ರೈತರು ಇಳುವರಿ ಹೆಚ್ಚಿಸಲು ಶ್ರಮಿಸಲಿ: ಖಂಡಗಾವಿ
Farmers should work hard to increase yields: Khandagavi
ಮಾಂಜರಿ 15: ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಕಾರ್ಖಾನೆಯ ರೈತ ಸದಸ್ಯರಾದ ರಾಯಬಾಗ್ ತಾಲೂಕಿನ ನಂದಿಕುರಳಿ ಗ್ರಾಮದ ಕಬ್ಬು ಬೆಳೆಯುವ ರೈತರಾದ ಅಣ್ಣಪ್ಪ ಬಾಳಪ್ಪ ನಾಯಕ್ ಅವರು ಕಾರ್ಖಾನೆಯ ಕಬ್ಬು ಅಭಿವೃದ್ಧಿ ವಿಭಾಗದಿಂದ ಮಾರ್ಗದರ್ಶನ ಹಾಗೂ ಸೌಲಭ್ಯ ಉಪಯೋಗಿಸಿಕೊಂಡು 2025-26ರ ಸಾಲಿನಲ್ಲಿ ಕಬ್ಬು ಅರಿಯುವ ಹಂಗಾಮಿನಲ್ಲಿ ಎಕರೆಗೆ 100 ಟನ್ ಕಬ್ಬು ಬೆಳೆದ ಹಿನ್ನೆಲೆಯಲ್ಲಿ ಅವರನ್ನು ಆಡಳಿತ ಮಂಡಳಿ ಪರವಾಗಿ ಸೋಮವಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಬಿ ಆರ್ ಖಂಡಗಾವಿ ಹಾಗೂ ಪ್ರಧಾನ ವ್ಯವಸ್ಥಾಪಕ ಎನ್ ಎಸ್ ಹಿರೇಮಠ ಕಬ್ಬು ಬೆಳೆದ ತೋಟಕ್ಕೆ ಭೇಟಿ ನೀಡಿ ಒಂದು ಎಕರೆಗೆ 100 ಟನ್ ಕಬ್ಬು ಬೆಳೆಯುವ ರೈತರನ್ನು ಅಭಿನಂದಿಸಿದ್ದಾರೆ.
ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಬಿ ಆರ್ ಖಂಡಗಾವಿ ಮಾತನಾಡಿ, ಕಾರ್ಖಾನೆ ರೂವಾರಿ ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆ ಎಲ್ ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ.ಪ್ರಭಾಕರ ಕೋರೆ ಹಾಗೂ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ಹೊಸದೇಲಿಯ ನಿರ್ದೇಶಕ ಅಮಿತ ಕೋರೆ ಅವರ ಆಶಯದಂತೆ ಹಾಗೂ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ನಿರ್ದೇಶನದಂತೆ ಕಾರ್ಖಾನೆಯಿಂದ ಕಬ್ಬು ಅಭಿವೃದ್ಧಿ ಯೋಜನೆಗೆ ಒತ್ತು ನೀಡಲಾಗಿದೆ. ಎಕರೆಗೆ 100 ಟನ್ ಕಬ್ಬು ಬೆಳೆಯಲು ಉತ್ತೇಜಿಸಲಾಗುತ್ತಿದೆ. ಇಳುವರಿ ಹೆಚ್ಚಾದಲ್ಲಿ ರೈತರಿಗೆ ಹಾಗೂ ಕಾರ್ಖಾನೆಗೂ ಲಾಭವಾಗುತ್ತದೆ. ಹಾಗಾಗಿ, ಎಲ್ಲ ಸದಸ್ಯರು ಕಾರ್ಖಾನೆಯ ಕಬ್ಬು ಅಭಿವೃದ್ಧಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸದಸ್ಯರು ಹಾಗೂ ಕಾರ್ಯಕ್ಷೇತ್ರದಲ್ಲಿರುವ ಎಲ್ಲ ಕಬ್ಬು ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರತ್ಯೇಕ ಕಬ್ಬು ಅಭಿವೃದ್ಧಿ ವಿಭಾಗ ಪಾರಂಭಿಸಲಾಗಿದೆ. ಮಣ್ಣು ಹಾಗೂ ನೀರು ಪರೀಕ್ಷಾ ಕೇಂದ್ರದಿಂದ ಉಚಿತ ಪರೀಕ್ಷೆ ಮಾಡಲಾಗುತ್ತದೆ. ಹೊಸ ತಳಿಯ ಹೆಚ್ಚಿನ ಇಳುವರಿ ಹಾಗೂ ಗುಣಮಟ್ಟದ ಬೀಜ ಆಯ್ಕೆಯಿಂದ ಹಿಡಿದು ಕಬ್ಬು ಕಟಾವಿನ ವರೆಗೆ ಎಲ್ಲ ಹಂತದಲ್ಲೂ ಅವಶ್ಯ ಮಾರ್ಗದರ್ಶನ ನೀಡಲಾಗುತ್ತಿದೆ. ಅದಕ್ಕೆ ಪೂರಕವಾಗಿ ಕಿಸಾನ್ ಬಜಾನಿರ್‌ಂದ ಸಾಲದ ರೂಪದಲ್ಲಿ ಗುಣಮಟ್ಟದ ರಸಗೊಬ್ಬರ, ಕೀಟನಾಶಕ, ಕಬ್ಬಿನ ಬೀಜ ಮತ್ತು ಸಸಿಗಳನ್ನು ಯೋಗ್ಯದರದಲ್ಲಿ ಒದಗಿಸುವ ಮೂಲಕ ಎಕರೆಗೆ 100 ಟನ್ ಮತ್ತು ಹೆಚ್ಚಿನ ಇಳುವರಿ ಪಡೆಯಲು ರೈತರನ್ನು ಪೋತಾಹಿಸಲಾಗುತ್ತಿದೆ. ಕಾರ್ಖಾನೆ, ಪ್ರಧಾನ ವ್ಯವಸ್ಥಾಪಕ ಎನ ಎಸ್ ಹಿರೇಮಠ್ ಕಬ್ಬು ಅಭಿವೃದ್ಧಿ ಮೇಲ್ವಿಚಾರಕರಾದ ರಾಹುಲ ಇಚಲಕರಂಜಿ, ಸಚಿನ ಮೋಪಗಾರ ಹಾಗೂ ಕಬ್ಬು ಮೇಲ್ವಿಚಾರಕರಾದ ಎನ್.ಐ.ಪಾಟೀಲ ಹಾಗೂ ಎಸ್ ಎಸ್ ಖೋತ್ ಮತ್ತು ಗ್ರಾಮದ ರೈತರು ಹಾಜರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 