ಅರಬ್ಬೀ ಸಮುದ್ರದಲ್ಲಿ ಮೀನು ಬೇಟೆ ಆರಂಭ : ವಿರಾಮದ ನಂತರ ಯಾಂತ್ರಿಕ ಬೋಟಗಳ ಸದ್ದು

ಅರಬ್ಬೀ ಸಮುದ್ರದಲ್ಲಿ ಮೀನು ಬೇಟೆ ಆರಂಭ : ವಿರಾಮದ ನಂತರ ಯಾಂತ್ರಿಕ ಬೋಟಗಳ ಸದ್ದು Fishing begins in the Arabian Sea: After a break, the sound of mechanical boats

ಅರಬ್ಬೀ ಸಮುದ್ರದಲ್ಲಿ ಮೀನು ಬೇಟೆ ಆರಂಭ : ವಿರಾಮದ ನಂತರ ಯಾಂತ್ರಿಕ ಬೋಟಗಳ ಸದ್ದು 

ಕಾರವಾರ 02:  60 ದಿನಗಳ ನಿಷೇಧ ಅವಧಿ ಮುಗಿದ ಬೆನ್ನಲ್ಲೇ ಮೀನು ಬೇಟೆಗಾಗಿ ಅರಬ್ಬೀ  ಸಮುದ್ರಕ್ಕೆ ಇಳಿದ ಟ್ರಾಲರ್ ಬೋಟುಗಳು ಎರಡನೇ  ದಿನ  ಭರ್ಜರಿ ಪ್ರಮಾಣದಲ್ಲಿ ಸಿಗಡಿ ಫಿಶ್ ಕ್ಯಾಚಿಂಗ್   ಆಗಿದೆ .ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರು ಸೇರಿದಂತೆ ಬೇಲೆಕೇರಿ, ತದಡಿ, ಹೊನ್ನಾವರ, ಭಟ್ಕಳದ ಬಂದರುಗಳಿಂದ ಟ್ರಾಲರ್ ಬೋಟುಗಳು ಶುಕ್ರವಾರದಿಂದ ಮೀನುಗಾರಿಕೆ ಚಟುವಟಿಕೆ ಆರಂಭಿಸಿವೆ. ಬಹುತೇಕ ಬೋಟುಗಳಿಗೆ ಉತ್ತಮ ಪ್ರಮಾಣದಲ್ಲಿ ಕೆಂಪು ಶೆಟ್ಲಿ ಮೀನುಗಳ ರಾಶಿ ಲಭಿಸಿದೆ.ಜೂನ್ 1 ರಿಂದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಅವಧಿ ಜಾರಿಯಾಗಿದ್ದರಿಂದ ಮೀನುಗಾರಿಕೆ ಬೋಟುಗಳು ಬಂದರು ಪ್ರದೇಶದಲ್ಲಿ ಲಂಗರು ಹಾಕಿದ್ದವು. 15 ದಿನಗಳಿಂದ ಬೋಟುಗಳನ್ನು ಶುಚಿಗೊಳಿಸಿ, ಪರಿಕರಗಳನ್ನು ಸಿದ್ಧಪಡಿಸಿಕೊಂಡಿದ್ದ ಮೀನುಗಾರರು ನಸುಕಿನ ಜಾವವೇ ಆಳ ಸಮುದ್ರದತ್ತ ಸಾಗಿದ್ದರು.‘ಟ್ರಾಲರ್ ಬೋಟುಗಳು ತೀರಾ ಆಳ ಸಮುದ್ರದತ್ತ ಸಾಗದೆ, ದಡದಿಂದ 10 ನಾಟಿಕಲ್ ವ್ಯಾಪ್ತಿಯೊಳಗೆ ಆರಂಭದಲ್ಲಿ ಮೀನುಗಾರಿಕೆ ನಡೆಸಿವೆ. ಎರಡು ವಾರಗಳಿಂದ ಸಮುದ್ರದಲ್ಲಿ ಉಂಟಾಗಿದ್ದ ಚಂಡಮಾರುತ ತಗ್ಗಿದ್ದರಿಂದ ಅಲೆಗಳ ರಭಸವೂ ಕಡಿಮೆ ಇರುವುದು ಮೀನುಗಾರಿಕೆಗೆ ಅನುಕೂಲವಾಯಿತು. ಉತ್ತಮ ಮಳೆ, ವೇಗದ ಗಾಳಿ ಬೀಸಿದ್ದರಿಂದ ನೀರೀಕ್ಷಿತ ಪ್ರಮಾಣದ ಮೀನುಗಳು ಮೊದಲ ದಿನ ಲಭಿಸಿವೆ  ಎಂದು ಟ್ರಾಲರ್ ಬೋಟ್ ಮಾಲೀಕ ಸಂತೋಷ   ತಿಳಿಸಿದರು.ಫಿಶ್ ಕ್ಯಾಚ್ ಉತ್ತಮ :ಬಲೆಗೆ  ಶೆಟ್ಲಿ ಮೀನು ಭರ್ಜರಿ  ಕ್ಯಾಚ್ ಇದೆ.  ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಮಾಣ ಕಡಿಮೆಯೇ ಇದೆ. ಹಿಂದೆಲ್ಲ ್ಘ್ಧ130ಹಿ ರೂ. 135 ದರಕ್ಕೆ ಮಾರಾಟವಾಗುತ್ತಿದ್ದ ಪ್ರಗತಿ ಕೆಜಿ ಶೆಟ್ಲಿ ಮೀನು  ದರ,  ಈ ಬಾರಿ ರೂ. 110ಕ್ಕೆ ಇಳಿಕೆಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಸಮಾಧಾನಕರ ದರ ಬಂದಿದೆ    ಎಂದರು.ಮೀನುಗಾರಿಕೆ ಚಟುವಟಿಕೆ ಇಲ್ಲದೆ ಭಣಗುಡುತ್ತಿದ್ದ ಬಂದರಿನಲ್ಲಿ ಕಾರ್ಮಿಕರು, ಶೆಟ್ಲಿ  ಮೀನು ಖರೀದಿಸುವ  ವ್ಯಾಪಾರಿಗಳು  ನೆರೆಯಲಾರಂಭಿಸಿದೆ.    ಮೀನು ಸಾಗಾಟದ ವಾಹನಗಳ ಓಡಾಟದಿಂದ ಬಂದರು ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದ ಬಂದರು ಚಟುವಟಿಕೆಯ ಕೇಂದ್ರವಾಗಿದೆ.....ಕೋಟ್ ....*ಆರಂಭದಲ್ಲಿ ಶೆಟ್ಲಿ ಫಿಶ್ ಉತ್ತಮ ಕ್ಯಾಚ್ ಆಗಿದೆ. ಪಾಂಪ್ಲೆಟ್ ಫಿಶ್ ಇನ್ನು ಬಲೆಗೆ ಸಿಕ್ಕಿಲ್ಲ. ಪಾಂಪ್ಲೆಟ್ ನೀರೀಕ್ಷೆ ಇದೆ. ಪರ್ಶಿಯನ್ ಬೋಟ್ ಅಗಸ್ಟ ಹದಿನೈದರ ನಂತರ ಪರ್ಶಿಯನ್ ಬೋಟ್ ಕಡಲಿಗೆ ಇಳಿಯಲಿವೆ. ಆಗ ಬಂಗಡೆ, ಇಸ್ವಾಣ, ತರಲೆ, ದೋಡಿ, ತೊರ್ಕೆ, ಸ್ವರ ಮೀನುಗಳು ಹೇರಳವಾಗಿ ಸಿಗಲಿವೆ. ಮಳೆಗಾಲ ಉತ್ತಮವಾಗಿ ಬಿದ್ದಷ್ಟು  ,ಉತ್ತಮವಾಗಿ ಮೀನು ಇಳುವರಿ ಸಿಗಲಿದೆ . ಇದು ಮೀನುಗಾರಿಕೆ ಇಲಾಖೆಯ ನೀರೀಕ್ಷೆ.-ಪ್ರತೀಕ್ .ಉಪ ನಿರ್ದೇಶಕ.  ಮೀನುಗಾರಿಕೆ ಇಲಾಖೆ.ಕಾರವಾರ.