ಸರಿಯಾಗಿ ವಿದ್ಯುತ್ ಸರಬುರಾಜು ಮಾಡುವಂತೆ ರೈತರಿಂದ ಆಗ್ರಹ
Farmers demand proper electricity supply
ವಿಜಯಪುರ 01 : ತಾಲೂಕಿನ ಬೊಮ್ಮನಹಳ್ಳಿ, ಗುಣಕಿ, ಮಿಂಚನಾಳ, ಡೋಮನಾಳ, ಕನ್ನಾಳ ಗ್ರಾಮದ ರೈತರಿಗೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಾಕಾಗಿದೆ, 2 ವರ್ಷಗಳ ಹಿಂದೆ ಕನ್ನೂರಿನಲ್ಲಿ ಉದ್ಘಾಟನೆ ಆಗಬೇಕಿರುವ 110 ಕೆ.ವಿ ಕೆ.ಇ.ಬಿ ಇನ್ನು ಉದ್ಘಾಟನೆ ಮಾಡದೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಬಾಗದ ಸಾರ್ಚಜನಿಕರಿಗೆ, ರೈತರಿಗೆ , ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಕನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರದ ಗ್ರಾಮೀಣವಲಯದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿ ಶೀಘ್ರದಲ್ಲಿ ಕನ್ನೂರಿನಲ್ಲಿಯ ಹೊಸ ಕೆ.ಇ.ಬಿ ಉದ್ಘಾಟನೆ ಮಾಡಿ ರೈತರ ಜಮೀನುಗಳಿಗೆ 7 ಘಂಟೆ ತ್ರೀಫೇಸ್ ವಿದ್ಯುತ್ ಮತ್ತು ತೋಟದ ಮನೆಗಳಿಗೆ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ವಿತರಣೆ ಮಾಡಬೇಕು. ಈಗ ಪರೀಕ್ಷೇ ಸಮಯವಿರುವುದರಿಂದ ವಿದ್ಯುತ್ ವಿತರಣೆಯಲ್ಲಿ ಚೆಲ್ಲಾಟ ಮಾಡಬಾರದು ಎಂದು ಆಗ್ರಹಿಸಲಾಯಿತು.
ಕೂಡಲೇ ಈ ವಿಷಯವನ್ನು ಗಂಭಿರವೆಂದು ಪರಿಗಣಿಸಿ ಕನ್ನೂರಿನಲ್ಲಿ ಕೆ.ಇ.ಬಿ ಉದ್ಘಾಟನೆ ಮಾಡಬೇಕು, ಇಲ್ಲವಾದಲ್ಲಿ ಮಾರ್ಚ 5 ರಂದು ಸುತ್ತಮುತ್ತಲಿನ ನೂರಾರು ರೈತರೊಂದಿಗೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮನವಿ ಸಲ್ಲಿಸ ಎಚ್ಚ್ರಿಕೆ ನೀಡಲಾಯಿತು.
ಇ ವೇಳೆ ವಿಜಯಪುರ ತಾಲೂಕಾ ಉಪಾರ್ಧಯಕ್ಷರಾದ ಸತೀಶ ದಾಶ್ಯಾಳ, ಮಾಂತಗೌಡ ಬಿರಾದಾರ, ರಾಮನಗೌಡ ಬಿರಾದಾರ, ವಿರೇಶ ಮುರಗುಂಡಿ, ಶ್ತೀನಾಥ ದಾಶ್ಯಾಳ, ಕಾಂತು ಗಾಡವೆ, ಸಿದ್ದರಾಮ ದಾಶ್ಯಾಳ, ಅಶೋಕಗೌಡ ಬಿರಾದಾರ, ಗುರಣ್ಣಗೌಡ ಪಾಟೀಲ, ಗಿರಿಮಲ್ಲ ಕೋನಳ್ಳಿ, ಯಶ್ವಂತ ಬಡಿಗೇರ, ಗುರುಶಾಂತ ಬಬಲೇಶ್ವರ, ದಯವಂತರಾಯ ರೇವಶೆಟ್ಟಿ ಸೇರಿದಂತೆ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 