ಶೇಂಗಾ ಉತ್ಪಾದನೆ, ಶೇಂಗಾ ಬೆಲೆ ಕುಸಿದ ಕಾರಣದಿಂದ ರೈತರಲ್ಲಿ ನಿರಾಶೆ

ಶೇಂಗಾ ಉತ್ಪಾದನೆ, ಶೇಂಗಾ ಬೆಲೆ ಕುಸಿದ ಕಾರಣದಿಂದ ರೈತರಲ್ಲಿ ನಿರಾಶೆ Farmers disappointed due to drop in peanut production and prices

ಶೇಂಗಾ ಉತ್ಪಾದನೆ, ಶೇಂಗಾ ಬೆಲೆ ಕುಸಿದ ಕಾರಣದಿಂದ ರೈತರಲ್ಲಿ ನಿರಾಶೆ 

ಮಾಂಜರಿ, 26 : ಪ್ರಸಕ್ತ ಸಾಲಿನಲ್ಲಿ ಬಂದೆರಗಿದ ಪ್ರವಾಹದಿಂದಾಗಿ ಹಾಗೂ ಹವಾಮಾನ ವೈಫಲ್ಯದಿಂದಾಗಿ ಶೇಂಗಾ ಉತ್ಪಾದನೆ ಶೇ.10 ರಿಂದ 15ರಷ್ಟು ಕುಸಿದಿದ್ದು ಕಳೆದ 8-10 ದಿನಗಳಿಂದ ಶೇಂಗಾ ತೆಗೆಯವ ಕಾರ್ಯ ಗಡಿ ಗ್ರಾಮಗಳಲ್ಲಿ ಚುರುಕುಗೊಂಡಿದೆ. ಈ ನಡುವೆ ಬೆಲೆ ಕೂಡ ಕುಸಿದಿದ್ದರಿಂದ ರೈತರಲ್ಲಿ ನಿರಾಶೆ ಮೂಡಿಸಿದೆ. ಪ್ರಸಕ್ತ ಸಾಲಿನಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ 5,300 ಹಾಗೂ ನಿಪ್ಪಾಣಿ ತಾಲೂಕಿನಲ್ಲಿ 4,800 ಹೀಗೆ ಒಟ್ಟು 10,100 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯುವ ಗುರಿ ಹೊಂದಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಪಂಚ ನದಿಗಳಿಗೆ ಪ್ರವಾಹ ಬಂದಿದ್ದರಿಂದ ಸುಮಾರು 1800 ಹೆಕ್ಟೇರ್ ಶೇಂಗಾ ಬೆಳೆ ನಾಶವಾಗಿದೆ. ಕಳೆದ ಸಾಲಿನಲ್ಲಿ ಶೇಂಗಾ ಸರಾಸರಿ 55 ರಿಂದ 65 ರೂ. ಪ್ರತಿ ಕಿಲೋಗೆ ಮಾರಾಟವಾಗಿತ್ತು. ಈ ವರ್ಷದ 40 52 ರೂ. ಹಂಗಾಮಿನಲ್ಲಿ ಸರಾಗುತ್ತಿದೆ ರೈತದ ರ ಮಾರಾಟ ಮಾಡಲು ಮುಂದಾಗಿದ್ದು ಪ್ರಸಕ್ತ ಸಾಲಿನಲ್ಲಿ ಶೇಂಗಾ ಉತ್ಪಾದನೆ ಜೊತೆಗೆ ಬೆಲೆಯೂ ಕುಸಿದಿದ್ದರಿಂದ ಉತ್ಪಾದಕರಲ್ಲಿ ನಿರಾಶೆ ಮೂಡಿಸಿದೆ. ಪ್ರತಿ ಎಕರೆ 5ರಿಂದ 8 ಕ್ವಿಂಟಾಲ್ ಶೇಂಗಾಉತ್ಪಾದನೆಯಾಗಿದ್ದು ಇಳುವರಿಯೂ ಕಡೆಮೆಯಾಗಿದೆ. ಶೇಂಗಾ ತೆಗೆಯುವ ಸಂದರ್ಭದಲ್ಲಿ ಜಿಟಿಜಿಟಿ ಮಳೆ ಅಡ್ಡಿ ಮಾಡುತ್ತಿದೆ. ತೆಗೆದ ಶೇಂಗಾ ಒಣಗುತ್ತಿ ಒಣಗುತ್ತಿಲ್ಲ. ಇದರಿಂದಾಗಿ ರೈತರು ಕೈಚಲ್ಲಿ ಕುಳಿತಿದ್ದಾರೆ. ಸಾಮಾನ್ಯವಾಗಿ ಶೇಂಗಾ ಬೆಳೆಯ ಬೆಳೆಯನ್ನು ಮೇ.15ರಿಂದ ಜೂನ್ 15ರವರೆಗೆ ನಾಟ ಮಾಡುತ್ತಾರೆ. ಕಳೆದ ಸಾಲಿನಲ್ಲಿ ಪ್ರತಿ ಎಕರೆಗೆಸರಾಸರಿ 10 ಕ್ವಿಂಟಾಲ್ ಶೇಂಗಾ ಬೆಳೆ ಉತ್ಪಾದನೆಯಾಗಬೇಕಿತ್ತು. ಆದರೆ ಈ ಸಾಲಿನಲ್ಲಿ ಹವಾಮಾನ ವೈಫಲ್ಯದಿಂದಾಗಿ ಎಕರೆಗೆ ಸರಾಸರಿ 5 ರಿಂದ 8 ಕ್ವಿಂಟಲ್ ಮಾತ್ರ ಉತ್ಪಾದನೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಉತ್ಪಾದನೆ ಕುಸಿದಿದ್ದು ಬೆಲೆ ಹೆಚ್ಚಾಗಬೇಕಿದೆ ಎನ್ನುತ್ತಾರೆ ರೈತರು. ಗಡಿಭಾಗದಲ್ಲಿ ಕಬ್ಬು ಮತ್ತು ಸೋಯಾ ಬೆಳೆಯ ನಂತರ 3ನೇ ಸ್ಥಾನದಲ್ಲಿ ಶೇಂಗಾ ಕಾರ್ಮಿಕರು, ಬೆಳೆಯುತ್ತಾರೆ. ಈ ಬೆಳೆಯು 90 ರಿಂದ 100 ದಿನಗಳಲ್ಲಿ ಬರುತ್ತದೆ. ಸೆಪ್ಟೆಂಬರ ತಿಂಗಳಲ್ಲಿ ರೈತರ ಕೈಯಲ್ಲಿ ದುಡ್ಡು ಬರುತ್ತದೆ. ಈ ಬಾರಿ ಉತ್ಪಾದನೆ ಹೆಚ್ಚಿಗೆ ಆಗಬಹುದೆಂಬ ನೀರೀಕ್ಷೆ ರೈತರಲ್ಲಿತ್ತು. ಆದರೆ ಪ್ರವಾಹದಿಂದ ಶೇ.15ರಷ್ಟು ಬೆಳೆ ನಾಶವಾಗಿದೆ.  ಅಳಿದುಳಿದ್ ಶೇಂಗಾ  ಮಾರಾಟಕ್ಕೆ ರೈತರುಬರುತ್ತಿದ್ದು ವೈಜ್ಞಾನಿಕ ಲೇಗಾಗಿ ಕಾಯುತ್ತಿದ್ದಾರೆ