ಅನ್ನ ನೀಡುವ ರೈತರು ದೇಶದ ಮಾಲೀಕರು ಗುಲಾಮರಲ್ಲ : ಶಿವಾಜಿ ಪಾಟೀಲ

ಅನ್ನ ನೀಡುವ ರೈತರು ದೇಶದ ಮಾಲೀಕರು ಗುಲಾಮರಲ್ಲ : ಶಿವಾಜಿ ಪಾಟೀಲ Farmers who provide rice are the owners of the country, not its slaves: Shivaji Patil

ರಾಯಬಾಗ 24:  ದೇಶಕ್ಕೆ ಅನ್ನ ನೀಡುವ ರೈತರು ದೇಶದ ಮಾಲೀಕರು ಹೊರತು ಗುಲಾಮರಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಶಿವಾಜಿ ಪಾಟೀಲ ಹೇಳಿದರು.  ಸೋಮವಾರ ತಾಲೂಕಿನ ಭಿರಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘವು ಭ್ರಷ್ಟಾಚಾರ ವಿರುದ್ಧ ಸದಾ ಹೋರಾಟ ನಡೆಸುತ್ತದೆ ಎಂದರು. ರೈತ ಸಂಘದ ಜಿಲ್ಲಾ ಸಂಚಾಲಕ ಪ್ರಕಾಶ ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿ ಮಾಡಬೇಕು,

ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು, ರೈತರಿಗೆ ಕಾರ್ಖಾನೆಯವರು ಮಾಡುವ ಮೋಸ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ತಾಲೂಕಾ ಸಂಚಾಲಕ ಪುಂಡಲೀಕ ಮಾನೆ, ತಾಲೂಕಾ ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಪೂಜೇರಿ, ಸಂಜು ಪೂಜೇರಿ ಪ್ರದೀಪ ಸಾಗರೆ, ಭಿರಡಿ ಘಟಕದ ಅಧ್ಯಕ್ಷ ಸಿದ್ರಾಮ ತೇಲಿ, ಉಪಾಧ್ಯಕ್ಷ ರಾಜು ಹಿಪ್ಪರಗಿ, ಕಾರ್ಯದರ್ಶಿ ರಾಜು ತಿಗಡಿ, ಶ್ರೀಶೈಲ ತೇಲಿ, ಪವನ ಯಲಗುದ್ರೆ, ರಾಜು ಯಲಗುದ್ರೆ, ಸುರೇಶ ಕರಿಗಾರ, ಚಿದಾನಂದ ಬೋರಗಂವೆ, ಸಂಜು ಭೋರಾಗಾಂವೆ, ಸತೀಶ ಪಾಟೀಲ, ದಾದಾ ಮೈಶಾಳೆ, ಸದಾಶಿವ ನಿಶಾಂದಾರ, ಕ್ಯಾದು ಕರಲಟ್ಟಿ, ಹಾಗೂ ರೈತ ಮುಖಂಡರು ಇದ್ದರು.