ಕಂಠಪೂರ್ತಿ ಕುಡಿದು ಬಂದು ಮಗನನ್ನೇ ಹತ್ಯೆ ಗೈದ ತಂದೆ : ಬಂಧನ
Father who killed his son while drunk: Arrested
ಲೋಕದರ್ಶನ ವರದಿ
ಹೂವಿನಹಡಗಲಿ 6: ಕುಡಿತಕ್ಕೆ ದಾಸ ನಾಗಿದ್ದ ತಂದೆಯೇ ಮಗನನ್ನು ಕೊಡಲೆಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿ,ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದಿರುವ ಘಟನೆ ತಾಲ್ಲೂಕಿನ ಬೀರಬ್ಬಿ ಗ್ರಾಮದಲ್ಲಿ ಸಂಭವಿದೆ.ಕುರಿಗಾಯಿ ಬೀರೇಶ (25)ಕೊಲೆಯಾದ ಯುವಕನ ಪ್ರಕರಣ ಬಗ್ಗೆ ಬೇಧಿಸಿರುವ ಪೊಲೀಸರು ಗುರುವಾರ ತಂದೆ ಲಕ್ಷ್ಮಪ್ಪ (55) ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.ಫೆ.11ರಂದು ರಾತ್ರಿ ಕಂಠ ಪೂರ್ತಿ ಕುಡಿದು ಮನೆಗೆ ಬಂದ ಆರೋಪಿ, ನಿದ್ರೆಯಲ್ಲಿದ್ದ ಮಗನ ಮೇಲೆ ಕೊಡಲಿಯಿಂದ ದಾಳಿ ನಡೆಸಿ ಕೊಲೆ ಮಾಡಿ, ಮೃತದೇಹವನ್ನು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ತಿಪ್ಪೆಗೆ ಎಸೆದಿದ್ದ. ಮಗ ಕಾಣದಿದ್ದ ಬಗ್ಗೆ ತಾಯಿ ಲಕ್ಕವ್ವ ಫೆ. 13ರಂದು ಸ್ಥಳೀಯ ಠಾಣೆಗೆ ದೂರು ನೀಡಿದ್ದರು.
ತಿಪ್ಪೆಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ ದುರ್ನಾತ ಬಂದಿದ್ದರಿಂದ ಗ್ರಾಮಸ್ಥರು ಪರೀಶೀಲಿಸಿದಾಗ ಬೀರೇಶ ಶವ ಪತ್ತೆಯಾಗಿದೆ. ಮಾಹಿತಿ ಮೇರೆಗೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಡಿವೈಎಸ್ಪಿ ಸಂತೋಷ ಚವ್ಹಾಣ, ಸಿಪಿಐ ಮಲ್ಲಪ್ಪ ಹೂಗಾರ್, ಪಿಎಸ್ಐ ಭರತ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದ್ದರು.’ಲಕ್ಷ್ಮಪ್ಪ ಮದ್ಯ ಸೇವಿಸಿ ಮನೆಗೆ ಬರುವುದನ್ನು ಮಗ ಬೀರೇಶ್ ವಿರೋಧಿ ಸುತ್ತಿದ್ದ. ಇದರಿಂದ ಸಿಟ್ಟಾದ ಲಕ್ಷ್ಮಪ್ಪ, ಪತ್ನಿ ಊರಿಗೆ ಹೋದ ಸಮಯದಲ್ಲಿ ಮಗನನ್ನು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 