ಹೊಸ ವರ್ಷ ಮೊದಲ ಅಮಾವಾಸ್ಯೆ: ದೇವಸ್ಥಾನಗಳಲ್ಲಿ ಭಕ್ತರ ದಂಡು

ಹೊಸ ವರ್ಷ ಮೊದಲ ಅಮಾವಾಸ್ಯೆ: ದೇವಸ್ಥಾನಗಳಲ್ಲಿ ಭಕ್ತರ ದಂಡು  First new moon of the new year: Crowds of devotees throng temples

             ದೇವರಹಿಪ್ಪರಗಿ 18:  ದೇವರ ನಾಡು ಎಂದು ಪ್ರಸಿದ್ಧಿ ಆಗಿರುವ ಪಟ್ಟಣದ ಐತಿಹಾಸಿಕ ದೇವಸ್ಥಾನಗಳಲ್ಲಿ ಈ ಬಾರಿ ಹೊಸ ವರ್ಷದ ಮೊದಲನೆಯ ಅಮಾವಾಸ್ಯೆ ದಿನ ಪ್ರಮುಖ  ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆಯುವ ಮೂಲಕ ಕೃತಾರ್ಥರಾಗಿದ್ದಾರೆ.  ಪಟ್ಟಣದ ಐತಿಹಾಸಿಕ ಮಲ್ಲಯ್ಯ, ರಾವುತರಾಯ, ಕಲ್ಮೇಶ್ವರ, ಮಡಿವಾಳೇಶ್ವರ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಸುಂದರ ಹೂಗಳಿಂದ ದೇವರುಗಳನ್ನು ಪುಷ್ಪಗಳಿಂದ ಅಲಂಕಾರಿಸಲಾಗಿದ್ದು, ಬೆಳಗ್ಗೆಯಿಂದಲೇ ದೇವರ ಮೂರ್ತಿಗೆ ವಿಶೇಷ ಪೂಜೆ, ಗಂಧಕ, ಕುಂಕುಮ ಪೂಜೆ, ವಸ್ತ್ರ ಅಲಂಕಾರ ಸೇರಿದಂತೆ ಅಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದಿನವೀಡೀ ದರುಶನಕ್ಕೆ ಭಕ್ತರು ತಂಡೋಪ, ತಂಡವಾಗಿ ಆಗಮಿಸಿ ದೇವರಿಗೆ ಕಾಯಿ, ಕಪೂರ ಅರ​‍್ಿಸಿ ದರುಶನ ಪಡೆದು ಭಕ್ತಿ ಭಾವ ಸಮರ​‍್ಿಸಿದರು. ಹಲವರು ಪೂಜಾಕ್ರಿಯಾದಿಗಳು ದೇವಾಲಯದ ಆವರಣದಲ್ಲಿ ನಡೆಸುತ್ತಿರುವುದು ಕಂಡುಬಂತು.  

            ಪಟ್ಟಣದ ಭಕ್ತರು ಮಾತ್ರವಲ್ಲದೇ.ನೆರೆ ರಾಜ್ಯಗಳಿಂದಲೂ ನೂರಾರು ಭಕ್ತರು ದೇವಸ್ಥಾನಗಳಿಗೆ ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ರಾಷ್ಟ್ರೀಯ ಹೆದ್ದಾರಿ-50 ರ ಪಕ್ಕದಲ್ಲಿ ಬರುವ ದೇವರಹಿಪ್ಪರಗಿ ದೇವತೆಗಳ ನಾಡು ಎಂದು ಹೆಸರು ಪಡೆದ ಪಟ್ಟಣದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ದೇವಸ್ಥಾನಗಳಿರವುದು ವಿಶೇಷ, ಹಲವು ದೇವಾಲಯಗಳು ಪ್ರವಾಸಿಗರು, ಭಕ್ತರನ್ನು ಆಕರ್ಷಿಸುತ್ತಿವೆ. ಜಾತ್ರಾ ಸಮಯದಲ್ಲಿ ಲಕ್ಷಾಂತರ ಭಕ್ತರ ದಂಡೆ ಹರಿದು ಬರುತ್ತದೆ. ಇದಲ್ಲದೆ ಪ್ರತಿನಿತ್ಯ ನೂರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದು ಅವರ ಅನುಕೂಲಕ್ಕಾಗಿ ಯಾತ್ರಿ ನಿವಾಸ, ಮೂಲಭೂತ ಸೌಕರ್ಯಗಳು ಕಲ್ಪಿಸುವ ಮೂಲಕ ಬಸ್ ಸೌಕರ್ಯಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಹೆಚ್ಚಿಸಬೇಕಾಗಿದೆ ಎಂದು ಭಕ್ತರ ಆಗ್ರಹವಾಗಿದೆ.