ಫೆ. 3ರಂದು ಗಿಣಿಗೇರಾ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಸಮುದಾಯ ಅರೋಗ್ಯ ಕೇಂದ್ರವನ್ನಾಗಿ ಉನ್ನತಿಕರಿಸಲು ಪ್ರತಿಭಟನೆ

Feb. Protest for upgradation of Ginigera Primary Health Center to Community Health Center on 3rd

ಫೆ. 3ರಂದು ಗಿಣಿಗೇರಾ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಸಮುದಾಯ ಅರೋಗ್ಯ ಕೇಂದ್ರವನ್ನಾಗಿ ಉನ್ನತಿಕರಿಸಲು ಪ್ರತಿಭಟನೆ  

ಕೊಪ್ಪಳ 30: ತಾಲೂಕಿನ ಗಿಣಿಗೇರಿ ಗ್ರಾಮದ ಗಂಗಾವತಿ ಸರ್ಕಲ್  ನಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್‌ ಪಕ್ಷ ಮತ್ತು ಗಿಣಿಗೇರಾ ನಾಗರೀಕ ಹೋರಾಟ ಸಮಿತಿ ನೇತೃತ್ವದಲ್ಲಿ  ಗಿಣಿಗೇರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತಿಕರಿಸಲು ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಯಿತು.    

ಈ ಸಂದರ್ಭದಲ್ಲಿ  ಪಕ್ಷದ ಜಿಲ್ಲಾ ನಾಯಕರಾದ ಶರಣು ಗಡ್ಡಿ ಮಾತನಾಡಿ, ಬೃಹತ್ ಕೈಗಾರಿಕೆಗಳನ್ನು ಹೊಂದಿಕೊಂಡಿರುವ ಗಿಣಿಗೇರಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಅಗತ್ಯತೆ ಬಹಳ ಇದೆ. ಆದರೆ ಸರ್ಕಾರಿ ಆಸ್ಪತ್ರೆ ಅಗತ್ಯ ಇರುವಷ್ಟು ವೈದ್ಯರನ್ನು ಹೊಂದಿಲ್ಲ ಅಂಬುಲೆನ್ಸ್‌ ವ್ಯವಸ್ಥೆ ಇಲ್ಲ. ದೊಡ್ಡ ಮಟ್ಟದಲ್ಲಿ ವಲಸಿಗರು ಈ ಒಂದು ಊರಲ್ಲಿ ಇರುವುದರಿಂದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಕಾರ್ಖಾನೆಗಳಿಂದ ಬರುವ ಧೂಳು ವಿಷಕಾರಿಕ ಅನಿಲ ಈ ಭಾಗದ ಜನರ ಅಸ್ತಮ ನೆಗಡಿ, ಕೆಮ್ಮು ಜ್ವರ ನಿರಂತರ ಕಾಯಿಲೆಗಳು ಜನರನ್ನ ಆತಂಕಗೊಳಿಸಿದೆ.  

ಸಾಮಾನ್ಯ ಕಾಯ್ದೆಗಳಿಗೂ ಕೂಡ ಖಾಸಗಿ ಆಸ್ಪತ್ರೆಗಳು ಹೋಗಿ ಜನ ದುಡ್ಡು ಕಳೆದುಕೊಳ್ಳುತ್ತಿದ್ದಾರೆ. ವಿಷಕಾರಿ ಅನಿಲದಿಂದ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಗ್ರಾಮಕ್ಕೆ ಕಾರ್ಖಾನೆಗಳಿಂದ ಸಿಎಸ್‌ಆರ್ ನಿಧಿಯನ್ನು ಸರಿಯಾಗಿ ಬಳಕೆ ಮಾಡದೆ ಜನಗಳ ಆರೋಗ್ಯವನ್ನು ನಿರ್ಲಕ್ಷಿಸಲಾಗಿದೆ. ಕೂಡಲೇ ಆರೋಗ್ಯ ಇಲಾಖೆ ಮತ್ತು ಸರ್ಕಾರ ಪರಿಸರಣ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಗಿಣಿಗೇರಿ ಸುತ್ತಮುತ್ತನಹಳ್ಳಿಗಳಲ್ಲಿ ತಳ ಭೇಟಿ ಮಾಡಿ ಜನರ ಆರೋಗ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಸೋಸಲಿಸ್ಟ್‌ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್‌ ಪಕ್ಷದ ವತಿಯಿಂದ ಒತ್ತಾಯಿಸುತ್ತೇವೆಂದು ಕೇಳಿದರು.  

ಈ ಸಹಿಸಂದ್ರ ಅಭಿಯಾನದಲ್ಲಿ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡರಾದ ಮಂಗಳೇಶ ರಾಥೋಡ್, ಮೌನೇಶ್ ಹಲಗೇರಿ  ಪಕ್ಷದ ಮುಖಂಡ ಶರಣು ಪಾಟೀಲ್ ಶಾರದಾ ಮುಂತಾದ ಗ್ರಾಮಸ್ಥರು ಭಾಗವಹಿಸಿದ್ದರು.