ಫೆ. 7ರಂದು ಧಾರವಾಡ, ಹಾವೇರಿಗೆ ಉಪರಾಷ್ಟ್ರಪತಿಗಳ ಪ್ರವಾಸ

Feb. Vice President's visit to Dharwad, Haveri on 7th

ಫೆ. 7ರಂದು ಧಾರವಾಡ, ಹಾವೇರಿಗೆ ಉಪರಾಷ್ಟ್ರಪತಿಗಳ ಪ್ರವಾಸ 

ಧಾರವಾಡ, 05:  ಭಾರತದ ಉಪರಾಷ್ಟ್ರಪತಿಗಳಾದ ಜಗದೀಪ ಧನಕರ್ ಅವರು ಫೆಬ್ರವರಿ 7 ರಂದು ಧಾರವಾಡ ಮತ್ತು ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.  

ಫೆಬ್ರವರಿ 7 ರಂದು ಹಾವೇರಿ ಜಿಲ್ಲೆಯ ರಾಣಿಬೆನ್ನೂರದಲ್ಲಿ ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಕರ್ನಾಟಕ ವೈಭವದ ಸಾಹಿತ್ಯ ಮತ್ತು ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಉದ್ಘಾಟಿಸಲಿದ್ದಾರೆ.  

ಫೆಬ್ರವರಿ 7 ರಂದು ಬೆಳಿಗ್ಗೆ ನವದೆಹಲಿಯಿಂದ ಹೊರಡುವ ಉಪರಾಷ್ಟ್ರಪತಿಗಳು ಬೆಳಿಗ್ಗೆ 10:50 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಾಣಿಬೆನ್ನೂರಗೆ ತೆರಳುತ್ತಾರೆ. ಕಾರ್ಯಕ್ರಮದ ನಂತರ ಅವರು ಮಧ್ಯಾಹ್ನ 1:20 ಗಂಟೆಗೆ ರಾಣಿಬೆನ್ನೂರನಿಂದ ಹೊರಟು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. ನಂತರ ಮಧ್ಯಾಹ್ನ 2:10 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ನವದೆಹಲಿಗೆ ಮರುಪ್ರಯಾಣ ಬೆಳಸಲಿದ್ದಾರೆ ಎಂದು ಪ್ರಕಟಣೆಯಲ್ಲಿ  ತಿಳಿಸಿದೆ.