ರೈತರು ತಾವು ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸುವ ಅಧಿಕಾರ ರೈತರಿಗೆ ಕೊಡಬೇಕುಹಿಕವಿತಾ ಮಿಶ್ರಾ
Farmers should be given the power to set the price for the crops they growHikavita Mishra
ಹಾವೇರಿ 24 : ನಗರದ ಭಗತ್‌ಸಿಂಗ್ ಕಾಲೇಜಿನಲ್ಲಿ ನಡೆದಕಾಲೇಜಿನ ವಾರ್ಷಿಕೋತ್ಸವ ಮತ್ತು ಭಗತ್ ಪ್ರಥಮ ದರ್ಜೆಕಾಲೇಜಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಗತಿಪರ ಮಹಿಳಾ ರೈತರು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕವಿತಾ ಮಿಶ್ರಾರವರು ಮಾತನಾಡಿ ರೈತರು ತಾವು ಬೆಳೆದ ಬೆಳೆಗೆ ತಾವೆ ಬೆಲೆ ನಿಗದಿಪಡಿಸುವಅಧಿಕಾರವನ್ನು ಸರ್ಕಾರ ಕೊಡಬೇಕೆಂದು ಆಗ್ರಹಿಸಿದರು. ಮುಂದುವರೆದು ರೈತರ ಮಕ್ಕಳು ಬೆಳಿಬೇಕು, ರೈತರೂ ಕೂಡ ಕೋಟಿಯಲ್ಲಿ ಮಾತನಾಡಬೇಕು ರೈತನಿಗೂ ಸಮಾಜದಲ್ಲಿ ಎಲ್ಲಾ ರೀತಿಯ ಗೌರವ ಸಿಗಬೇಕು.ರೈತರ ಮಕ್ಕಳಿಗೆ ಹೆಣ್ಣುಕೊಡಲು ಸಮಾಜ ಹಿಂದೇಟು ಹಾಕಬಾರದು ರೈತ ಮನಸ್ಸು ಮಾಡಿದರೆ ಕೇವಲ ಒಂದು ಎಕರೆಯಲ್ಲಿ ಕೋಟಿರೂಗಳನ್ನು ಗಳಿಸಬಹುದು. ನಾನು ರೈತನ ಮಗ/ಳು ಎಂದು ಹೆಮ್ಮೆಯಿಂದ ಹೇಳಿ.ರೈತಒಕ್ಕದಿದ್ದರೆ ಬಿಕ್ಕುವುದುಜಗವೆಲ್ಲ ಎಂಬ ನಾಣ್ಣುಡಿಯನ್ನುಇಲ್ಲಿ ಸ್ಮರಿಸಿದರು.
ದರ್ಮ ಮತ್ತುಕರ್ಮರೈತರಲ್ಲೆ ಉಳಿದಿದೆ ರೈತರಿಗೆ ನಿಜವಾಗಲೂ ಸಿಗಬೇಕಾದ ಗೌರವ ಸಿಗಲಿ ಎಂದು ಆಶಿಸುತ್ತೇನೆ. ಭಗತ್‌ಸಿಂಗ್ ಪ್ರಥಮ ದರ್ಜೆಕಾಲೇಜಿನ ಉದ್ಘಾಟನೆಯನ್ನು ಧಾರವಾಡದ ಜಿನಿಯಸ್ ಅಕಾಡೆಮಿಯ ಅಧ್ಯಕ್ಷರು ಆಗಿರತಕ್ಕಂತ ಅಲ್ತಾಪಹ್ಮದ ಡುಮ್ಮಾಳರವರು ಮಾಡಿ ಭಗತ್ ಕಾಲೇಜು ಬಹಳ ಕಡಿಮೆ ಪೀಸ್‌ಲ್ಲಿ ಗ್ರಾಮೀಣ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಭಗತ್ ಪ್ರಥಮದರ್ಜೆಕಾಲೇಜು ಸ್ಪರ್ದಾತ್ಮಕ ಪರೀಕ್ಷೆಗಳನ್ನೊಳಗೊಂಡ ಶಿಕ್ಷಣವನ್ನು ನೀಡುತ್ತಿದ್ದು ನೀವು ಪದವಿ ಪಡೆಯುವ 3 ವರ್ಷದೊಳಗಾಗಿ ಸರ್ಕಾರಕರೆಯುವಎಲ್ಲಾ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ನಿಮ್ಮನ್ನು ಈ ಕಾಲೇಜು ಸಿದ್ದಗೊಳಿಸುತ್ತದೆಂದು ತಿಳಿಸಿದರು.
ಕಾಲೇಜಿನ ಮುಖ್ಯ ಆಡಳಿತಾಧಿಕಾರಿಗಳಾದ ಡಾಽಽ ಪ್ರಸನ್ನಕುಮಾರವರು ಮಾತನಾಡಿ ಭಗತ್‌ಸಿಂಗ ಎಂತಹ ದೇಶಭಕ್ತಿ ತುಂಬಿರೋ ಸ್ವಾತಂತ್ರ ಹೋರಾಟಗಾರಎಂದು ತಿಳಿಸಿ ಅದೇ ಹೆಸರನ್ನು ನಮ್ಮ ಸಂಸ್ಥೆಗೆ ಇಟ್ಟಿದ್ದು ಬಹಳ ಖುಷಿಯ ವಿಚಾರಎಂದು ತಿಳಿಸಿದರು ಹಾಗೇ ಈ ಸಂಸ್ಥೆಯಅಧ್ಯಕ್ಷಕೂಡಯುವ ಭಗತ್‌ಸಿಂಗ್ ಎಂದು ಬಣ್ಣಿಸಿದರು ಯಾಕಂದರೆ ಕೇವಲ 30 ವರ್ಷದಒಬ್ಬಯುವಕ ಪ್ರತಿ ವರ್ಷ ಸುಮಾರು 500 ವಿದ್ಯಾರ್ಥಿಗಳಿಗೆ ವಿದ್ಯಾಧಾನ ನೀಡಿಸುಮಾರು 35 ಕುಟುಂಬಗಳಿಗೆ ಉದ್ಯೋಗ ನೀಡಿಅವರ ಜೀವನಕ್ಕೆ ಆಸರೆಯಾಗಿದ್ದು ಸಾಮಾನ್ಯ ವಿಷಯವಲ್ಲಎಂದು ತಿಳಿಸಿದರು ಹಾಗೇ ವಿದ್ಯಾರ್ಥಿಗಳು ಕೂಡ ಇದೇ ದಾರಿಯಲ್ಲಿ ಮುನ್ನಡೆದು ತಮ್ಮ ಗುರಿಯನ್ನು ತಲುಪಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಕಾಲೇಜಿನ ಸಂಸ್ಥಾಪಕರಾದ ಎಂ.ಬಿ.ಸತೀಶರವರು ಮಾತನಾಡಿ ನಮ್ಮೆಲ್ಲ ಉಪನ್ಯಾಸಕರು ಅವರ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು ಈ ವರ್ಷ ಸಂಪೂರ್ಣವಾಗಿ ಪಲಿತಾಂಶದ ಕಡೆ ಒತ್ತುಕೊಟ್ಟಿದ್ದೇವೆ ಹಾಗೇ ಆ ರೀತಿಯ ಪಲಿತಾಂಶವನ್ನು ನಾವು ನೀರೀಕ್ಷಿಸುತ್ತಿದ್ದೇವೆ. ಎಲ್ಲಾ ಪಾಲಕರು ನಮಗೆ ಸಂಪೂರ್ಣ ಸಹಕಾರ ನೀಡಿ ನಿಮ್ಮ ಮಕ್ಕಳ ಭವಿಷ್ಯಕ್ಕೆ ನಮ್ಮ ಜೊತೆ ಕೈ ಜೋಡಿಸಿ ಎಂದು ಕೇಳಿಕೊಂಡರು. ಹಾಗೇ ಈ ವರ್ಷ ಪ್ರಾರಂಭವಾದ ಭಗತ್ ಪ್ರಥಮ ದರ್ಜೆ ಕಾಲೇಜು ಮುಂದೆ ಸಾವಿರಾರು ವಿದ್ಯಾರ್ಥಿಗಳಿಗೆ ದಾರೀದೀಪವಾಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಉದ್ಘಾಟನೆಯನ್ನು ಕುಂದಗೊಳ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ರವೀಂದ್ರಗೌಡ ಪಾಟೀಲರವರು ಬಹಳ ಉತ್ಸುಕತೆಯಿಂದ ಉದ್ಘಾಟಿಸಿದರು.ಕಾಲೇಜಿನ ಪ್ರಾಚಾರ್ಯರಾದರತನಕಾಶಪ್ಪನವರ ಉಪಸ್ಥಿತರಿದ್ದರು.ಕಾಲೇಜಿನ ಉಪನ್ಯಾಸಕಿಯಾದ ಆಸ್ಮಾ ತಳಕಲ್ಲ ಸ್ವಾಗತಿಸಿದರು,. ರಶ್ಮಿ ಬಾಗರ ವ್ಯಕ್ತಿ ಪರಿಚಯ ಮಾಡಿಕೊಟ್ಟರು, ಲಕ್ಷ್ಮೀಖರಾಟೆ ವಾರ್ಷಿಕ ವರದಿ ಓದಿದರು. ಪರಶುರಾಮ ರಿತ್ತಿ ಮತ್ತು ದೀಪಾ ಜೋಗಿಹಳ್ಳಿ ನಿರೂಪಿಸಿದರು. ಮೇಘನಾ ಏಳುಕೊಳ್ಳದ ವಂದಿಸಿದರು. ಉಳಿದಂತೆ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಬಸವರಾಜಪ್ಪ ಕೆ, ರಚನಾ ಹರ್ತಿ,ಮೋಹಿನ್‌ಖಾನ್ ಪಠಾಣ, ಭಾನುನಂದನ ನೂಲಗೇರಿ,ಜ್ಯೋತಿ ಭೊವೇರ್, ನಾಜರಿನ ನೆಗಳೂರು,ತೇಜಶ್ವಿನಿ ಬೆಲ್ಲದ,ಪುಷ್ಪಾಕಡೂರು,ಸವಿತಾ ಮಾಸ್ತೇರ, ಕವಿತಾಗಂಜೇರ,ಅಭಿಷೇಕ ಅಗಸಿಬಾಗಿಲು ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 