ಹಸಿರು ಸೇನೆ ವತಿಯಿಂದ ರೈತರ ದಿನಾಚರಣೆ
Farmers' Day celebrated by the Green Army
ಹೊಸಪೆಟೆ 23: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ್ಣ) ವತಿಯಿಂದ ರೈತ ದಿನಾಚರಣೆಯನ್ನು ಹೊಸಪೇಟೆ ನಗರದ ಗಾಂಧಿಚೌಕ್‌ನಲ್ಲಿ ರೈತರೊಂದಿಗೆ ಆಚರಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಚೌದ್ರಿಚರಣ್ ಸಿಂಗ್ ಅವರು ಹುಟ್ಟಿದ ದಿನದಂದು ರೈತರ ದಿನಾಚರಣೆ ಅಂಗವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಟಿ.ನಾಗರಾಜ್ ಅವರು ಮಾತನಾಡಿ ಯಾವುದೇ ಸರ್ಕಾರ ಬಂದಲ್ಲಿ ರೈತರಿಗೆ ಅನಾನುಕೂಲಗಳೇ ಹೆಚ್ಚು.
ರೈತರ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುವುದು ಬಹಳಷ್ಟು ಕಡಿಮೆ. ಆದ್ದರಿಂದ ಮುಂದಿನ 2028ರ ಚುನಾವಣೆಯಲ್ಲಿ ರೈತರೇ ಅಧಿಕಾರಕ್ಕೆ ಬಂದಲ್ಲಿ ರೈತರಿಗೆ ಆಗುವ ತೊಂದರೆಗಳನ್ನು ತಪ್ಪಿಸಬಹುದು ಮತ್ತು ಸ್ಥಳಿಯ ಸಕ್ಕರೆ ಕಾರ್ಖಾನೆಯು 8-9 ವರ್ಷಗಳಿಂದ ಮುಚ್ಚಿದ್ದು, ಶಾಸಕರಿಗೂ, ಸಚಿವರಿಗೂ ಮತ್ತು ಮುಖ್ಯಮಂತ್ರಿಯವರಿಗೂ ಬಹಳಷ್ಟು ಬಾರಿ ಮನವಿ ಪತ್ರ ಸಲ್ಲಿಸಿದರು ಸಹ ಇಲ್ಲಿಯವರೆಗೂ ಯಾವುದೇ ಪ್ರಯೋಜನೆ ಆಗಿರುವುದಿಲ್ಲ. ಆದರೆ ಒಂದು ಟನ್ ಕಬ್ಬಿಗೆ ರೂ.800/- ರಿಂದ ರೂ.1000/- ನಷ್ಟವನ್ನು ಅನುಭವಿಸುತ್ತಿದ್ದು, ಸುಮಾರು 120 ರಿಂದ 180ಕಿ.ಮೀ ವರೆಗೆ ಕಬ್ಬು ಸಾಗಾಟ ಮಾಡುತ್ತಿರುವುದು ಇಲ್ಲಿನ ರೈತರಿಗೆ ಬಹಳಷ್ಟು ಆರ್ಥಿಕ ಹೊರೆಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಿಯ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷರಾದ ಸಣ್ಣಕ್ಕಿ ರುದ್ರ್ಪ ಮಾತನಾಡಿ ಚೌದ್ರಿ ಚರಣ್ ಸಿಂಗ್ 5ನೇ ಪ್ರಧಾನ ಮಂತ್ರಿಯಾಗಿ ರೈತರ ಪರವಾಗಿ ಅನೇಕ ರೀತಿಯ ಸೌಕರ್ಯಗಳನ್ನು ಕಲ್ಪಿಸಿದ್ದರು. ಮತ್ತು ಕೃಷಿಯಲ್ಲಿ ತುಂಬಾ ಬದಲಾವಣೆ ತರುವಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕೃಷಿಜಮೀನ್‌ದಾರ್ ಪದ್ದತಿ ಮತ್ತು ಜೀತದಾಳು ಪದ್ದತಿಯನ್ನು ಹೋಗಲಾಡಿಸುವುದರಲ್ಲಿ ಯಶಸ್ಸನ್ನು ಕಂಡವರು. ಇವರು ಮೂಲತಃ ರೈತ ಕುಟುಂಬದಿಂದ ಬಂದವರಾಗಿದ್ದು ಕಾಂಗ್ರೆಸ್ ಪಕ್ಷದಲ್ಲಿ ಇದ್ದು, ನೆಹರು ಅವರಿಂದ ಸ್ವ-ಪಕ್ಷದಲ್ಲಿಯೇ ಬಿನ್ನಮತ ಮೂಡಿದಾಗ ಜನತಾ ಪರಿವಾರ ಪಕ್ಷವನ್ನು ಸೇರಿಕೊಂಡು ಪ್ರಧಾನ ಮಂತ್ರಿಯಾಗಿ, ಉಪಮಂತ್ರಿಯಾಗಿ, ಹಣಕಾಸು ಸಚಿವರಾಗಿ, ಕಾರ್ಯನಿರ್ವಹಿಸಿದ ಕೀರ್ತಿ ಇವರದು.
ಸ್ಥಳಿಯ ತಾಲೂಕು ಆಡಳಿತದಲ್ಲಿ ರೈತರ ಹಲವಾರು ಸಮಸ್ಯೆ ಅಂತ ಬಂದಲ್ಲಿ ಅಧಿಕಾರಿಗಳಿಂದ ಕೆಲಸಗಳು ಆಗುವುದಿಲ್ಲ. ಪದೇ ಪದೇ ತಿರುಗಾಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಪೋನ್ ಮಾಡಿದಾಗ ಸಂಪರ್ಕದಲ್ಲಿ ಸಿಗುವುದಿಲ್ಲ.
ಕೆ.ಇ.ಬಿ. ಅಧಿಕಾರಿಗಳು ನಿರ್ಲಕ್ಷ ವಹಿಸಿ 60-70ವರ್ಷಗಳಿಂದ ರೈತರ ಹೊಲ, ಗದ್ದಗೆಗಳಿಗೆ ಹಾಕಿದ ಹಳೇ ವಿದ್ಯುತ್ ತಂತಿಗಳನ್ನು ಬದಲಾಯಿಸದೇ ಇರುತ್ತಾರೆ. ಇದರ ಬಗ್ಗೆ ಇಂದನ ಸಚಿವರಾದ ಕೆ.ಜೆ.ಜಾರ್ಜ್ ಅವರಿಗೆ ಮನವಿ ಪತ್ರ ಕೊಟ್ಟರು ಸಹ ಯಾವುದೇ ಕ್ರಮವಹಿಸಿರುವುದಿಲ್ಲ.
ಜಿಲ್ಲಾ ಕಾರ್ಯಧ್ಯಕ್ಷರಾದ ಎಂ.ಜಡಿಯಪ್ಪ ಮಾತನಾಡಿ ತಾಲೂಕು ಪಂಚಾಯಿತಿಯಲ್ಲಿ ಬರುವಂತಹ ರೈತರಿಗೆ ಸರ್ಕಾರಿ ಸೌಲಭ್ಯಗಳ ಯಾವುದೇ ಮಾಹಿತಿ ಇಲ್ಲದೇ ಕೊರಗುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪಿ.ಡಿ.ಓ. ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಬರುವಂತಹ ಸರ್ಕಾರದ ಸೌಲತ್ತುಗಳನ್ನು ರೈತರಿಗೆ ಸಮಪರ್ಕಕವಾಗಿ ನೀಡಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಮಾತನಾಡಿ ರೈತರಿಗೆ ಬೇಕಾಗುವ ಸೌಲಭ್ಯಗಳನ್ನು ಪಡೆಯುವ ಸಂದರ್ಭದಲ್ಲಿ ನಮ್ಮ ಕಛೇರಿಗೆ ನೇರವಾಗಿ ಆಗಮಿಸಿ ಸೌಲಭ್ಯಗಳ ಮಾಹಿತಿ ಪಡೆದು ತಮ್ಮ ಕುಂದು ಕೊರತೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂದು ಮಾತನಾಡಿದರು.
ಎಕ್ಸಿಕ್ಯೂಟಿವ್ ಇಂಜಿನಿಯರ್ ಮಾತನಾಡಿ ಈಗಾಗಲೆ ಹಳೆ ವಿದ್ಯುತ್ ತಂತಿಗಳ ಬದಲಾವಣೆ ಮಾಡಲು ಸರ್ಕಾರ ಸಮ್ಮತಿಸಿದ್ದು ಆದಷ್ಟು ಬೇಗನೆ ವಿದ್ಯುತ್ ತಂತಿಗಳ ಬದಲಾವಣೆ ಮಾಡುತ್ತೇವೆ ಮತ್ತು 24 ಗಂಟೆಯೊಳಗೆ ಟಿ.ಸಿ.ಬದಲಾವಣೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಖಾಜಾ ನಿಯಾಜ್, ಜಹಿರುದ್ದೀನ್, ಪದಾಧಿಕಾರಿಗಳಾದ ಟಿ.ನಾಗರಾಜ, ಸಣ್ಣಕ್ಕಿ ರುದ್ರ್ಪ, ಎಂ.ಜಡಿಯಪ್ಪ, ಆರ್.ಆರ್.ತಾಯಪ್ಪ, ವಿ.ಗಾಳೆಪ್ಪ, ಅಂಕ್ಲೇಶ್, ಬಸವರಾಜ, ಸುರೇಶ, ವೀರೇಶ್, ರಾಮಾಂಜಿನಿ, ಪಿ.ಕೆ.ಹಳ್ಳಿ ರಾಜಶೇಖರ, ಭುವನಹಳ್ಳಿ ಗೋವಿಂದಪ್ಪ, ಮತ್ತು ಅಧಿಕಾರಿಗಳಾದ ದಯಾನಂದ ಎ.ಇ.ಇ, ಕೃಷಿ ಸಹಾಯಕ ನಿರ್ದೇಶಕರು ಮನೋಹರ್ ಗೌಡ, ತೋಟಗಾರಿಕೆ ಸಹಾಯಕ ನಿರ್ದೇಶಕರು ರಮೇಶ್, ತಾಲೂಕು ಪಂಚಾಯಿತಿ ಇ.ಓ ಮತ್ತು ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 