ಸಮಿತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸಿನ ಅರಿವು ಕಾರ್ಯಕ್ರಮ
Financial awareness program for students at Samiti College
ಸಮಿತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸಿನ ಅರಿವು ಕಾರ್ಯಕ್ರಮ
ಕಾಗವಾಡ, 02 ; ಬೆಳಗಾವಿ ನಗರದ ಎಸ್‌ಎಸ್‌ಎಸ್. ಸಮಿತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ, ಬಿಬಿಎ ಮಹಾವಿದ್ಯಾಲಯ, ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ಆರ್‌ಸಿಯು ಬೆಳಗಾವಿ ಮತ್ತು ಮೆಂಟರ್ಸ್ ಫಾರ್ ಕಿಡ್ಸ್ ಬೆಂಗಳೂರು ಇವುಗಳ ಸಹಯೋಗದಲ್ಲಿ ‘ಹಣಕಾಸಿನ ಅರಿವು-ವಾಣಿಜ್ಯ ವಿದ್ಯಾರ್ಥಿಗಳ ಭವಿಷ್ಯದ ಸಂಪತ್ತು’ ಎಂಬ ವಿಷಯದ ಮೇಲೆ ಉಪನ್ಯಾಸ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಬಿ.ಎಸ್. ನಾವ್ಹಿ, ಉಪನ್ಯಾಸಕರಾಗಿ ಬೆಂಗಳೂರಿನ ಮೆಂಟಲ್ ಫಾರ್ ಕಿಡ್ಸ್‌ನ ಸಂಯೋಜಕಿ ಡಾ. ಪೂರ್ಣಿಮಾ ಜೋಗಿ, ಲೀಡ್ ಇನ್ಸ್ಟಿಟ್ಯೂಷನಲ್ ಪಾರ್ಟ್ನರ್ಶಿಪ್‌ನ ಅಪರ್ಣ ಭಟ್ ಮಾತನಾಡಿ, ವಾಣಿಜ್ಯ ಕ್ಷೇತ್ರದಲ್ಲಿ ಯುವಕರು ಹೊಂದಬೇಕಾದ ಪ್ರಾಯೋಗಿಕ ಅರಿವು, ಹಣಕಾಸು ನಿರ್ವಹನೆಯ ಪ್ರಾಮುಖ್ಯತೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಈ ವೇಳೆ ಪ್ರಾಚಾರ್ಯ ರವಿ ದಂಡಗಿ, ಉಪಪ್ರಾಂಶುಪಾಲ ಡಾ. ಭರತ ಅಲಸಂದಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ನಿರ್ಮಲಾ ಗಡಾದ, ಬಿಬಿಎ ಕಾಲೇಜಿನ ಪ್ರಾಚಾರ್ಯ ಶ್ವೇತಾ ಪೆಟ್ರೋಟಿ, ಆರ್‌ಸಿಯುನ ಸಹಾಯಕ ಪ್ರಾಧ್ಯಾಪಕ ಡಾ. ಶಿವಲಿಂಗಯ್ಯ ಗೋತೆ, ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಂಶೋಧನಾ ಸಹಾಯಕ ಯಲ್ಲಪ್ಪ ಮೂಡಲಗಿ ಮತ್ತು ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ನಾಗವೇಣಿ ಧರೆನ್ನವರ ಸ್ವಾಗತಿಸಿದರು. ಪೂನಮ ಪಾಟೀಲ ಪರಿಚಯಿಸಿದರು. ಲಕ್ಷ್ಮೀ ಚೌಧರಿ ನಿರೂಪಿಸಿದರು. ಬಿ.ಎಸ್. ಪಾಟೀಲ ವಂದಿಸಿದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 