ರೈತರ ಪ್ರತಿಭಟನೆ, ಧರಣಿಗೆ ಬೆದರಿ ಬೆಂಬಲ ಬೆಲೆ ಘೋಷಣೆ: ಸಂಭ್ರಾಚರಣೆಯಲ್ಲಿ ರೈತರು
Farmers protest, threaten to hold sit-in, announce support price: Farmers in celebration
ಬ್ಯಾಡಗಿ 08 : ತಾಲೂಕಿನ ಮೊಟೇಬೆನ್ನೂರು ಗ್ರಾಮದಲ್ಲಿ. ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪುಟ್ಟಣ್ಣಯ್ಯ ಬಣದ ರೈತರು ಹಾಗೂ ತಾಲೂಕಿನ ಎಲ್ಲಾ ರೈತರು ಮಹದೇವ ಮೈಲಾರ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.ಈ ವೇಳೆ ರೈತ ಸಂಘದ ಹಾವೇರಿ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಬಳ್ಳಾರಿ ಮಾತನಾಡಿ ಈ ಜಯ ರೈತರ ಜಯ ಹಾವೇರಿ ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ಎಲ್ಲ ಜಿಲ್ಲೆಯ ತಾಲೂಕಿನ ರೈತರು ಹಾವೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಮೆಕ್ಕೆಜೋಳ ಖರೀದಿ ಕೇಂದ್ರ ಹಾಗೂ ವರದ ಬೆಡ್ತಿ ನದಿ ಜೋಡಣೆ ಹೆಸ್ಕಾಂ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಅನಿರ್ದಿಷ್ಟಾವಧಿಗಳ ಕಾಲ ಅಹೋರಾತ್ರಿಯ ಧರಣಿ ನಡೆಸಿ ಸರ್ಕಾರದಿಂದ ಯಾವುದೇ ಪರಿಹಾರ ಸಿಗದೇ ನಾಳೆ 8.12.2025 ಸೋಮವಾರದಿಂದ ರಿಂದ ಅನಿದಿಷ್ಟಾವಧಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲು ರೈತ ಸಂಘ ನಿರ್ಧರಿಸಿತ್ತು .
ಇದನ್ನು ಮನ ಗಂಡ ರಾಜ್ಯ ಸರ್ಕಾರವು ಇಂದು ಸಾಯಂಕಾಲ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಪ್ರತಿ ರೈತರಿಂದ ಸರ್ಕಾರ ಬೆಂಬಲ ಬೆಲೆ 2400 ರಂತೆ ಸುಮಾರು 50 ಕ್ವಿಂಟಲ್ ಮೆಕ್ಕೆಜೋಳನ್ನು ಖರೀದಿ ಮಾಡಬೇಕೆಂದು ಆದೇಶದ ಹೊರಡಿಸಿದ್ದಾರೆ ಇದು ಸಂತೋಷದ ಸುದ್ದಿ ರೈತರ ಸತತ ಹೋರಾಟದಿಂದ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದ್ದು ರೈತರಲ್ಲಿ ಸಂತಸ ತಂದಿದೆ ನಾಳೆ ನಡೆಯಬೇಕಿದ್ದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದನ್ನು ಮೊಟಕುಗೊಳಿಸಿ ತಕ್ಷಣದಲ್ಲಿ ರೈತರ ಸಮಸ್ಯೆಗೆ ರಾಜ್ಯ ಸರ್ಕಾರ ಪರಿಹಾರ ನೀಡಿದೆ ಆದರೆ ಸರ್ಕಾರವು ವರದಾ .
ಬೆಡ್ತಿ ನದಿ ಜೋಡಣೆ ಹಾಗೂ ರೈತರಿಗೆ ನೀಡುತ್ತಿದ್ದ ವಿದ್ಯುತ್ ಸಬ್ಸಿಡಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಕೂಡಲೇ ಮನಗಂಡು ಎರಡು ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಮೊದಲು ನಿಗದಿಪಡಿಸಿದ ದರದಂತೆಯೇ ರೈತರಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಬೇಕು ಮತ್ತು ಎರಡು ಸಮಸ್ಯೆಗಳನ್ನು ಬಗೆಹರಿಸದೆ ಇದ್ದರೆ ಬೆಳಗಾವನಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮತ್ತೆ ರೃತರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಹೃತ್ಪೂರ್ವಕವಾದ ಧನ್ಯವಾದಗಳು. ರೈತ ಸಂಘದ ಚಳುವಳಿಗೆ ಬೆಂಬಲಿಸಿ ಈ ಯಶಸ್ವಿಗೆ ಸಹಕರಿಸಿದ ಎಲ್ಲಾ ಹಸಿರು ಸೇನೆ ರೈತ ಸಂಘದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರುಗಳು ಸದಸ್ಯರುಗಳು .
ರಾಜ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸ್ ಇಲಾಖೆಯವರು ಮತ್ತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮಠಾಧೀಶರು. ವಿವಿಧ ಪುರುಷ ಮತ್ತು ಮಹಿಳಾ ಸಂಘಟನೆಯವರು. ಮಾಧ್ಯಮ ಮಿತ್ರರದವರು. ಕೊಬ್ಬರಿ ಉರಿ ಮಾಲೀಕರು ಮತ್ತು ಅಭಿಮಾನಿಗಳು. ಜಿಲ್ಲೆಯ ತಾಲೂಕುಗಳ ನ್ಯಾಯವಾದಿಗಳು. ವೈದ್ಯರುಗಳು. ನಿವೃತ್ತ ನೌಕರರು. ಮಾಜಿ ಸೈನಿಕರು. ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಬೆಂಬಲಿಸಿದೆ ಎಲ್ಲಾ ರಾಜಕೀಯ ಪಕ್ಷಗಳು. ಗುಪ್ತಚರ ಇಲಾಖೆಯವರು ಹಾಗೂ ಸಮಸ್ತ ರೈತ ಬಾಂಧವರು ರೈತ ಅಭಿಮಾನಿಗಳು ಮುಂದಿನ ದಿನಗಳಲ್ಲಿ ರೈತ ಸಂಕಷ್ಟದಲ್ಲಿರುವಾಗ ಇದೇ ರೀತಿ ನೆರವಿಗೆ ಬಂದು ನಮ್ಮ ಚಳುವಳಿಗೆ ಸಹಕರಿಸಿ ಎಂದು ಹೃತ್ಪೂರ್ವಕವಾಗಿ ಧನ್ಯವಾದಗಳು ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರುದ್ರಗೌಡ ಕಾಡನ ಗೌಡ್ರು, ಜಾನ್ ಪುನೀತ, ಅನೇಕ ರೈತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 