ರೈತ ದಿನಾಚರಣೆ
Farmer's Day
ಗದಗ 23: ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ವತಿಯಿಂದ “ರೈತ ದಿನಾಚರಣೆ” ಕಾರ್ಯಕ್ರಮವನ್ನು ಏರಿ್ಡಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಕುಮಾರ ಎಸ್, ನಿರ್ದೇಶಕರು, ಎಸ್.ಬಿ.ಐ-ಎ.ಎಸ್.ಎಫ್ ಆರ್.ಸೆ.ಟಿ., ಹುಲಕೋಟಿ ಇವರು ನೆರವೇರಿಸಿ, ರೈತ ರಿಟೇಲ್ ದರದಲ್ಲಿ ಕೃಷಿಗೆ ಬೇಕಾದ ಸಾಮಾಗ್ರಿಗಳನ್ನು ತಂದು ಹೊಲ್ ಸೇಲ್ ದರದಲ್ಲಿ ಮಾರುವುದು ವಿಪರ್ಯಾಸ, ಹೀಗಾಗಿ ರೈತ ಬೆಳೆದ ಬೆಳೆಗಳಿಗೆ ರೈತನೇ ಬೆಲೆ ನಿಗದಿಪಡಿಸುವಂತಾಗಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಎಸ್.ಕೆ. ಮುದ್ಲಾಪೂರ, ದೇಸಿ ಫೆಸಿಲಿಟೆಟರ್ ಹಾಗೂ ಕೆವಿಕೆ ವಿಶ್ರಾಂತ ವಿಜ್ಞಾನಿಗಳು ಮಾತನಾಡಿ ಕೃಷಿ ನಡೆದುಬಂದ ದಾರಿ, ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ, ಆವಿಷ್ಕಾರಗಳು ಹಾಗು ರೈತರು ಅನುಭವಿಸುತ್ತಿರುವ ತೊಂದರೆಗಳ ಕುರಿತು ಮಾತನಾಡಿ, ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಯಶಸ್ವಿ ರೈತರಾಗಬೇಕು ಎಂದು ಸಲಹೆ ನೀಡಿದರು. ರೈತ ದಿನಾಚರಣೆಯ ಅಂಗವಾಗಿ ಕೃಷಿಯಲ್ಲಿ ಸಾಧನೆ ಮಾಡಿದ ಐದು ಜನ ಪ್ರಗತಿಪರ ರೈತ ಹಾಗೂ ರೈತ ಮಹಿಳೆಯರಿಗೆ ಕೃಷಿ ವಿಜ್ಞಾನ ಕೇಂದ್ರದಿಂದ ಸನ್ಮಾನಿಸಲಾಯಿತು.
ಕೃಷಿ ಪಂಡಿತ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿ ಮಹಿಳೆ ಶ್ರೀಮತಿ ಸುಧಾ ಬೇವಿನಮರದ ಇವರು 'ಗದಗ ಜಿಲ್ಲೆಗೆ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಒಂದು ವರದಾನವಾಗಿದೆ. ಇದು ರೈತರ ಏಳ್ಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತ್ತಲಿದೆ. ಇದರ ಸದುಪಯೋಗ ಪಡೆದುಕೊಂಡ ಫಲವಾಗಿ ಕೃಷಿಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಹೀಗಾಗಿ ಇದರ ಸದುಪಯೋಗವನ್ನು ರೈತರೆಲ್ಲರೂ ಪಡೆದುಕೊಂಡು ಆರ್ಥಿಕ ಪ್ರಗತಿಯನ್ನು ಹೊಂದಬೇಕು' ಎಂದು ಹೇಳಿದರು.
ಇನ್ನೋರ್ವ ಸನ್ಮಾನಿತ ಕೋಟುಮಚಗಿ ಗ್ರಾಮದ ಸಾವಯವ ಕೃಷಿಕ??? ವಿದ್ಯಾಧರ ರಮಣಿ ಇವರು ಮಾತನಾಡಿ ರೈತರು ಸಾವಯವ ಕೃಷಿ ಅಳವಡಿಸಿಕೊಳ್ಳಲು ಗದಗ ಜಿಲ್ಲೆಯಲ್ಲಿ ಕೆವಿಕೆಯ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬೇಕೆಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ವಿ.ಕೆ ಹುಲಕೋಟಿಯ ಮುಖ್ಯಸ್ಥೆ ಡಾ. ಸುಧಾ ಮಂಕಣಿ ಮಾತನಾಡಿ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ, ಸಾವಯವ ಹಾಗೂ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು, ಹಾಳಾಗುತ್ತಿರುವ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಬೇಕು. ಉತ್ತಮ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಕೇಂದ್ರ ಸಚಿವರಾದ ಮಾನ್ಯ ಶ್ರೀ ಶಿವರಾಜ ಸಿಂಗ ಚವ್ಹಾಣ ಇವರು ರೈತ ದಿನಾಚರಣೆ ಹಾಗೂ ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯ ಬಗ್ಗೆ ಮಾತನಾಡಿದ್ದನ್ನು ನೇರ ಪ್ರಸಾರದ ಮೂಲಕ ರೈತರಿಗೆ ತೋರಿಸಲಾಯಿತು. ಜೊತೆಗೆ ರೈತರಿಗೆ ವಿಕಸಿತ ಭಾರತ ಹಿ ಉದ್ಯೋಗ ಮತ್ತುಜೀವನೋಪಾಯ ಗ್ಯಾರಂಟಿ ಮಿಷನ್ (ಗ್ರಾಮೀಣ) ಕಾಯ್ದೆ, 2025 ಇದರ ಬಗ್ಗೆ ಸಿದ್ಧಪಡಿಸಿದ ಹಸ್ತಪ್ರತಿಯನ್ನು ವಿತರಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಎನ್.ಎಚ್. ಭಂಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಮಂಜುಪ್ರಕಾಶ ಪಾಟೀಲ ಕಾರ್ಯಕ್ರಮ ನಿರೂಪಿಸಿದು, ಡಾ. ವಿನಾಯಕ ನಿರಂಜನ ಇವರು ಅತಿಥಿಗಳನ್ನು ಸ್ವಾಗತಿಸಿದರು, ಡಾ. ಚೇತನ್ ಬಾಬು ಆರ್.ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ರಮೇಶ ನಾಯಕ, ಸಹಾಯಕ ಕೃಷಿ ನಿರ್ದೇಶಕರು, ಗದಗ, ಪ್ರಗತಿಪರ ರೈತರಾದ ಶಂಕರಗೌಡ ಪಾಟೀಲ ಹಾಗೂ ಶೇಕರ್ಪ ಟಾಕರ್ಪ ಲಮಾಣಿ, ದೇಸಿ ಶಿಬಿರಾರ್ಥಿಗಳು, ಹಾಗೂ 147 ಜನ ರೈತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 