ಎಲ್ ಐ ಸಿ ಬ್ಯಾಡಗಿಯ ಉಪಶಾಕೆ ಕಾರ್ಯಲಯದಲ್ಲಿ ಧ್ವಜರೋಣ ಕಾರ್ಯಕ್ರಮ
Flag hoisting program at LIC Byadgi Upashake office
ಬ್ಯಾಡಗಿ 27 : 77 ನೇ ಗಣರಾಜೋತ್ಸವ ಅಂಗವಾಗಿ ಎಲ್ ಐ ಸಿ ಬ್ಯಾಡಗಿಯ ಉಪಶಾಕೆ ಕಾರ್ಯಲಯದಲ್ಲಿ ಧ್ವಜರೋಣ ಕಾರ್ಯಕ್ರಮ ನೇರೆವೆರಿಸಿ ಮಾತನಾಡಿದ ಗೋಪಾಲಕೃಷ್ಣ ಆಚಾರ‌್ಯ ಶಾಕಾಧಿಕಾರಿ ಬ್ಯಾಡಗಿ ಇವರು ಭಾರತ ಸಂವಿಧಾನ ಜಗತಿನಲ್ಲಿ ಅಗ್ರ ಮಾನ್ಯ ಸಂವಿಧಾನಗಳ್ಳಿ ಒಂದಾಗಿದೇ ಎಂದು ಅವರು ಹೇಳಿದರು. ಸ್ವಾತಂತ್ರ ಸಾಮಾನ್ಯತೆ ಸಾಮಾಜಿಕ ಆರ್ಥೀಕ ಹಾಗೂ ರಾಜಕೀಯ ನ್ಯಾಯದ ದೇಯಗಳಲ್ಲಿ ಪ್ರತಿನಿಧಿಸುವ ಈ ಸಂವಿಧಾನವು ಜಗತ್ತಿಗೆ ದಾರೀದೀಪವಾಗಿದೆ ಎಂದು ಹೇಳಿದರು.
ಭಾರತೀಯ ಜೀವವಿಮಾ ನಿಗಮ ರಾಷ್ಟರದಲ್ಲಿ ನಂಬರ 1 ಸ್ಥಾನದಲ್ಲಿ ಇದೆ ಎಂದು ಹೆಮ್ಮಯ ವಿಷಯ ನಮ್ಮ ಪ್ರತಿನಿಧಿಗಳಿಗೆ ಹೇಳಿದರು ಹಾಗೂ ಆರ್ಥಿಕವಾಗಿ ಎಲ್ ಐ ಸಿ ಯು ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷವು ಹಣಕಾಸಿನ ನೇರವನ್ನು ನೀಡುವಲ್ಲಿ ಅಗ್ರ ಸ್ಥಾನದಲ್ಲಿದೆ ಹಾಗೂ ದೇಶದಲ್ಲಿ ಜೀವವಿಮಾ ಪ್ರತಿನಿಧಿಗಳ ಹೇಚ್ಚಿನ ಸಂಖ್ಯೆಯಲ್ಲಿ ಇರುವುದರಲ್ಲಿ ಅವರ ಶ್ರಮದಿಂದ ರಾಷ್ಟದಲೇ ನಂಬರ 1 ಆಗಲು ಕಾರಣ ಎಂದು ಹೇಳಿದರು.
ಇದೆ ಸಂಧಂರ್ಭದಲ್ಲಿ ಅಭಿವೃದ್ದಿ ಅಧಿಕಾರಿಗಳಾದ ಜಡ್ ಎಮ್ ಕಾಜಿ ಮಾತನಾಡಿ ಅಂಬೇಡ್ಕರ ಬರೆದಂತಹ ಸಂವಿಧಾನವನ್ನು ಜಗತ್ತಿನ ವಿವಿಧ ರಾಷ್ಟಗಳು ಸಂವಿಧಾನವನ್ನು ತೊಡಗಿಸಿಕೊಳ್ಳುವುದನ್ನು ಇತ್ತಿಚಿನ ದಿನಗಳಲ್ಲಿ ಕಂಡು ಬರುತ್ತದೆ ಹಾಗೂ ಅವರು ಅಂಬೇಡ್ಕರ ಬರೆದಂತಹ ಸಂವಿಧಾನವನ್ನು ಅದ್ಯಾಯನ ಮಾಡುತ್ತಿರುವುದು ಕಂಡು ಬಂದಿದೆ ಎಂದು ಹೇಳಿದರು.
ಹಾಗೂ ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ನಾಗೇಶ ಗುತ್ತಲ ಮಾತನಾಡಿ ಡಾ. ಬಾಬಾಸಾಹೇಬ್ ಅಂಬೇಡ್ಕರರವರು ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ ಸಮಾನತೆ ಮತ್ತು ಭ್ರಾತೃತ್ವದಲ್ಲಿ ನಂಬಿಕೆಯನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ. ಗಣತಂತ್ರದ ಅತಿದೊಡ್ಡ ಹಬ್ಬವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಅಸಮಾನತೆ ರಹಿತ ಸಮಾಜ ನಿರ್ಮಾಣಕ್ಕೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ತನ್ನ ಹೊನಿಗಾರಿಕೆ ಮತ್ತು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕಾಗಿದೆ. ಇದೇ ಸಂವಿಧಾನಕ್ಕೆ ಸಲ್ಲಿಸಬಹುದಾದ ದೊಡ್ಡ ಗೌರವ. ಈ ನಿಟ್ಟಿನಲ್ಲಿ ನಾವೆಲ್ಲ ಸಂಕಲ್ಪಮಾಡಿ ಎಲ್ ಐ ಸಿ ಎಳಿಗೆಗಾಗಿ ಕೊಟ್ಟಂತಹ ಬ್ಯಾಡಗಿ ಉಪ ಶಾಕೆಗೆ ನೀಡಿದಂತಹ ಟಾರಗೇಟನ್ನು ಮಾರ್ಟ 31 ರೂಳಗೆ ಎಲ್ಲಾ ಪ್ರತಿನಿಧಿಗಳು ಸೇರಿ ಪೂರ್ಣಗೊಳಿಸಲು ಹೇಳಿದರು. ಹಾಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿಕೊಳ್ಳಬೆಕೆಂದು ಪ್ರತಿನಿಧಿಗಳಿಗೆ ಕಿವಿ ಮಾತು ಹೇಳಿದರು.
ಇದೆ ಸಂಧಂರ್ಭದಲ್ಲಿ ಅಬಿವೃದ್ದಿ ಅಧಿಕಾರಿಗಳಾದ ನೀಲಪ್ಪ ಕೋಳೇರ, ವಿಜಯಬಾಬು ಹಡಪದ ಕ್ಲಿಯಾ ಪ್ರತಿನಿಧಗಳಾದ ಸಿ ಪಿ ಹುದ್ದಾರ, ಮಂಜಪ್ಪ ರಂಗೇರಿ, ಮುತ್ತಣ್ಣ ಕೆರೋಡಿ, ಎಮ್ ಬಿ ಅಂಗಡಿ, ಮಾಲತೇಶ ಕಮ್ಮಾರ, ಗಣೇಶ ಸೋಮನಕಟ್ಟಿ, ಗೀರೀಶ ಬೀಜಾಪುರ, ಜಾಕೀರಹುಸೇನ ಅಗಸಿಬಾಗಿಲ, ಶಾಂತಪ್ಪ ಕೋಟಿಯವರ, ಪುಟ್ಟಪ್ಪ ರಾಮಗೊಂಡನಹಳ್ಳಿ, ಗಣೇಶ ಘಾಳಪೂಜಿ, ಅಮೃತಾ ಹೊಸಮನಿ, ಸುಭಾಷ ಮೋಟೇಬೆನ್ನೂರ, ಹರೀಶ ಹೋಸೂರ, ಇನ್ನು ಮೊದಲದವರು ಉಪಸ್ಥಿತರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 