ರೈತರು ಪಿಎಂ ಕಿಸಾನ್ ಯೋಜನೆಗೆ ಕೆವೈಸಿ ಮಾಡಿಸಿ
Farmers should do KYC for PM Kisan Yojana
ಇಂಡಿ 28 : ಪಿಎಂ ಕಿಸಾನ ಯೋಜನೆಯ ಸಹಾಯಧನ ಪಡೆಯಲು ರೈತರು ಫುಟ್ ತಂತ್ರಾಂಶದಲ್ಲಿ ನೊಂದಾಯಿಸುವದು ಹಾಗೂ ಫುಟ್ ನೊಂದಣಿ ಸಂಖ್ಯೆಗಳಿಗೆ ರೈತರ ಎಲ್ಲ ಭೂ ಹಿಡುವಳಿಗಳನ್ನು ಜೋಡಣೆ ಮಾಡಲು ತಿಳಿಸಿದ ಪ್ರಯುಕ್ತ ರಜಾ ದಿನವಾದ ಶನಿವಾರವೂ ಸಹ ಕೃಷಿ ಇಲಾಖೆಯ ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾಗಿ, ನೋಂದಣಿ ಕಾರ್ಯದಲ್ಲಿ ತೊಡಗಿದ್ದನ್ನು ರೈತರು ಶ್ಲಾಘಿಸಿದ್ದಾರೆ. ನಗರದ ರೈತಸಂಪರ್ಕ ಕೇಂದ್ರದಲ್ಲಿ ಹಾಗೂ ಬಳ್ಳೊಳ್ಳಿ ರೈತ ಸಂಪರ್ಕ್ ಕೇಂದ್ರದಲ್ಲಿ ಕೇಂದ್ರದಲ್ಲಿ ಕಂಪ್ಯೂಟರ್ ಆಪರೇಟರ್ಗಳಾದ ಮನೋಜ ಪತ್ತಾರ, ಶ್ರೀಕಾಂತ ಚವ್ಹಾಣ, ಮಹಾಂತೇಶ ಮೇಲಿನಮನಿ ಹಾಗೂ ಬಳ್ಳೊಳ್ಳಿ ಕೃಷಿ ಆಪರೇಟರಗಳಾದ ಅಕ್ಬರ್ ಬರಡೋಲ ಸುನೀಲ ರಜಪೂತ ಮಂಜುನಾಥ ಘಂಟಿ ವಿಷ್ಣು ತಳವಾರ ಹಾಗೂ ಸಿಬ್ಬಂದಿಗಳು ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ರೈತರ ಈ ಕೆವೈಸಿ ಮಾಡುತ್ತಿದ್ದಾರೆ. ರೈತರು ಫುಟ್ ಹಾಗೂ ಭೂಮಿ ದತ್ತಾಂಶಗಳನ್ನು ನಿಯಮಿತವಾಗಿ ನವಿಕರಿಸುವದು ಅವಶ್ಯವಾಗಿರುತ್ತದೆ. ಇದರೊಂದಿಗೆ ಫುಟ್ ತಂತ್ರಾಂಶದಲ್ಲಿ ರೈತರ ಫೂಟ್ ಐಡಿ ಮತ್ತು ಸಹಮತಿ ಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ತೆಗೆದುಕೊಳ್ಳುವದು ಕಡ್ಡಾಯವಾಗಿರುವುದರಿಂದ ಈ ನೋಂದಣಿ ಕಡ್ಡಾಯವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಮಹಾಂತೇಶ ಶಟ್ಟೆಣ್ಣನವರ ಹಾಗೂ ಬಳ್ಳೊಳ್ಳಿ ಕೃಷಿ ಇಲಾಖೆಯ ಅಧಿಕಾರಿ ಎನ್ ಎಮ್ ಹಿಟ್ನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 