ಜಾತ್ರೆ, ಉತ್ಸವಗಳು ಸಂಸ್ಕೃತಿಯ ಬೇರುಗಳು : ವಿದ್ಯಾಧರ ಸವದಿ
Fairs, festivals are the roots of culture: Vidyadhar Savadi
ರಬಕವಿ-ಬನಹಟ್ಟಿ 12 : ಸನಾತನ ಹಿಂದೂ ಧರ್ಮದಲ್ಲಿ ಜಾತ್ರೆ, ಉತ್ಸವಗಳು ಮಹತ್ವದ್ದಾಗಿವೆ. ಭಾರತೀಯ ಸಂಸ್ಕೃತಿ, ಸಂಸ್ಕಾರಗಳ ಮೂಲಬೇರುಗಳಂತಿರುವ ಉತ್ಸವ, ಜಾತ್ರೆಗಳು ಪರಸ್ಪರಲ್ಲಿ ಐಕ್ಯತೆ, ಬಾಂಧವ್ಯ ಗಟ್ಟಿಗೊಳಿಸವ ಹಾಗೂ ಸಹಕಾರ ಗುಣಗಳನ್ನು ವೃದ್ಧಿಸುತ್ತವೆಂದು ಬಿಜೆಪಿ ಯುವ ಧುರೀಣ ವಿದ್ಯಾಧರ ಸವದಿ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದ ಉದ್ಭವ ಮೂರ್ತಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ನಿಮಿತ್ಯ ಗುರುವಾರ ರಾತ್ರಿ ಗೆಳೆಯರ ಬಳಗ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲೆಗಳು ನಾಡಿನ ಸಾಂಸ್ಕೃತಿಕ ಸಿರಿತನದ ಸಂಕೇತವಾದರೆ, ಕಲಾವಿದರು ಕಲಾದೇವಿಯ ಸುತರಾಗಿದ್ದು, ಅವರನ್ನು ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಜೀವಂತವಾಗಿರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ವೇದಿಕೆಯಲ್ಲಿ ಸೋಮು ಹಿರೇಮಠ, ಗುರು ಮರಡಿಮಠ, ಶಂಕರ ಗುರೂಜಿ, ಹನುಮಂತ ಮಗದುಮ್, ಆನಂದ ಕಂಪು, ಮಹೇಶ ಚಿಂಚಖಂಡಿ, ಬಸವರಾಜ ಗಣಿ, ಗಂಗಪ್ಪ ಅಮ್ಮಲಜೇರಿ, ಸಿದ್ದು ಕಂಚು, ಈರ್ಪ ಕಡಕಬಾವಿ, ಮಂಜು ಕಾಂತಿ, ಕಲ್ಮೇಶ ದೇವದಾಸ, ಪ್ರಕಾಶ ಪಟ್ಟಣಶೆಟ್ಟಿ ಮುಂತಾದವರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 