ಟಂಡವ್ ಡ್ಯಾನ್ಸ್‌ ಸ್ಟುಡಿಯೋಗೆ ಪ್ರಥಮ ರನ್ನರ್‌-ಅಪ್

ಟಂಡವ್ ಡ್ಯಾನ್ಸ್‌ ಸ್ಟುಡಿಯೋಗೆ ಪ್ರಥಮ ರನ್ನರ್‌-ಅಪ್  First runner-up at Tandav Dance Studio


ಬೆಂಗಳೂರು 25: ಕೆಂಗೇರಿಯಲ್ಲಿ ನಡೆದ ರಾಷ್ಟ್ರಮಟ್ಟದ ನೃತ್ಯ ಚಾಂಪಿಯನ್ಶಿಪ್ನಲ್ಲಿ ಟಂಡವ್ ಡ್ಯಾನ್ಸ್‌ ಸ್ಟುಡಿಯೋ ವಿದ್ಯಾರ್ಥಿಗಳು ಪ್ರಥಮ ರನ್ನರ್‌-ಅಪ್ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಸೃಜನಶೀಲತೆ, ಉತ್ಸಾಹ ಹಾಗೂ ಸಮರೆ​‍್ಣಯೊಂದಿಗೆ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿದರು. ನೃತ್ಯ ಗುರು ಅರ್ಜುನ್ ಸೂರ್ಯವಂಶಿ ಅವರ ತರಬೇತಿ, ನೃತ್ಯ ಸಂಯೋಜನೆ ಹಾಗೂ ಮಾರ್ಗದರ್ಶನ ವಿದ್ಯಾರ್ಥಿಗಳ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಶ್ಲಾಘಿಸಲಾಯಿತು.