಾಜಿಕ ವಿಜ್ಞಾನ ವಿಷಯಗಳ ಆರಂಭಿಸುವ ಆಸಕ್ತಿ ಇಲ್ಲದಾಗಿದೆ. ಈ ಕಾರಣಕ್ಕಾಗಿ ನಮ್ಮ
ಮೂಲ ಸಂಸ್ಕೃತಿಯ ಕಲಿಕೆಗೆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದರು.
ಜಾನಪದ ವಿಶ್ವವಿದ್ಯಾಲಯಕ್ಕೆ ಹೊಸರೂಪ ನೀಡಬೇಕಾಗಿದೆ. ಪಠ್ಯವಿಷಯಗಳನ್ನು ಪುರ್ನರ್ಸಂಯೋಜನೆಯಾಗಬೇಕಿದೆ. ಪದವಿ ಹಂತದಲ್ಲಿ ಜಾನಪದ
ವಿಷಯವನ್ನು ಐಚ್ಚಿಕ ವಿಷಯವಾಗಿ ಅಧ್ಯಯನ ಮಾಡಲು ಅಳವಡಿಸಬೇಕು. ಇದರಿಂದ ಜಾನಪದ ವಿಷಯ ಕಲಿತ ವಿದ್ಯಾಥರ್ಿಗಳಿಗೆ
ಭವಿಷ್ಯದಲ್ಲಿ ಉದ್ಯೋಗ ಅವಕಾಶಗಳು ದೊರಕುವಂತಾಗುತ್ತವೆ. ನಮ್ಮ ಬದುಕಿನ ಭಾಗವಾದ
ಜಾನಪದ ಜ್ಞಾನವು ಉಳಿಯುತ್ತದೆ. ಅನೇಕ ಜಾನಪದ ವ್ಯಾಸಂಗಾಸಕ್ತರ
ಬದುಕು ಬೆಳೆಯುತ್ತದೆ. ಇಲ್ಲವಾದರೆ ಜಾನಪದ ವಿಶ್ವವಿದ್ಯಾಲಯವು ಆತ್ಮರತೀಯ ಹೆಮ್ಮೆ
ಆನೆ ಆಗುತ್ತದೆ ಎಂದು ಎಚ್ಚರಿಸಿದರು.
ಗೌರವ ಡಾಕ್ಟರೇಟ್ ಪದವಿ
ಸ್ವೀಕರಿಸಿದ ಕಲಾವಿದ ಟಿ.ಬಿ.ಸೊಲಬಕ್ಕನವರ
ಮಾತನಾಡಿ, ಜಾನಪದ ವಿಷಯ ಕಲಿತ ವಿದ್ಯಾಥರ್ಿಗಳಿಗೆ
ಉದ್ಯೋಗಾಧಾರಿತ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕಲಿಕೆಯ ಕ್ರಮ ರೂಪಿತವಾಗಬೇಕು. ಶಾಲಾ
ಕಾಲೇಜುಗಳಲ್ಲಿ ಜನಪದ ಕಲೆ, ಸಂಸ್ಕೃತಿ,
ಜನಪದ ಬದುಕಿನ ಪಠ್ಯಗಳು ಅಳವಡಿಸಬೇಕು ಎಂದು ಮನವಿ ಮಾಡಿಕೊಂಡರು.
ಜಾನಪದ ವಿವಿಯ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ್ ಅವರು ಘಟಿಕೋತ್ಸವ ಉದ್ಘಾಟಿಸಿ
ಪದವಿ ಪ್ರದಾನ ಮಾಡಿದರು. ಶಿಕ್ಷಣ ಪರಿಷತ್ ಸದಸ್ಯ ಶ್ರೀರಾಮ ಇಟ್ಟಣ್ಣನವರ, ಮೌಲ್ಯಮಾಪನ ಕುಲಸಚಿವ ಡಾ.ಎಂ.ಎನ್.ವೆಂಕಟೇಶ್ ಉಪಸ್ಥಿತರಿದ್ದರು. ಕುಲಸಚಿವ ಪ್ರೊ.ಚಂದ್ರಶೇಖರ ಸ್ವಾಗತಿಸಿದರು.
ಘಟಿಕೋತ್ಸವ ಸಮಾರಂಭದಲ್ಲಿ ಸವಣೂರ ಶಿಗ್ಗಾಂವ ಶಾಸಕರಾದ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾಥರ್ಿಗಳು, ಪೋಷಕರು ಭಾಗವಹಿಸಿದ್ದರು.
ಪದವಿ
ಪ್ರದಾನ: ಟಿ.ಬಿ.ಸೊಲಬಕ್ಕನವರಿಗೆ
ಗೌರವ ಡಾಕ್ಟರೇಟ್, ಎಚ್.ಎನ್.ಮೀರಾಗೆ
ಡಾಕ್ಟರೇಟ್, ಮೊದಲ ರ್ಯಾಂಕ್ ಪಡೆದ
ಸ್ನಾತಕೋತ್ತರ ವಿದ್ಯಾಥರ್ಿಗಳಾದ ಸುಜಾತಾ ಮಲ್ಲೊಳ್ಳಿ, ಅರುಣ
ವಿ ಬಣಕಾರ, ನಂದಿ ಆರ್.ನಾಗೇಂದ್ರ, ಮಾಳಗಿ
ದೇವೇಂದ್ರಪ್ಪ, ಈರಣ್ಣ ಬಿ. ಲಕ್ಕಣ್ಣನವರ, ಬಾಗಣ್ಣ
ಮಹಿನಾಳ, ಶ್ರೀದೇವಿ ಅನಗೋಡಿಮಠ ವಿದ್ಯಾಥರ್ಿಗೆ ಕುಲಪತಿಗಳು ಪದವಿ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ 29 ಸ್ನಾತಕೋತ್ತರ,
23 ಪಿ.ಜಿ.ಡಿಪ್ಲೋಮಾ, 937 ಡಿಪ್ಲೋಮಾ
ಶಿಕ್ಷಣ ಹಾಗೂ
341 ವಿವಿಧ ಜಾನಪದ ವಿಷಯದಲ್ಲಿ ಸಟರ್ಿಫಿಕೇಟ್ ಶಿಕ್ಷಣ ಪಡೆದ ವಿದ್ಯಾಥರ್ಿಗಳಿಗೆ
ಪದವಿ ಘೋಷಣೆ ಮಾಡಿದರು.