ಇಂಡಿ ಶಾಸಕರ ಬೆದರಿಕೆಗೆ ರೈತರು ಹೆದರಲ್ಲ: ರವಿಕಾಂತ ಪಾಟೀಲ

ಇಂಡಿ ಶಾಸಕರ ಬೆದರಿಕೆಗೆ ರೈತರು ಹೆದರಲ್ಲ: ರವಿಕಾಂತ ಪಾಟೀಲ Farmers are not afraid of threats from Indi MLAs: Ravikant Patil


ಇಂಡಿ 07: ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ರೈತರಿಗೆ ಹೆದರಿಸಿ ಬೆದರಿಸಿ ಹಾಗೂ ಗುಂಡಾ ವರ್ತನೆ ಮಾಡಿದರೆ ರೈತರು ಹೆದರಲ್ಲ ಎಂದು ಇಂಡಿ ಮತಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ ಅವರು ಹೇಳಿದರು. 

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ರೈತ ಹಸಿರು ಸೇನೆ ಹಾಗೂ ರೈತ ಸಂಘಟನೆಗಳು ಕರೆ ನೀಡಿದ್ದ ಇಂಡಿ ನಗರ ಬಂದ್‌ಗೆ ಬೆಂಬಲಿಸಿ  ಮಾತನಾಡಿದ ಅವರು ರೈತರು ಈ ದೇಶದ ಬೆನ್ನೆಲುಬು ರೈತರಿಂದ ಆಯ್ಕೆಯಾದ ಶಾಸಕರು ನೀವು, ಆದರೆ ರೈತರಿಗೆ ಗೌರವ ಕೊಟ್ಟು ಮಾತನಾಡಬೇಕು ಹೊರತು ನ್ಯಾಯಯುತವಾಗಿ ಹೋರಾಟ ಮಾಡುತ್ತಿರುವ ರೈತರಿಗೆ ನೀವು ರೈತರೇ ಅಲ್ಲ ನಾನು ಹತ್ತು ಸಾವಿರ ರೈತರನ್ನು ಕರೆಸಿ ಕಾರ್ಖಾನೆ ಪ್ರಾರಂಭಿಸಿ ಎಂದು ಹೋರಾಟಗಾರರಿಗೆ ಬೆದರಿಕೆ ಹಾಕುತ್ತೀರಿ ಹಿಂತಾ ಗೊಡ್ಡ ಬೆದರಿಕೆ ರೈತರು ಎಂದೂ ಹೆದರಲ್ಲ, ನೇಪಾಳದಲ್ಲಿ ಆ ದಂಗೆ ಉದಾಹರಣೆಯನ್ನು ತೆಗೆದುಕೊಂಡು ಮಾತನಾಡಿದರು.  

ರೈತರು ದಂಗೆ ಎದ್ದರೆ ಯಾರು ತಾಳಲಾರರು ಎಂದ ಅವರು ನಾನು ರೈತರ ಪರವಾಗಿ ಇರುತ್ತೇನೆ ಹಾಗೂ ನಾನು ಇಂಡಿ ಮತಕ್ಷೇತ್ರದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾದರು ನಾನು ಎಂದು ರೈತರಿಗೆ ಬೈದಿಲ್ಲ ಎಂದು ಹೇಳಿದರು.  

 ಬಿಜೆಪಿ ಮುಖಂಡರಾದ ದಯಸಾಗರ ಪಾಟೀಲ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ ಹಾಗೂ ಬಿ ಡಿ ಪಾಟೀಲ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಎಸ್ ಬಿ ಕೆಂಬೋಗಿ, ಬಿಜೆಪಿ ಇಂಡಿ ತಾಲೂಕು ಘಟಕ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಸೇರಿದಂತೆ ಅನೇಕರು ಮಾತನಾಡಿದರು.  

ಕರ್ನಾಟಕ ರಕ್ಷಣಾ ವೇದಿಕೆಯ ಇಂಡಿ ತಾಲೂಕು ಘಟಕ ಅಧ್ಯಕ್ಷ ಬಾಳು ಮುಳಜಿ ಅವರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಬೆಳಿಗ್ಗೆ ಒಂಬತ್ತು ನಗರದ ಬಸವೇಶ್ವರ ವೃತ್ತದ ಅಂಬೇಡ್ಕರ್ ವೃತ್ತ ಮಾಹಾವೀರ ವೃತ ಟಿಪ್ಪು ಸುಲ್ತಾನ್ ವೃತದ ಮೂಲಕ ಬಸವೇಶ್ವರ ವೃತ್ತದ ಬಳಿ ಟಾಯರಿಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ಮಾಡಿದರು.ಬೆಳಗ್ಗೆ ಒಂಬತ್ತು ಗಂಟೆಗೆಯಿಂದಲೆ ನಗರದಲ್ಲಿ ಸ್ವಯಂ ಪ್ರೇರಿತರಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್‌ಗೆ ಬೆಂಬಲಿಸಿದರು ಹಾಗೂ ಇಂಡಿ ತಾಲೂಕಿನ ಹಳ್ಳಿಗಳಿಂದ ಇಂಡಿ ನಗರಕ್ಕೆ ಬರುವರಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸು ಬಂದ ಆದ ಕಾರಣ ಸ್ವಲ್ಪ ತೊಂದರೆ ಅನುಭವಿಸುವಂತಾಯಿತು.  

 ಪ್ರತಿಭಟನೆಯಲ್ಲಿ ಅನೀಲಗೌಡ ಬಿರಾದಾರ, ಶರಣಗೌಡ ಬಂಡಿ, ಮಲ್ಲಿಕಾರ್ಜುನ ಕಿವಡೆ, ಅನೀಲ ಜಮಾದಾರ, ಬತ್ತು ಸಾಹುಕಾರ, ರಾಮಸಿಂಗ್ ಕನ್ನೊಳ್ಳಿ, ಶಂಕರಗೌಡ ಪಾಟೀಲ, ರಾಜಶೇಖರ ಯರಗಲ್ಲ, ಸಿದ್ದು ತಳವಾರ್, ಶಿವರಾಜ್ ಕೆಂಗನಾಳ, ಸುರೇಶಗೌಡ ಬಿರಾದಾರ, ಶ್ರೀಶೈಲ ಮದರಿ ಸೇರಿದಂತೆ ಸಾವಿರಾರು ರೈತರು ಉಪಸ್ಥಿತರಿದ್ದರು.