ವಿದ್ಯುತ್ ಶಾರ್ಟ ಸಕರ್ಿಟ್ನಿಂದ ಬೆಂಕಿ: ಕಬ್ಬು ಬೆಳೆ ಕರಕಲು
ಬೈಲಹೊಂಗಲ 22: ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ ಸಕರ್ಿಟಗೊಂಡು ಕಬ್ಬಿನ ತೋಟಕ್ಕೆ ಬೆಂಕಿ ತಗುಲಿ ಅಂದಾಜು ರೂ. 2.5 ಲಕ್ಷ ಕಬ್ಬು ಸುಟ್ಟು ಕರಕಲಾದ ಘಟನೆ ಗುರುವಾರ ಜರುಗಿದೆ.
ಬೂದಿಹಾಳ ಗ್ರಾಮದ ಬಸಪ್ಪ ಕಲ್ಲಪ್ಪ ಮಡಿವಾಳರ ಅವರಿಗೆ ಸೇರಿದ ಸುಮಾರು 4 ಎಕರೆ ಕಬ್ಬಿನಲ್ಲಿ 3 ಎಕರೆ ಕಬ್ಬು ಸುಟ್ಟಿದೆ. 1 ಏಕರೆ ಕಬ್ಬು ಅರೆಬರೆ ಸುಟ್ಟಿದ್ದು ಬೆಂಕಿ ಜಳಕ್ಕೆ ಅಕ್ಕಪಕ್ಕದ ಜಮೀನಿನ ಅಲ್ಪಸ್ವಲ್ಪ ಹಾನಿಯಾಗಿದೆ.
ಜಮೀನಿನಲ್ಲಿ ಕಬ್ಬು ಬೆಳೆದು ಕಟಾವಿಗೆ ಬಂದಿತ್ತು. ಗುರುವಾರ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಬ್ಬು ಬೆಳೆ ನಾಶವಾಗಿದೆ. ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಬೈಲಹೊಂಗಲ ಅಗ್ನಿಶಾಮಕ ದಳದ ಠಾಣಾಧಿಕಾರಿ ಮಂಜುನಾಥ ಕಲಾದಗಿ ಹಾಗೂ ಸಿಬ್ಬಂದಿ ವರ್ಗ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಯಾವುದೇ ಪ್ರಾಣಹಾನಿ ಆಗಿಲ್ಲವೆಂದು ತಿಳಿಸಿದ್ದಾರೆ.
ಪೊಟೊ ಕ್ಯಾಪ್ಸನ:ಎಚ್22-ಬಿಎಲ್ಎಚ್6 ಎ&ಬಿ
ಬೂದಿಹಾಳ ಗ್ರಾಮದಲ್ಲಿ ವಿದ್ಯುತ್ ಶಾರ್ಟ ಸಕರ್ಿಟಗೊಂಡು ಕಬ್ಬಿನ ತೋಟಕ್ಕೆ ಬೆಂಕಿ ತಗುಲಿರುವುದು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 