ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ ಪ್ರತಿಭಟನೆ
Farmers' association protests demanding fulfillment of various demands
ಬೆಳಗಾವಿ 30: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಮತ್ತು ರೈತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಧರಣಿಯನ್ನು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಿಸಿದರು.
ಪ್ರಸಕ್ತ ಸಾಲಿನ ಹಂಗಾಮಿನ ಕಬ್ಬಿನ ದರ ಮಹಾರಾಷ್ಟ್ರ ಮಾದರಿಯಂತೆ ಕರ್ನಾಟಕದಲ್ಲೂ ಬಿಲ್ಲ ನಿಗದಿಯಾಗಬೇಕು. ರಾಜ್ಯ ಸರ್ಕಾರ ಕಬ್ಬಿಗೆ ಬೆಲೆ ಘೋಷಿಸಿ, ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಬಸುರ್ತೆ ಗ್ರಾಮದಲ್ಲಿ ಡ್ಯಾಂ ನಿರ್ಮಿಸಲು ಸ್ವಾಧೀನಪಡಿಸಿಕೊಂಡ ಬಸುರ್ತೆ ಮತ್ತು ಅತವಾಡ ಗ್ರಾಮಗಳ ಪ್ರತಿ ಎಕರೆ ಜಮೀನಿಗೆ 2 ಕೋಟಿ ಪರಿಹಾರ ನೀಡಬೇಕು. ಪ್ರತಿ ಟನ್ ಕಬ್ಬಿಗೆ ಯೋಗ್ಯ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿದರು.
ಬೆಳಗಾವಿ ಗ್ರಾಮೀಣ ಭಾಗದ ಉಚಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಸುರ್ತೆಯಲ್ಲಿ ಜಲಾಶಯ ನಿರ್ಮಿಸಲು ಯಾವುದೇ ನೋಟಿಸ್ ಅಥವಾ ಪರಿಹಾರ ನೀಡದೇ ರೈತರ 80 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ರೈತರಿಗೆ ಕೇವಲ 88 ಲಕ್ಷ ಬೇಡ, ಎಕರೆಗೆ 2 ಕೋಟಿ ರೂಪಾಯಿ ನೀಡಬೇಕು. ಅಲ್ಲಿಯವರೆಗೂ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯವುದಿಲ್ಲವೆಂದು ಎಚ್ಚರಿಕೆಯನ್ನು ನೀಡಿದರು.
ಇನ್ನು ನಮಗೆ ಹಣ ಬೇಡ ನಮ್ಮ ಜಮೀನು ನಮಗೆ ಉಳಿಸಿಕೊಡಿ. ಅರಣ್ಯ ಪ್ರದೇಶಗಳಲ್ಲಿ ಡ್ಯಾಂ ನಿರ್ಮಿಸಿ. ಸೂಕ್ತ ಪರಿಹಾರ ನೀಡಿಯೇ ಮಾತ್ರ ಡ್ಯಾಂ ಮಾಡಲೂ ಅವಕಾಶ ಕೊಡುತ್ತೇವೆ. ಇಲ್ಲದಿದ್ದರೇ ಜೀವ ಹೋದರೂ ಡ್ಯಾಂ ನಿರ್ಮಿಸಲು ಬಿಡಲ್ಲ ಎಂದು ಗುಡುಗಿದರು. .ಇನ್ನು ಗುಜರಾತಿಯಲ್ಲಿ 4450, ಮಹಾರಾಷ್ಟ್ರದಲ್ಲಿ 3500ಕ್ಕೂ ಹೆಚ್ಚು ಪ್ರತಿ ಟನ್ ಕಬ್ಬಿಗೆ ಪಾವತಿ ಮಾಡುತ್ತಿರುವಾಗ, ರಾಜ್ಯ ಸರ್ಕಾರ 950 ಕೋಟಿ ಬಿಲ್ ಬಾಕಿ ಇರಿಸಿಕೊಂಡು, ಕರ್ನಾಟಕದ ರೈತರ ಮೇಲೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಅವರು ಯಾವುದೇ ಸಚಿವರು ಶಾಸಕರು ಈ ಕುರಿತು ಒಂದು ಮಾತು ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು, ಬಸುರ್ತೆ ಚೆಕ್’ಡ್ಯಾಂ ಕುರಿತು ನಾಳೆ ಗ್ರಾಮಸ್ಥರೊಂದಿಗೆ ವಿಶೇಷ ಸಭೆ ನಡೆಸಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆಯನ್ನು ನೀಡಿದರು.
ರಾಜ್ಯಾಧ್ಯಕ್ಷ ಸುರೇಶ ಪರಗಣ್ಣವರ, ರಾಜ್ಯ ಗೌರವಾಧ್ಯಕ್ಷ ರಾಘವೇಂದ್ರ ನಾಯಿಕ, ರಾಜ್ಯ ಕಾರ್ಯಾಧ್ಯಕ್ಷ ಅಭಿನಂದನ ಚೌಗುಲೆ, ರಾಜ್ಯ ಮಹಿಳಾ ಕಾರ್ಯದರ್ಶಿ ಶಕುಂತಲಾ ತೇಲಿ, ಜಿಲ್ಲಾ ಗೌರವಾಧ್ಯಕ್ಷ ವಜೀರ್ಪ ಬಂಬರಗಿ, ಜಿಲ್ಲಾಧ್ಯಕ್ಷ ಅಡಿವೆಪ್ಪ ಕಮತಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರತಿ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಸಣ್ಣಪ್ಪ ಸನದಿ, ರಾಜ್ಯ ಸಂಚಾಲಕ ರಮೇಶ ವಾಲಿ ಸೇರಿದಂತೆ ಕಬ್ಬು ಬೆಳೆಗಾರರು ಮತ್ತು ಬಸುರ್ತೆ ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 