ರೈತರ ಎರಡನೇ ಬೆಳೆಗೆ ನೀರು ಹರಿಸುವಂತೆ ಆಗ್ರಹ

ರೈತರ ಎರಡನೇ ಬೆಳೆಗೆ ನೀರು ಹರಿಸುವಂತೆ ಆಗ್ರಹ Farmers urged to water their second crop

                      ಕಂಪ್ಲಿ28:  ಎರಡನೇ ಬೆಳೆಗೆ ನೀರು ಬಿಡಿ, ಇಲ್ಲವಾದಲ್ಲಿ ಪ್ರತಿ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕೆಂದು ಆಗ್ರಹಿಸಿ, ಭಾರತೀಯ ಜನತಾ ಪಾರ್ಟಿಯ ಕಂಪ್ಲಿ ಮಂಡಲದಿಂದ ರೈತರ ಸಹಯೋಗದೊಂದಿಗೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದರು. ನಂತರ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಮಾತನಾಡಿ, ಮುಂಗಾರು ಬೆಳೆಯಲ್ಲಿ ಸಾಕಷ್ಟು ರೈತರು ಬೆಂಬಲ ಬೆಲೆ ಹಾಗೂ ಇಳುವರಿ ಇಲ್ಲದ ಪರಿಣಾಮ ಸಂಕಷ್ಟವನ್ನು ಎದುರಿಸಿದ್ದಾರೆ. ಆದ್ದರಿಂದ ಎರಡನೇ ಬೆಳೆಗೆ ನೀರು ಕಲ್ಪಿಸಿದರೆ, ರೈತರ ಬದುಕು ಅಸನಾಗಲಿದೆ. ಈಗಾಗಲೇ ಸರ್ಕಾರ ಮತ್ತು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎರಡನೇ ಬೆಳೆಗೆ ನೀರಿಲ್ಲ. ಇದರಿಂದ ಜಲಾಶಯದ ಎಲ್ಲಾ ಕ್ರಸ್ಟ್‌ ಗೇಟ್‌ಗಳನ್ನು ಅಳವಡಿಕೆ ಮಾಡುವ ಕಾರ್ಯವಾಗಲಿದೆ ಎನ್ನುತ್ತಾರೆ.

                      ಆದರೆ, ಸುಮಾರು 52 ಕೋಟಿ ರೂ.ಗಳ ಅನುದಾನದಲ್ಲಿ ಸ್ವಲ್ಪವೂ ಅನುದಾನ ಬಿಡುಗಡೆಗೊಂಡಿಲ್ಲ. ಕೆಲವೊಂದು ಕ್ರಸ್ಟ್‌ ಗೇಟ್ ಸಿದ್ಧಗೊಂಡಿರುವುದು ಬಿಟ್ಟರೇ, ಬಹುತೇಕವಾಗಿ ಗೇಟ್‌ಗಳು ಆಗಿಲ್ಲ. ಈ ನೆಪದಲ್ಲಿ ರೈತರಿಗೆ ನೀರು ಹರಿಸುವುದನ್ನು ತಡೆದಿರುವುದು ಸರಿಯಲ್ಲ. ಸರ್ಕಾರ ಮತ್ತು ಅಧಿಕಾರಿಗಳು ರೈತರ ಬಗ್ಗೆ ಕಾಳಜಿವಹಿಸಿ, ರೈತರ ಎರಡನೇ ಬೆಳೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಪ್ರತಿ ಎಕರೆಗೆ ಸುಮಾರು 25 ಸಾವಿರ ಪರಿಹಾರ ನೀಡಬೇಕು. ಮತ್ತು ಕಂಪ್ಲಿ ತಾಲೂಕಿನಲ್ಲಿ ಮೆಕ್ಕೆಜೋಳ ಬಂದಿದ್ದು, ಬೆಂಬಲ ಬೆಲೆ ನೀಡಬೇಕು. ಹೀಗೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ನಂತರ ರೈತ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಎನ್‌.ಚಂದ್ರಕಾಂತರೆಡ್ಡಿ ಮಾತನಾಡಿ, ಜಲಾಶಯ ವ್ಯಾಪ್ತಿಯಲ್ಲಿ 16 ಲಕ್ಷ ಆಯಕಟ್ಟು ಇದ್ದು, ಈ ಪ್ರದೇಶದಲ್ಲಿ ಎಲ್‌ಎಲ್‌ಸಿ ಮತ್ತು ರಾಯಚೂರು ಭಾಗದ ಕಾಲುವೆಗಳಿಗೆ 10 ಲಕ್ಷ ಪ್ರದೇಶದ ಆಯಕಟ್ಟು ಇರುತ್ತದೆ. ಸದ್ರಿ ಭೂಮಿಯಲ್ಲಿ 2ನೇ ಬೆಳೆಯಾಗಿ ಭತ್ತವನ್ನು ಪ್ರತಿ ವರ್ಷದಂತೆ ಬೆಳೆಯಲಾಗುತ್ತಿದೆ.

                     ಆದರೆ, ಈ ಬಾರಿ ಜಲಾಶಯದಲ್ಲಿ ನೀರಿದ್ದರೂ, ಎರಡನೇ ಬೆಳೆಗೆ ನೀರು ಹರಿಸುತ್ತಿಲ್ಲ. ಆದ್ದರಿಂದ ಕೂಡಲೇ ಎಚ್ಚೆತ್ತು ನೀರು ಹರಿಸಿ, ಇಲ್ಲಂದ್ರೆ ಪರಿಹಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಅಳ್ಳಳ್ಳಿ ವಿರೇಶ, ಕಡೆಮನೆ ಪಂಪಾಪತಿ, ಡಾ.ವಿ.ಎಲ್‌.ಬಾಬು, ಎಸ್‌.ಎಂ.ನಾಗರಾಜ, ಎಸ್‌.ಚಂದ್ರಶೇಖರಗೌಡ, ಟಿ.ವಿ.ಸುದರ್ಶರೆಡ್ಡಿ, ಹೂಗಾರ ರಮೇಶ, ಚಂದ್ರಕಾಂತರೆಡ್ಡಿ, ಹೂವಣ್ಣ, ನಾಗರಾಜ, ತಿಮ್ಮಪ್ಪನಾಯಕ, ಬಿ.ದೇವೆಂದ್ರ, ನಾಗೇಂದ್ರ, ವಿಶ್ವನಾಥ, ಕಟ್ಟೆ ದುರುಗಣಪ್ಪ, ದೇವಲಾಪುರ ರವಿ, ರಂಗಪ್ಪ, ಶ್ರೀನಿವಾಸ, ಈಸಪ್ಪ, ಶಿವಮೂರ್ತಿ, ವಿರುಪಾಕ್ಷಿ, ಪ್ರಶಾಂತ್, ರಬಿಯಾ ಸೇರಿದಂತೆ ಅನೇಕರಿದ್ದರು.