ಡಾ. ವಿ. ಬಿ. ನಿಟಾಲಿ ಅವರಿಗೆ 75ನೇ ಜನ್ಮದಿನ ಸನ್ಮಾನ
Felicitation for Dr. V. B. Nitali on his 75th birthday
ಹುಬ್ಬಳ್ಳಿ 02 : ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ 75ನೇ ಜನ್ಮದಿನೋತ್ಸವ ಆಚರಿಸಿಕೊಂಡಿರುವ ಡಾ ವಿ ಬಿ ನಿಟಾಲಿ ಅವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಯಾಗಿ ಸೇವೆ ಸಲ್ಲಿಸಿ ನಿವೃತ್ತ ರಾದ ನಂತರವೂ ಹಲವಾರು ಕೈಗಾರಿಕೆಗಳಲ್ಲಿ, ರಕ್ತ ದಾನ ಕೇಂದ್ರಗಳಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸ್ವಯಂ ಸಂಘ ಸಂಸ್ಥೆಗಳಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾಯಕ ಮಾಡುತ್ತಿರುವ, ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ, ಪಾಲಿಕೆ ನಿವೃತ್ ಆರೋಗ್ಯ ಅಧಿಕಾರಿ, 75ನೇ ವಯಸ್ಸಿನಲ್ಲಿ ಅತ್ಯಂತ್ ಚಟುವಟಿಕೆ ಯಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಡಾ ವಿ ಬಿ ನಿಟಾಲಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಹಿರಿಯರು, ಆತ್ಮೀಯರು, ಮಾರ್ಗದರ್ಶಕರು, ಹಿತೈಸಿಗಳು, ಸಮಾಜಮುಖಿ ಚಿಂತಕರಾದ ಡಾ.ವಿ.ಬಿ.ನಿಟಾಲಿ ಅವರಿಗೆ ಶಾಲು, ಮಾಲಾರೆ್ಣ ಮಾಡಿ, ಹಣ್ಣುಗಳನ್ನು ನೀಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕೆ.ಎಲ್. ಇ ಸಂಸ್ಥೆಯ ಕೆ.ಎಲ್. ಇ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ ಮಹಾಂತೇಶ್ ಸಜ್ಜನ್, ಡಾ ವಿಶ್ವನಾಥ್ ಕಮತರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸನ್ಮಾನ ಸಮಾರಂಭ ವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 