ಕೊನೆಗೂ ಇಂಡಿ ನಗರಕ್ಕೆ ಹೊಸ ಅಗ್ನಿಶಾಮಕ ವಾಹನ
Finally, a new fire truck for Indy City
ಇಂಡಿ 02: ಲೋಕದರ್ಶನ ದಿನ ಪತ್ರಿಕೆ ಬೀಗ್ ಇಂಪ್ಯಾಕ್ಟ್ ನಿಂದ ಎಚ್ಚೆತ್ತ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಇಂಡಿ ನಗರದಲ್ಲಿ ಇರುವ ಅಗ್ನಿಶಾಮಕ ಠಾಣೆಗೆ ಹೊಸ ಅಗ್ನಿಶಾಮಕ ವಾಹನ ಲೋಕಾರೆ್ಣ ಮಾಡಿದರು.ಇದೇ ದಿನಾಂಕ 05-12-2025 ರಂದು ಲೋಕದರ್ಶನ ದಿನ ಪತ್ರಿಕೆಯಲ್ಲಿ ಇಂಡಿ ಹಾಗೂ ಚಡಚಣ ತಾಲೂಕಿಗೆ ಇರುವುದು ಒಂದೇ ಅಗ್ನಿಶಾಮಕ ವಾಹನ ಎಂದು ಸುದ್ದಿ ಮಾಡಿ ಸರ್ಕಾರದ ಹಾಗೂ ಶಾಸಕರ ಗಮನ ಸೆಳೆಯುವ ಕೆಲಸ ಮಾಡಿತ್ತು.ಕೊನೆಗೂ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಇಂಡಿ ತಾಲೂಕು ಇರುವ ಅಗ್ನಿಶಾಮಕ ಇಲಾಖೆಗೆ ಹೊಸ ಅಗ್ನಿಶಾಮಕ ವಾಹನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.ಇದರಿಂದ ಇಂಡಿ ತಾಲ್ಲೂಕಿನಲ್ಲಿ ಏಕ ಕಾಲಕ್ಕೆ ಎರಡು ಬೆಂಕಿ ಅವಘಡ ಸಂಭವಿಸಿದರೆ ಎರಡು ಕಡೆ ಹೋಗಿ ಬೆಂಕಿ ನಂದಿಸಲು ಸಾಧ್ಯ ಆಗಬಹುದು ಎಂದು ಇಂಡಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
1) ಇಂಡಿ ಹಾಗೂ ಚಡಚಣ ತಾಲೂಕುಗೆ ಇರುವುದು ಒಂದೇ ಅಗ್ನಿಶಾಮಕ ವಾಹನ ಇತ್ತು, ಆದರೆ ಏಕ ಕಾಲದಲ್ಲಿ ಎರಡು ಕಡೆ ಬೆಂಕಿ ಅವಘಡ ಸಂಭವಿಸಿದರೆ ಹೇಗೆ ನಿಭಾಯಿಸಬೇಕು ಎಂಬುದು ದೊಡ್ಡ ಸಮಸ್ಯೆ ಆಗಿತ್ತು. ಈ ಕುರಿತು ಲೋಕದರ್ಶನ ದಿನ ಪತ್ರಿಕೆಯಲ್ಲಿ ಸುದ್ದಿ ಕೂಡಾ ಪ್ರಕಟ ಆಗಿತ್ತು. ಶಾಸಕರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ನಮಗೆ ಹೊಸ ಅಗ್ನಿಶಾಮಕ ವಾಹನ ನೀಡಿದ್ದು ಸಂತಸ ತಂದಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 