ಗಂಭೀರ ಸ್ವರೂಪ ಪಡೆದ ರೈತ ಹೋರಾಟ : ಪೊಲೀಸ್ ಬಸ್, ವಾಹನಗಳ ಮೇಲೆ ಕಲ್ಲು ತೂರಾಟ
Farmers' protest takes serious turn: Stones thrown at police buses, vehicles
ಸಂಕೇಶ್ವರ 07: ಕಬ್ಬಿನ ಬೆಳೆಗೆ 3500 ರೂ. ಬೆಲೆ ನೀಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಧರಣಿ ವೇಳೆ ಪೊಲೀಸ ವಾಹನ ಸೇರಿದಂತೆ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಹುಕ್ಕೇರಿ ತಾಲೂಕಿನ ಹತ್ತರಗಿಯ ಟೋಲ್ ನಾಕಾ ಬಳಿ ಇಂದು ನಡೆದಿದೆ. ಹುಕ್ಕೇರಿ ತಾಲೂಕಿನ ಹತ್ತರಗಿಯ ಟೋಲ್ ನಾಕಾ ಬಳಿಯಲ್ಲಿ ರೈತರು ಜಮಾವಣೆಗೊಂಡು ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಸುತ್ತಿದ್ದರು. ಈ ವೇಳೆಯಲ್ಲಿ ಕೆಲ ಕಿಡಿಗೇಡಿಗಳು ಪೊಲೀಸರ ಹಾಗೂ ಸಾರಿಗೆ ಸಂಸ್ಥೆಯ ಬಸ್ ಗಳು ಹಾಗೂ ಹೊರ ರಾಜ್ಯದಿಂದ ಹೊರಟಿದ್ದ ಕೆಲ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆಲವಾಹನ ಗಾಜು ಪುಡಿ ಪುಡಿಯಾಗಿವೆ. ಅಲ್ಲದೆ ಕೆಲ ವಾಹನಗಳ ಜಖಂಗೊಂಡಿವೆ. ಇದರಿಂದ ಸ್ಥಳದಲ್ಲಿ ಕೆಲಹೊತ್ತು ತ್ವೇಶಮಯ ವಾತಾವರಣ ನಿರ್ಮಾಣವಾಯಿಗಿದೆ. ಇದೇ ವೇಳೆಗೆ ಕೆಲ ರೈತರನ್ನು ಪೊಲೀಸರು ವಶಕೆ ಪಡೆದ ಘಟನೆ ನಡೆಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 